ಹೆಂಡತಿಯ ಭಯ ಫೆಬ್ರವರಿ 3, 2009
Posted by Bala in ಹಾಸ್ಯ, ಹರಟೆ.Tags: ಹೆಂಡತಿಯ ಭಯ
4 comments
ಒಮ್ಮೆ ಒಬ್ಬ ಪೋಲಿಸ್, ಬಹಳ ದೂರ ಅಟ್ಟಿಸಿಕೊಂಡು ಹೋಗಿ ಕಷ್ಟ ಪಟ್ಟು, ತಪ್ಪು ಮಾಡಿದವನ ಕಾರನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿವಂತೆ ಮಾಡುವಲ್ಲಿ ಯಶಸ್ವಿಯಾದ.
ನಂತರ ಪೋಲಿಸ್, ಚಾಲಕನ ಬಳಿ ಬಂದು, “ಅಲ್ಲಯ್ಯ, ನಿನ್ನ ಕಾರಿನ ಹಿಂದಿನ ಲೈಟ್ ಉರಿಯುತ್ತಿಲ್ಲ ಎಂದು ಹೇಳಲು ನಿನ್ನನ್ನು ಹಿಂಬಾಲಿಸಿದೆ, ಅದ್ಯಾಕೆ ನೀನು ನಾನು ಹಿಂದೆ ಬಿದ್ದ ತಕ್ಷಣ ಒಳ್ಳೆ ರಾಕೆಟ್ ಥರ ಕಾರ್ ಓಡಿಸಿಕೊಂಡು ಹೋದೆ?” ಎಂದು ಪ್ರಶ್ನಿಸಿದ.
ಅದಕ್ಕೆ ಚಾಲಕ ಉತ್ತರಿಸಿದ , “ಏನಿಲ್ಲ, ಕಳೆದ ವಾರ ನನ್ನ ಹೆಂಡತಿ ಒಬ್ಬ ಪೋಲಿಸನ ಜೊತೆ ಓಡಿಹೋಗಿದ್ದಳು. ನೀವು ನನ್ನ ಹೆಂಡತಿಯನ್ನು ಮತ್ತೆ ಹಿಂದಿರುಗಿಸಲು ನನ್ನ ಹಿಂದೆ ಬಿದ್ದಿದ್ದೀರಿ ಎಂದು ಭಯವಾಯಿತು. ಅದಕ್ಕೆ…..”