jump to navigation

ಅಮಾಯಕರನ್ನು ಹಿಂಸಿಸುವುದು ನಮ್ಮನ್ನು ನಾವೆ ಹಿಂಸಿಸಿಕೊಂಡಂತೆ ಸೆಪ್ಟೆಂಬರ್ 19, 2008

Posted by Bala in ಬದುಕು.
Tags:
6 comments

If you hurt an innocent person, then you are only hurting yourself, just as dust thrown into a wind is blown back in your face. – Buddha

ಗಾಳಿಗೆ ಧೂಳನ್ನ ತೂರಿದರೆ ಅದು ನಮ್ಮ ಕಣ್ಣನ್ನೇ ಹೊಕ್ಕು ನಮ್ಮನ್ನೇ ನೋಯಿಸುವಂತೆ, ಅಮಾಯಕರನ್ನು ಹಿಂಸಿಸುವುದು ನಮ್ಮನ್ನು ನಾವೇ ಹಿಂಸಿಸಿಕೊಂಡಂತೆ ಎಂಬುದು ಬುದ್ಧನ ಹೇಳಿಕೆ. ಮನುಷ್ಯನಿಗೆ ತಾನು ಜೀವಿಸುವ ಪರಿಸರದೊಂದಿಗೆ ಸಾವಯವ ಸಂಬಂಧವಿರುತ್ತದೆ. ನಮ್ಮಲ್ಲಿ ಉದಿಸುವ ಯೊಚನೆಗಳೇ ಆಗಲೀ ನಾವು ಮಾಡುವ ಪ್ರತಿಯೊಂದು ಕಾರ್ಯವೂ ಕೂಡಾ ಪರಿಸರದ ಮೇಲೆ ಪ್ರಭಾವ ಬೀರುತ್ತದೆ. ಪ್ರತಿಯೊಂದು ಜೀವಿಯ ಆಶೆ ಆಕಾಂಕ್ಷೆಗಳು ಈ ಜಗತ್ತನ್ನು ರೂಪಿಸುತ್ತವೆ. ಈ ಜಗತ್ತು ಇವತ್ತು ಹೇಗಿದೆಯೊ ಅದಕ್ಕೆ ಪ್ರತಿಯೊಂದು ಜೀವಿಯೂ ಕಾರಣ. ಪರಿಸರದಲ್ಲಾಗುವ ಒಂದು ಸಣ್ಣ ಬದಲಾವಣೆ ಕೂಡ ನಮ್ಮನ್ನು ಬದಲಾಯಿಸದೇ ಇರುವುದಿಲ್ಲ. ನಮ್ಮ ಮತ್ತು ಪರಿಸರದ ನಡುವೆ ಇರುವ ಈ ಸಂಬಂಧ ನಮ್ಮ ಅರಿವಿಗೆ ಬರದಿದ್ದರೂ, ನಿರಂತರವಾಗಿ ನಡೆಯುತ್ತಿರುತಲೇ ಇರುತ್ತದೆ. ಒಂದು ಸಣ್ಣ ಉದಾಹರಣೆ ಯೆಂದರೆ, ನಮ್ಮ ಉಸಿರಾಟ ಕ್ರಿಯೆ. ನಾವು ಉಸಿರಾಡುವಾಗ ತೆಗೆದುಕೊಳ್ಲುವ ವಾಯು, ಹೊರ ಪರಿಸರದ ಪ್ರತಿನಿಧಿ. ಹೊರಪರಿಸರದ ಕಣಗಳು ಉಸಿರಿನ ಮೂಲಕ ನಮ್ಮ ದೇಹವನ್ನು ಪ್ರವೇಶಿಸುತ್ತಿರುತ್ತವೆ. ಈ ಕ್ರಿಯೆ ನಿರಂತರವಾಗಿ ಮನುಷ್ಯನನ್ನು ನಿಸರ್ಗದೊಂದಿಗೆ ಬೆಸೆದಿರುತ್ತದೆ. ಮನುಷ್ಯ ಶಕ್ತಿಯ (energy) ಒಂದು ಮುದ್ದೆ ಎಂದು ಇಟ್ಟುಕೊಂಡರೆ, ನಮ್ಮಲ್ಲಿ ಉದಿಸುವ ಯೋಚನೆಗಳು, ನಾವು ಮಾಡುವ ಕಾರ್ಯಗಳು ನಕರಾತ್ಮಕವಾಗಿದ್ದಾಗ, ನಮ್ಮಲ್ಲಿನ ಒಟ್ಟು  ಶಕ್ತಿ ಕಡಿಮೆಯಾಗುತ್ತದೆ, ಇದರಿಂದ ನಮಗೇ ತೊಂದರೆ. ಸಕಾರಾತ್ಮಕ ವಾದ ಆಲೋಚನೆಗಳು, ಕಾರ್ಯಗಳು ನಮ್ಮ ಶಕ್ತಿಯ ಮೊತ್ತವನ್ನು ವೃದ್ದಿ ಗೊಳಿಸುತ್ತವೆ.

ನಮ್ಮನ್ನು ಕಾಡುತ್ತಿರುವ ಪ್ರತಿಯೊಂದು ಸಮಸ್ಯಗೂ ಉತ್ತರವೆಂದರೆ ನಮ್ಮಲ್ಲಾಗಬೇಕಾಗಿರುವ ಬದಲಾವಣೆ. ನಮ್ಮ ಮತ್ತು ಪರಿಸರದ ನಡುವಿನ ಸಂಬಂಧದ ಅರಿವು.

  • ಅನಂತಮೂರ್ತಿಯವರ ಸಬಕೋ ಸನ್ಮತಿ ದೇ ಭಗವಾನ್ ಲೇಖನ