jump to navigation

ಸತ್ಯ ಅಕ್ಟೋಬರ್ 15, 2007

Posted by Bala in ಬದುಕು.
Tags:
2 comments

ಸತ್ಯ ಪದದ ಧಾತು ಸತ್ ಎಂದರೆ ಇರುವುದು ಎಂದರ್ಥ. ಸತ್ಯ ಎಂದರೆ ಯಾವುದು ಅವಿನಾಶಿಯಾಗಿರುವುದೊ ಎಂದರ್ಥ. ಆದರೆ ಸಾಮಾನ್ಯವಾಗಿ ಆಡು ಮಾತಿನಲ್ಲಿ ಸತ್ಯ ಎಂದರೆ ನಿಜ ಹೇಳುವುದು ಅಥವಾ ಸುಳ್ಳನ್ನು  ಹೇಳದಿರುವುದು ಎಂಬ ಅರ್ಥವಿದೆ. ರಾಜ ಹರಿಶ್ಚಂದ್ರ ಸುಳ್ಳು ಹೇಳದೇ ಯಾವಾಗಲೂ ತಾನು ಆಡಿದ ಮಾತಿನಂತೆ ನಡೆದು ಸತ್ಯ ಹರಿಶ್ಚಂದ್ರ ಎಂಬ ಅನ್ವರ್ಥಕನಾಮ ವನ್ನು ಪಡೆದ. ಅದರಿಂದಲೊ ಎನೊ ಸತ್ಯ ಎಂದರೆ ಯಾವಾಗಲೂ ನಿಜವನ್ನು ಮಾತಾಡುವುದು ಅಥವಾ ಸುಳ್ಳು ಹೇಳದೇ ಇರುವುದು ಎಂಬ ಅರ್ಥ ರೂಢಿಯಲ್ಲಿದೆ . ಆದರೆ ಸತ್ಯ ಪದದ ಅರ್ಥ ಬರೀ ನಿಜವನ್ನು ನುಡಿಯುವುದಕ್ಕಿಂತ ಹೆಚ್ಚು. ಒಂದು ಜೀವ ಉಳಿಸುವ ಸಲುವಾಗಿ ಒಂದು ಸುಳ್ಳು ಹೇಳಿದರೇ ಅದರಿಂದ ಎನೂ ನಷ್ಟವಿಲ್ಲ. ಒಮ್ಮೆ ಯುವಕನೊಬ್ಬ ಕಾಡಿನ ದಾರಿಯಲ್ಲಿ ನಡೆಯುತಿದ್ದಾಗ ಒಂದು ಮೊಲ ಆತನ ಮುಂದೆ ಹಾಯ್ದು ಹೊಯಿತು. ಮೊಲದ ಹಿಂದೆಯೆ ಒಬ್ಬ ಬೇಟೆಗಾರ ಕೈಯಲ್ಲಿ ಬಂದೂಕು ಹಿಡಿದು ಬಂದು ಅಲ್ಲಿದ್ದ ಯುವಕನನ್ನು ಇಲ್ಲೊಂದು ಮೊಲ ಬಂತು ಎಲ್ಲಿ ಹೊಯಿತು ನೋಡಿದೆಯಾ ಎಂದು ಕೇಳಿದ. ಈಗ ಯುವಕ ನಿಜ ಹೇಳಿದರೆ ಮೊಲ ಸಾಯುತ್ತದೆ, ಸುಳ್ಳು ಹೇಳಿದರೆ ಮೊಲವನ್ನು ಉಳಿಸಬಹುದು. ಯುವಕ ಸುಳ್ಳು ಹೇಳಿ ಬೇಟೆಗಾರನನ್ನು ತಪ್ಪು ದಾರಿಯಲ್ಲಿ ಕಳಿಸಿದ.

ಸತ್ಯ ಎಂದರೆ ನಿಜ ಎಂದಷ್ಟೇ ಅರ್ಥವಲ್ಲ. ಸುಳ್ಳು ಹೇಳದೇ ಇರುವುದನ್ನು ನಿಜ ಎಂದು ಹೇಳಬಹುದು. ವೇದಾಂತದ ಪ್ರಕಾರ ಯಾವುದು ಈ ಪ್ರಪಂಚದಲ್ಲಿ ಅವಿನಾಶಿಯಾಗಿರುವುದೊ ಅದು ಸತ್ಯ. ಪ್ರಪಂಚದ ಎಲ್ಲಕ್ಕೂ ಮೂಲವಾದ ಮತ್ತು ಅವಿನಾಶಿಯಾದ  ಬ್ರಹ್ಮವೊಂದೆ ಸತ್ಯ ಅದನ್ನು ಹೊರತು ಮಿಕ್ಕೆಲ್ಲವೂ ಮಿಥ್ಯ ಅಂದರೆ ವಿನಾಶವಾಗುವಂತವು. ಬ್ರಹ್ಮನನ್ನು  ಸತ್ +  ಚಿತ್ + ಆನಂದ = ಸಚ್ಚಿದಾನಂದ ಎಂದು ಕರೆಯುತ್ತದೆ ವೇದಾಂತ.