ಅಪ್ಪ ಮಗ ಅಕ್ಟೋಬರ್ 2, 2008
Posted by Bala in ಬದುಕು.Tags: ಅಪ್ಪ ಮಗ
8 comments
ತುಂಬಾ ವಯಸ್ಸಾದ ಮುದುಕನೊಬ್ಬ ಒಂಟಿಯಾಗಿ ಜೀವಿಸುತಿದ್ದನು. ಈ ಬಾರಿ ತನ್ನ ಹೊಲದಲ್ಲಿ ಗೆಣಸನ್ನು ಬೆಳೆಯಲು, ಹೊಲವನ್ನು ಅಗೆಯಲು ತನ್ನಲ್ಲಿ ಶಕ್ತಿಯಿಲ್ಲ ವೆನಿಸಿತು. ಹಿಂದೆ ತನ್ನ ಒಬ್ಬನೇ ಮಗ ಹೊಲವನ್ನು ಉಳಲು ಸಹಾಯಮಾಡುತಿದ್ದ ಆದರೆ ಈಗ ಆತ ಜೈಲಿನಲ್ಲಿರುವದರಿಂದ ಅದು ಸಾಧ್ಯವಾಗುವ ಹಾಗಿರಲಿಲ್ಲ. ಮುದುಕ ತನ್ನ ಕಷ್ಟವನ್ನು ತನ್ನ ಮಗನಿಗೆ ಹೇಳಿಕೊಳ್ಳಲು ಒಂದು ಪತ್ರ ಬರೆದ.
ಮಗನೆ,
ನನಗೆ ವಯಸ್ಸಾಯಿತು ಈ ತೋಟವನ್ನು ಅಗೆಯಲು ನನ್ನೊಬ್ಬನಿಂದಲೇ ಸಾಧ್ಯವಿಲ್ಲ, ಈ ಸಾರಿ ಗೆಣಸನ್ನು ಬೆಳೆಯಲು ಆಗುವುದಿಲ್ಲಾ ಎಂದು ದುಖವಾಗುತ್ತಿದೆ. ನೀನಿದ್ದಿದ್ದರೆ ನನ್ನ ಕಷ್ಟಗಳೆಲ್ಲ ಪರಿಹಾರವಾಗುತಿತ್ತು. ನನಗೆ ಗೊತ್ತು ನೀನು ಖಂಡಿತ ಹೊಲವನ್ನು ಅಗೆದು ಹಸನು ಮಾಡಿಕೊಡುತಿದ್ದೆ.
ಇಂತಿ ನಿನ್ನ ಪ್ರೀತಿಯ
ಅಪ್ಪ.
ಸ್ವಲ್ಪ ದಿನಗಳ ನಂತರ ಮಗನ ಪತ್ರವೊಂದು ಅಪ್ಪನನ್ನು ತಲುಪಿತು.
ಪ್ರೀತಿಯ ಅಪ್ಪ,
ದಯವಿಟ್ಟು ತೋಟವನ್ನು ಅಗಯಬೇಡ, ನಾನು ಹೆಣಗಳನ್ನು ಅಲ್ಲೇ ಹೂತಿರುವುದು.
ಇಂತಿ ನಿನ್ನ
ಮಗ.
ಮಾರನೆಯ ದಿನ ಬೆಳಗಿನ ಜಾವಕ್ಕೆ ಪೋಲಿಸರು ಬಂದು ತೋಟವನ್ನು ಅಗೆಯಲಾರಂಬಿಸಿದರು. ಇಡೀ ತೋಟವನ್ನೇ ಅಗೆದರೂ ಎಲ್ಲೂ ಹೆಣದ ಸುಳಿವಿರಲಿಲ್ಲ. ಪೋಲಿಸರು ಮುದುಕನ ಕ್ಷಮೆ ಕೇಳಿ ಹೊರಟುಹೋದರು.
ಮಾರನೆಯ ದಿನ ಮಗನಿಂದ ಮತ್ತೊಂದು ಪತ್ರ ಬಂದಿತು.
ಪ್ರೀತಿಯ ಅಪ್ಪ,
ನೀನೀಗ ಗೆಣಸನ್ನು ನಿಶ್ಚಿಂತೆಯಿಂದ ಬೆಳೆಯಬಹುದು. ನಾನಿರುವ ಸ್ಥಿತಿಯಲ್ಲಿ ನನ್ನಿಂದಾದ ಸಹಾಯವನ್ನು ಮಾಡಿರುವೆ.
ಇಂತಿ ನಿನ್ನ
ಮಗ.
ಇದನ್ನು ನಾನು ದಿನಕ್ಕೊಂದು ಜೋಕ್ಸ್ ನಲ್ಲಿ ಓದಿದ್ದು. ಆದರೆ ಇಲ್ಲಿ ಹಾಸ್ಯಕ್ಕಿಂತ ಹೆಚ್ಚಿನ ವಿಷಯವಿದೆ ಎನಿಸಿತು.