ಬಾಳೆಹಣ್ಣಿನ ಬೀಜ ಅಕ್ಟೋಬರ್ 2, 2007
Posted by Bala in ಬದುಕು.Tags: banana
add a comment
ಸಾಮಾನ್ಯ ಎಲ್ಲ ಹಣ್ಣಿನಲ್ಲೂ ಬೀಜವಿದ್ದೆ ಇರುತ್ತದೆ, ಆದರೆ ಬಾಳೆಹಣ್ಣಿನಲ್ಲಿ ಬೀಜವಿರುವುದಿಲ್ಲ. ಹೀಗಾಗಿ ಬಾಳೆಹಣ್ಣಿನ ಬೀಜ ಹುಡುಕುತ್ತಾ ಹೊದಾಗ ದೊರೆತ ವಿಶಯವೇ ಈ ಬ್ಲಾಗ್ ನ ವಿಶೇಷ.
ಮಲೇಶಿಯಾದಿಂದ ಕ್ರಿ.ಪೂ. ೬೦೦ ಕ್ಕೆ ಹಿಂದೆಯೆ ಬಾಳೆಹಣ್ಣು ಭಾರತಕ್ಕೆ ಬಂದಿರಬೇಕು. ಬುದ್ಧರ ಪಾಳಿ ಕೃತಿಯಲ್ಲಿ ಪ್ರಥಮ ಬಾರಿಗೆ ಬಾಳೆಹಣ್ಣಿನ ಬಗ್ಗೆ ಬರೆಯಲಾಗಿದೆ. ಕ್ರಿ.ಪೂ. ೩೨೭ ರಲ್ಲಿ ಭಾರತಕ್ಕೆ ಬಂದ ಅಲೆಕ್ಸ್ಯಾಂಡರ್ ನು ಬಾಳೆಹಣ್ಣಿನ ರುಚಿ ನೊಡಿ, ತನ್ನ ದೇಶಕ್ಕೆ ಬಾಳೆಹಣ್ಣನ್ನು ಕೊಂಡೊಯ್ದ ನಂತೆ.
ನನ್ನಂಥ ಸಾಮಾನ್ಯರು ತಿಳಿದಿರುವ ಬಾಳೆಹಣ್ಣಿನ ಗಿಡ, ಇತರ ಹಣ್ಣಿನ ಗಿಡಗಳಂತಲ್ಲ. ಬಾಳೆಹಣ್ಣಿನ ಗಿಡ ಜಗತ್ತಿನ ಅತಿ ದೊಡ್ಡ ಗಿಡಮೂಲಿಕೆ ಸಸ್ಯ. ಈ ಬಗೆಯ ಸಸ್ಯಗಳಿಗೆ ಕಾಂಡ ಮತ್ತು ಎಲೆಗಳಿರುತ್ತದೆ ಆದರೇ ಇವು ಒಮ್ಮೆ ಹಣ್ಣು ಬಿಟ್ಟ ನಂತರ ಬುಡದ ವರೆಗೆ ಸತ್ತು ಹೋಗುತ್ತದೆ. ಅಂದರೆ ಕಾಂಡ ಒಂದು ಬಾಳೆ ಗೊನೆಯನ್ನು ಬಿಟ್ತ ನಂತರ ಬಿದ್ದು ಹೊಗುತ್ತದೆ. ಆದರೆ ಬಾಳೆಗಿಡದ ಬೇರು ಸಾಯುವುದಿಲ್ಲ, ಸ್ವಲ್ಪದಿನದಲ್ಲೇ ಬಾಳೆಗಿಡದ ಬೇರಿನಿಂದ ಹೊಸ ಕಾಂಡ ಎಲೆಗಳು ಮೂಡುತ್ತವೆ. ಈ ಬಾಳೆಹಣ್ಣಿನ ಗಿಡದ ಒಂದು ಸಣ್ಣ ಬೇರಿನಿಂದ ಹೊಸ ಗಿಡಗಳ ಬೇರನ್ನು ತಯಾರಿಸಬಹುದು. ಹೀಗಾಗಿ ಬಾಳೆಹಣ್ಣು ನೈಸರ್ಗಿಕವಾಗಿ ಪರಾಗಸ್ಪರ್ಶವಿಲ್ಲದೇ ಉತ್ಪತ್ತಿಯಾಗುವ ಹಣ್ಣು. ಆದ್ದರಿಂದಲೇ ಬಾಳೆಹಣ್ಣಿಗೆ ಬೀಜವಿರುವುದಿಲ್ಲ.
ಭಾರತ ಇಡೀ ವಿಶ್ವದಲ್ಲೇ ಅತಿ ಹೆಚ್ಚು ಬಾಳೆಹಣ್ಣು ಬೆಳೆಯುವ ದೇಶ. ಬಾಳೆಹಣ್ಣಿನಲ್ಲಿ ದೊರಕುವ ವಿಟಮಿನ್ ಮತ್ತು ಖನಿಜಾಂಶಗಳೆಂದರೆ A, B6, C, ಪೊಟಾಸ್ಸಿಯಂ, ರಂಜಕ, ಮೆಗ್ನೀಶಿಯಂ. ಬಾಳೇಹಣ್ಣಿನ ಕಾಂಡದ ನಾರಿನಿಂದ ಬಟ್ಟೆಗಳನ್ನು ತಯಾರಿಸುತ್ತಾರೆ. ಬಾಳೆಹಣ್ಣು ಬಡವರ ಸೇಬು ಎಂದು ಕರೆಯಬಹುದು. ಮಾಹಿತಿಗಳ ಪ್ರಕಾರ ಒಂದು ಬಾಳೆಹಣ್ಣು ವಿಟಮಿನ್ ಮತ್ತು ಖನಿಜಾಂಶಗಳ ಅಳತೆಯಿಂದ ಒಂದು ಸೇಬಿನಹಣ್ಣಿಗಿಂತ ಉತ್ತಮ. ಆದ್ದರಿಂದಲೇ an apple a day keeps the doctor away ವಾಕ್ಯವನ್ನು ನಾವು ಹೀಗೆ ಬದಲಾಯಿಸಬಹುದು, ದಿನಾ ಓಂದು ಬಾಳೆಹಣ್ಣು ತಿಂದರೆ ನೀವು ವೈದ್ಯರಿಂದ ದೂರವಿರಬಹುದು.