jump to navigation

ಚುಟುಕುಗಳು ಮಾರ್ಚ್ 28, 2008

Posted by Bala in ಕವನ - ಚುಟುಕ.
Tags:
2 comments

ಹನಿ-ಆನೆ

ಪ್ರೀತಿಯಿಂದ ಹೆಂಡತಿಗೆ
ಹನಿ ಎಂದೆ
ಅವಳೆಂದಳು
ಎಲ್ಲಿದೇರೀ ಆನೆ?

ಜಗಳ:

ಹೆಂಡತಿಗೆ ಯಾಕೆ
ನನ್ನ ಮೇಲೆ ಕೋಪ ಎಂದರೆ
ಮೂರು ದಿನ ಆಯ್ತು
ಜಗಳವಾಡಿ ಎಂದಳು

ಮಾರಿ – ಪರಾರಿ

ನಾರಿ ಮುನಿದರೆ
ಮಾರಿ
ಹೆಂಡತಿ ಮುನಿದರೆ
ಗಂಡ ಪರಾರಿ

ಪ್ರೀತಿ ಮಾರ್ಚ್ 12, 2008

Posted by Bala in ಕವನ - ಚುಟುಕ.
Tags: ,
4 comments

ಪ್ರೀತಿಸಿ
ಮದುವೆಯಾಗುವುದಕ್ಕೂ
ಮದುವೆಯಾಗಿ
ಪ್ರೀತಿಸುವುದಕ್ಕೂ
ಏನೂ ವ್ಯತ್ಯಾಸವಿಲ್ಲ
ಒಂದರಲ್ಲಿ ಮೊದಲೇ
ಅರಿವಿದ್ದರೆ
ಇನ್ನೊಂದರಲ್ಲಿ ನಂತರ
ಅರಿವಾಗುವುದು
ವ್ಯತ್ಯಾಸ ಶುರುವಾಗುವುದು
ಪ್ರೀತಿಯ ಅರಿವಿಲ್ಲದಿದ್ದರೆ