jump to navigation

ನಮ್ಮ ಹೊಟ್ಟೆಯಲ್ಲಿನ ಹುಳುಗಳಿಗೆ ಅಲ್ಕೋಹಾಲ್ ಮದ್ದು ? ಫೆಬ್ರವರಿ 14, 2008

Posted by Bala in ಬದುಕು, ಹಾಸ್ಯ, ಹರಟೆ.
Tags: ,
2 comments

ತಿಂಗಳಿಗೊಮ್ಮೆ ಆಫೀಸಿನಿಂದ ಹ್ಯಾಪಿ ಅವರ್ ಪಾರ್ಟಿಗೆ ಹೋಗುತ್ತಿರುತ್ತೇವೆ.ಎಲ್ಲರೂ ಅಲ್ಕೋಹಾಲ್ ಕುಡಿಯುತಿದ್ದರೆ ನಾನು ಪೈನಾಪಲ್ ಜ್ಯೂಸ್ ಕುಡಿಯುವುದು ರೂಢಿ. ಅಂದಿನ ಪಾರ್ಟಿಯಲ್ಲಿ, ಅದು ಇದು ಮಾತಾಡುತ್ತಾ ಎಲ್ಲರಿಗೂ ನಾನು ಒಂದು ಜೋಕ್ ಹೇಳಿದೆ. 

ಒಮ್ಮೆ, ಕುಡಿತದ ದುಷ್ಪರಿಣಾಮವನ್ನು ತಿಳಿಸಿಕೊಡಲು ಕಾಲೇಜಿನ ಪ್ರಾದ್ಯಾಪಕನೊಬ್ಬ ವಿಧ್ಯಾರ್ಥಿಗಳ ಮುಂದೆ ಎರಡು ಲೋಟಗಳನ್ನಿಟ್ಟು ಒಂದರಲ್ಲಿ ನೀರನ್ನು ಹಾಕಿ ಇನ್ನೊಂದರಲ್ಲಿ ಅಲ್ಕೋಹಾಲನ್ನು ಹಾಕಿದ. ನಂತರ ಎರಡರಲ್ಲೂ ಒಂದೊಂದು ಹುಳುವನ್ನು ಹಾಕಿದ. ಕೆಲವೇ ಕ್ಷಣಗಳಲ್ಲಿ ಅಲ್ಕೋಹಾಲ್ ನಲ್ಲಿದ್ದ ಹುಳು ಸತ್ತು ಹೋಯಿತು. ನೀರಿನಲ್ಲಿದ್ದ ಹುಳು ಈಜಾಡುತಿತ್ತು. ಇದನ್ನು ತೋರಿಸಿದ ಪ್ರಾಧ್ಯಾಪಕ, ನೀವೇ ಪ್ರತ್ಯಕ್ಷವಾಗಿ ಅಲ್ಕೋಹಾಲಿನ ಪರಿಣಾಮವನ್ನು ನೋಡಿದ್ರಿ, ಈಗ ಹೇಳಿ ಇದರಿಂದ ನೀವು ಯಾವ ಪಾಠವನ್ನು ಕಲಿತಿರಿ ಎಂದು ವಿಧ್ಯಾರ್ಥಿಗಳನ್ನು ಪ್ರಶ್ನಿಸಿದ. ಎಲ್ಲರೂ ಸುಮ್ಮನಿದ್ದರು, ಆದರೆ ಹಿಂದಿನ ಬೆಂಚಿನ ಹುಡುಗನೊಬ್ಬ  ಕೈಯೆತ್ತಿ ನಾನು ಹೇಳುತ್ತೇನೆ ಎಂದ. ಉತ್ಸಾಹ ಗೊಂಡ ಪ್ರಾದ್ಯಾಪಕ, ಆ ಹುಡುಗನಿಗೆ ಪ್ರೋತ್ಸಾಹಿಸಿ, ಹೇಳಪ್ಪಾ  ಎಲ್ಲರಿಗೂ ಅರ್ಥವಾಗುವ ಹಾಗೆ ಗಟ್ಟಿಯಾಗಿ ಹೇಳು ಎಂದ. ಹುಡುಗ ಎದ್ದು ನಿಂತು ಗಟ್ಟಿಯಾಗಿ ಹೇಳಿದ, “ಅಲ್ಕೋಹಾಲ್ ಕುಡಿಯುವುದರಿಂದ ನಮ್ಮ ಹೊಟ್ಟೆಯಲ್ಲಿರುವ ಹುಳುಗಳೆಲ್ಲಾ ಸತ್ತು ಹೋಗುತ್ತವೆ”. ಪ್ರಾದ್ಯಾಪಕ ಸುಸ್ತಾಗಿ ಕುಸಿದು ಬಿದ್ದ.

ಜೋಕ್ ಕೇಳಿ ಎಲ್ಲರೂ ನಕ್ಕರು, ಒಂದು ಹೆಜ್ಜೆ ಮುಂದೆ ಹೋದ ನನ್ನ ಮ್ಯಾನೆಜರ್, ಇದ್ದಕ್ಕಿದ್ದಂತೆ ತನ್ನ ಕೈಲ್ಲಿದ್ದ ಗ್ಲಾಸ್ಸನ್ನು ಇನ್ನೊಬ್ಬನ ಗ್ಲಾಸಿಗೆ ಚಿಯರ್ಸ್ ಹೇಳುತ್ತಾ, ನಮ್ಮ ಹೊಟ್ಟೆಯಲ್ಲಿರುವ ಹುಳುಗಳನ್ನು ಸಾಯಿಸುವುದಕ್ಕೆ ಎಲ್ಲರೂ ಅಲ್ಕೋಹಾಲ್ ಕುಡಿಯೋಣ ಎಂದು ಘೋಶಿಸಿ ನಂತರ ನನ್ನ ಕಡೆ ತಿರುಗಿ, ಹೌದು, ಹಾಗಾದರೆ ನಿನ್ನ ಹೊಟ್ಟೆಯಲ್ಲಿ ಸಾಕಷ್ಟು ಹುಳುಗಳಿರಬೇಕಲ್ಲಾ ಎನ್ನಬೇಕೆ ಮಹಾನುಭಾವ. ಅಂದಿನಿಂದ ಹ್ಯಾಪಿ ಅವರ್ ಪಾರ್ಟಿಗೆ ಹುಳುಗಳನ್ನು ಸಾಯಿಸಲೋಸುಗ ಕುಡಿಯುವ ಪಾರ್ಟಿ ಎಂದು ಹೊಸ ನಾಮಕರಣ ಮಾಡಿದ ಆ ಮ್ಯಾನೇಜರ್