jump to navigation

ಕೋಳಿ ಮೊಟ್ಟೆ ಸೆಪ್ಟೆಂಬರ್ 10, 2007

Posted by Bala in ಬದುಕು.
Tags:
1 comment so far

ಇಲ್ಲಿಯತನಕ, ನನಗೆ ನಾವು ತಿನ್ನಬಹುದಾದ (??) ಕೋಳಿಮೊಟ್ಟೆ ಯಲ್ಲಿ ಕೋಳಿಮರಿಯ ಜೀವವಿರುತ್ತದೆ, ನಾವು ತಿನ್ನುವುದರಿಂದ ಅದನ್ನು ಕೊಂದಂತಾಗುತ್ತದೆ ಎಂಬ ನಂಬಿಕೆಯಿತ್ತು. ಇತ್ತೀಚಿನ ಜ್ಞಾನೋದಯದಿಂದ ತಿಳಿದ ಅಂಶವೆಂದರೆ ಇಷ್ಟು ದಿನ ಇದ್ದ ನನ್ನ ನಂಬಿಕೆ ನಿಜವಲ್ಲ. ಈ ವಿಷಯವನ್ನು ನನ್ನಂತೇ ಇಲ್ಲಿಯವರೆವಿಗೂ ನಂಬಿರುವ ಇತರರಿಗೂ ತಿಳಿಸುವ ಪ್ರಯತ್ನವೇ ಈ ಟಿಪ್ಪಣಿ.

ಹೆಣ್ಣು ಕೋಳಿ ಗರ್ಭದಲ್ಲಿ ಅಂಡಾಣು (ಮೊಟ್ಟೆ) ಅಂಕುರಿಸಿ, ಅದು ಗಂಡು ಕೋಳಿಯ ವೀರ್ಯಾಣು ವಿನೊಂದಿಗೆ ಸಂಯೋಗ ಹೊಂದಿ, ಮುಂದೆ ಈ ಜೀವಕೋಶ ಕೋಳಿ ಮರಿಯಾಗುತ್ತದೆ. ಕೋಳಿ ಮರಿ ಸಂಪೂರ್ಣವಾಗಿ ಬೆಳೆದ ಮೇಲೆ ಹೆಣ್ಣು ಕೋಳಿ ಮೊಟ್ಟೆಯನ್ನು  ಹೊರಹಾಕುತ್ತದೆ. ನಂತರ ಈ ಮೊಟ್ಟೆಯನ್ನು ಕಾವಲು ಕಾಯ್ದು, ಅದಕ್ಕೆ ಕಾವುಕೊಟ್ಟು  ಸ್ವಲ್ಪದಿನದಲ್ಲಿ ಸಣ್ಣ ಕೋಳಿ ಮರಿ ಮೊಟ್ಟೆಯೊಡೆದು ಹೊರಬರುತ್ತದೆ. ಇದು ಎಲ್ಲರಿಗೂ ತಿಳಿದ ವಿಷಯ ಆದರೆ ಮಾರುಕಟ್ಟೆಯಲ್ಲಿ ನಾವು ಕೊಳ್ಳುವ ಮೊಟ್ಟೆ ಮೇಲೆ ವಿವರಿಸಿದ ಮೊಟ್ಟೆಯಲ್ಲ!!

ಹೆಣ್ಣುಕೋಳಿಯ ಅಂಡಾಣವು ತನ್ನ ಋತುಚಕ್ರ ದೊಳಗೆ ಗಂಡುಕೋಳಿಯ ವೀರ್ಯಾಣುವಿನೊಂದಿಗೆ  ಸಂಯೊಗವಾಗದಿದ್ದಾಗ, ಅ ಅಂಡಾಣುವು ತ್ಯಾಜ್ಯ ವಸ್ತುವಾಗಿ ಹೆಣ್ಣು ಕೊಳಿಯಿಂದ ಹೊರಬರುತ್ತದೆ. ನಾವು ಮಾರುಕಟ್ಟೆಯಲ್ಲಿ ಕೋಳ್ಳುವ ಮೊಟ್ಟೆ ಈ ರೀತಿ ಹೊರಬಂದ ತ್ಯಾಜ್ಯ ಅಂಡಾಣು. ಹಾಗಾಗಿ, ಈ ಮೊಟ್ಟೆಯಲ್ಲಿ ಕೋಳಿ ಮರಿ ಹೊರಬರುವ ಯಾವುದೇ ಸಾಧ್ಯತೆಯಿಲ್ಲ. ಓಟ್ಟಾರೆ ಹೇಳಬೇಕೆಂದರೆ ಕೋಳಿ ಮೊಟ್ಟೆ ಒಂದು ನಿರ್ಜೀವ ಜೀವಕೋಶ. ನೀವು ಕೋಳಿಮರಿಕೊಲ್ಲುವ ಪಾಪಕ್ಕೋಸ್ಕರ ಮೊಟ್ಟೆ ತಿನ್ನುವುದಿಲ್ಲವಾದರೆ, ಈಗ ನಿಮ್ಮ ನಿಲುವನ್ನು ಬದಲಿಸಿಕೊಂಡು ಮೊಟ್ಟೆಯನ್ನು ತಿನ್ನಬಹುದೇನೊ. ದಯವಿಟ್ಟು ಚೆನ್ನಾಗಿ ಯೋಚಿಸಿ…