ಚಿಂತೆಯನ್ನು ತೆಗೆದರೆ ಉಳಿಯುವುದು? ಸೆಪ್ಟೆಂಬರ್ 26, 2008
Posted by Bala in ಬದುಕು.Tags: ಚಿಂತೆ
6 comments
Do things really exist
as we think they do?
When we say
here is a table,
What do we really mean?
If we take away
the table legs
is that still a table?
If we take the top off
is it still a table?
If we take your worries
away are you still you?
-Buddha
ಅಲ್ಲಿರುವ ಮೇಜು, ಮೇಜು ಅನಿಸಿಕೊಳ್ಳಲು ಅದಕ್ಕೆ ನಾಲ್ಕು ಕಾಲಿರಬೇಕು, ನಾಲ್ಕು ಕಾಲಿನ ಮೇಲೆ ಒಂದು ದೊಡ್ಡ ಹಲಗೆ ಇರಬೇಕು. ಆಗಲೇ ಅದನ್ನ ಮೇಜು ಎನ್ನುವುದು. ಎಲ್ಲಾ ವಸ್ತುಗಳು ಮೊದಲು ಉದ್ಭವಿಸುವುದು ನಮ್ಮ ಮನಸ್ಸಿನಲ್ಲಿ. ಈಗ ಮೇಜಿನ ನಾಲ್ಕು ಕಾಲನ್ನ ಕಿತ್ತುಹಾಕಿದರೆ, ಅದು ಮೇಜಾಗೆ ಉಳಿಯುವುದಿಲ್ಲಾ ಹಾಗೆ, ಮೇಲೆ ಹೊದಿಸಿರುವ ಹಲಗೆಯನ್ನು ತೆಗೆದರೆ ಉಳಿಯುವುದನ್ನ ಮೇಜು ಅನ್ನಲಾಗುವುದಿಲ್ಲ. ಅಲ್ಲಿರುವುದು ಸೀಬೇಹಣ್ಣಿನ ಮರ ಅಂದರೆ ಒಂದು ಬಗೆಯ ಹಣ್ಣನ್ನು ಸೀಬೆಹಣ್ಣು ಎಂದು ಕರೆದು, ಯಾವ ಮರ ಸೀಬೇಹಣ್ಣನ್ನು ಬಿಡುತ್ತದೋ ಅದು ಸೀಬೇಹಣ್ಣಿನ ಮರವಾಗುತ್ತದೆ. ಹೀಗೆ ಸೃಷ್ಟಿಯಾದ ಪ್ರಪಂಚದಲ್ಲಿ, ನಾವು ಸದಾ ಆಲೋಚನೆ ಮಾಡುತ್ತಿರುತ್ತೇವೆ. ಈ ಅಲೋಚನೆಗಳು ಮುಂದೆ ಕಾರ್ಯದ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ. ಕಾರ್ಯವು ನಮ್ಮ ಗುಣವಾಗಿ ಬೆಳೆದು, ಗುಣ ನಮ್ಮ ಸ್ವಭಾವವಾಗುತ್ತದೆ. ಈ ಸ್ವಭಾವವೇ ನಾವು ’ನಾನು’ ಎಂದು ಹೇಳಿಕೊಳ್ಳುವಂತಹುದು. ತನ್ನ ನಿಜವಾದ ತನವನ್ನು ಮರೆತು ಸ್ವಭಾವದ ಅಡಿಯಾಳಾದ ಮನಸ್ಸು ಚಿಂತೆಗೊಳಗಾಗಿ ದುಃಖವನ್ನು ಅನುಭವಿಸುತ್ತದೆ.
ಹೇಗೆ ಕಾಲಿಲ್ಲದ ಮೇಜನ್ನ ಮೇಜು ಎನ್ನಲಾಗದೊ, ಹಾಗೆ ನಮ್ಮಲ್ಲಿರುವ ಚಿಂತೆಯನ್ನು ನಮ್ಮಿಂದ ತೆಗೆದುಹಾಕಿದರೆ ನಾನು ನಾನಾಗಿಯೇ ಉಳಿಯುವುದಿಲ್ಲ, ಅಲ್ಲಿ ದುಃಖವೂ ಇರುವುದಿಲ್ಲ.
———————————–
ಚಿಂತಾಯಾಶ್ಚ ಚಿತಾಯಾಶ್ಚ ಬಿಂದುಮಾತ್ರಂ ವಿಶಿಷ್ಯತೆ|
ಚಿತಾ ದಹತಿ ನಿರ್ಜೀವಂ ಚಿಂತಾ ದಹತಿ ಜೀವಿನಮ್||
-ಸುಭಾಷಿತಮಂಜರೀ
ಚಿಂತೆಗೂ ಚಿತೆಗೂ ಒಂದು ಸೊನ್ನೆ ಮಾತ್ರ ವಿಶೇಷ. ಚಿತೆ ಜೀವವಿಲ್ಲದ ಹೆಣವನ್ನು ಮಾತ್ರ ಸುಡುತ್ತದೆ. ಚಿಂತೆಯಾದರೋ ಜೀವವಿರುವವನನ್ನೇ ಸುಡುತ್ತದೆ.