ನೀರು ಜೂನ್ 6, 2009
Posted by Bala in ಕವನ - ಚುಟುಕ.Tags: ನೀರು
2 comments
ಅಂದಿನಿಂದ ಎಂದಿಂದಿಗೂ
ಇರುವುದೊಂದೇ ನೀರು
ಮೇಲೆ ಹೋಗಿ
ಕೆಳಗೆ ಸುರಿದು
ಜೀವವನ್ನು ಪೋಷಿಸುತ್ತಿರುವ
ನೀರು
ಅಂದಿಗೂ ಎಂದಿಗೂ
ಹೆಚ್ ಟು ಓನೇ
ನಮ್ಮ ಪೂರ್ವಜರು
ಬಳಸಿದ ಅದೇ ನೀರನ್ನೇ
ನಾವು ಬಳಸುತ್ತಿರುವುದು
ಸನಾತನ ಪ್ರಾಣಿಯೊಂದು
ಕುಡಿದು ಬಿಟ್ಟ ನೀರನ್ನೇ
ನಾವು ಕುಡಿಯುತ್ತಿರುವುದು
ನಮ್ಮೊಡನಿಲ್ಲದೊಂದು ಗಿಡದೊಳಗೆ
ಅಂದು ಹರಿದ ನೀರೇ
ಇಂದು ನಮ್ಮಲ್ಲೂ ಹರಿಯುತ್ತಿರುವುದು
ಅಂದು ಅಲ್ಲಿದ್ದು
ಎಂದೆಂದಿಗೂ ಇಲ್ಲಿರುವ
ನೀರು ಶಾಶ್ವತ
ಜೀವ ನೆಪಮಾತ್ರ
ಬಟ್ಟೆ ಮತ್ತು ನೀರು ಜೂನ್ 4, 2009
Posted by Bala in ಕವನ - ಚುಟುಕ.Tags: ನೀರು, ಬಟ್ಟೆ
2 comments
ಬಟ್ಟೆ ಶುಭ್ರವಾಗಲು
ನೀರು ಕೊಳೆಯಾಗಬೇಕು
ನಿಜ, ಆದರೆ ಕೊಳೆಯಾದ
ನೀರಿನಲ್ಲಿರುವ ನೀರು
ಆವಿಯಾಗಿ
ಮೋಡವಾಗಿ
ಮಳೆಯಾಗಿ
ಮತ್ತೆ ಬಟ್ಟೆ
ತೊಳೆಯಲು
ಸಜ್ಜಾಗಿದೆ