jump to navigation

ಪ್ರೀತಿ ಅಕ್ಟೋಬರ್ 29, 2017

Posted by Bala in ಕವನ - ಚುಟುಕ, ಬದುಕು.
add a comment

ನನ್ನಲ್ಲಿ ಎಲ್ಲವೂ ಇತ್ತು,
ಆದರೇ ತಿಳಿದಿರಲಿಲ್ಲಾ
ನೀ ಕಂಡಂದಿನಿಂದಾ
ತಿಳಿಯಿತು, ಎಲ್ಲಾ ನನ್ನದೇ

 

ಮೊದಮೊದಲು
ಎಲ್ಲಾ ಬೇಕೆನಿಸುತಿತ್ತು
ನೀ ಕಂಡಂದಿನಿಂದಾ,
ಅದೊಂದೇ ಸಾಕೆನಿಸುತ್ತಿದೆ

 

ನಿನ್ನ ಆ ಮುಗ್ದ ನಗು,
ನನ್ನಲ್ಲಿ ಮೂಡಿಸಿದ
ಭಾವನೆಯನ್ನು,
ಪ್ರೀತಿ ಎನ್ನಬಹುದೇ?

ಹಳೆಕನ್ನಡ ಕಾವ್ಯಸಂಗ್ರಹ ಮಾರ್ಚ್ 26, 2017

Posted by Bala in ಬದುಕು, ಸಾಹಿತ್ಯ.
1 comment so far

ಹಳೆಕನ್ನಡ ಕಾವ್ಯಸಂಗ್ರಹ ವನ್ನು ಕೆಳಗಿನ ಬ್ಲಾಗ್ ನಲ್ಲಿ ಓದಬಹುದು.

ಹಳೆಗನ್ನಡಕಾವ್ಯ ಸಂಗ್ರಹ

ಪಂಪ ಭಾರತ / ವಿಕ್ರಮಾರ್ಜುನ ವಿಜಯ

ಸೋಮೇಶ್ವರ ಶತಕ

ಕುಮಾರವ್ಯಾಸ ರಚಿತ ಕರ್ನಾಟಕ ಭಾರತ ಕಥಾಮಂಜರಿಯಿಂದ ಆಯ್ದ ಕಾವ್ಯ ಸಂಗ್ರಹ

ರನ್ನನ ಗಧಾಯುದ್ದ ಅಥವಾ ಸಾಹಸಭೀಮ ವಿಜಯ

ಯಶೋಧರ ಚರಿತೆ – ಜನ್ನ

ಲಕ್ಷ್ಮೀಶನ ಜೈಮಿನಿ ಭಾರತ

 

 

ದಾರಿ ದೀಪ ೧ ಅಕ್ಟೋಬರ್ 2, 2013

Posted by Bala in ದಾರಿ ದೀಪ.
1 comment so far

ತಿಳಿದವ, ಬೇಕೆನ್ನುವವರಿಗೆ ತಿಳಿಸುವವ.
ಗುರಿಯಿಲ್ಲದೆ, ಗುಂಪಿನಲ್ಲಿದ್ದಾಗ ಸುಮ್ಮನಿರುವವ.

ಪದಗಳಲ್ಲಿ ಹೇಳಬಲ್ಲ ದಾರಿ, ದಾರಿಯಲ್ಲ
ಹೆಸರಿಡಬಲ್ಲ ಹೆಸರು, ದಾರಿಯ ಹೆಸರಲ್ಲ

ದಾರಿಯೆಂಬುದು, ಹೆಸರಿಲ್ಲದ್ದು, ಹೆಸರಿರುವುದು.
ಹೆಸರಿಲ್ಲದ್ದು ಎಲ್ಲದರ ಶಾಯಿ;
ಹೆಸರಿರುವುದು ಸಾವಿರಾರರ ತಾಯಿ.

ಅಸೆ ಬಿಟ್ಟವ, ಗುಟ್ಟನ್ನು ಕಾಣಬಲ್ಲ.
ಅಸೆ ಇದ್ದವ, ಬೇಕಾದ್ದನ್ನು ಕಾಣಬಲ್ಲ.
ಎಲ್ಲದರ ಅರಿವಿನಗೂಡಿಗೆ, ಗುಟ್ಟೇ ಬಾಗಿಲು.

**************************************

The Tao that can be told
is not the eternal Tao.
The name that can be named
is not the eternal name.

The Tao is both named and nameless
As nameless it is the origin of all things;
as named it is the mother of 10,000 things.

Ever desire-less, one can see the mystery;
ever desiring, one sees only the manifestations.
And the mystery itself is the doorway to all understanding

Tao-Te-Ching – Lao Tzu

(Taken from “Change your Thoughts – Change your Life” by Dr. Wayne Dyer)

ಮರ ಮತ್ತು ಅಭಿವೃದ್ದಿ ಸೆಪ್ಟೆಂಬರ್ 21, 2013

Posted by Bala in ಕವನ - ಚುಟುಕ.
1 comment so far

ಅಲ್ಲೊಂದು ಮರ ನಿಂತಿತ್ತು
ಸುತ್ತಲಿನ ಕಾರು, ಬಸ್ಸಿನ ಹೊಗೆಯೋ ಏನೋ ,
ಮರದ ಕಾಂಡ ಕಪ್ಪಾಗಿತ್ತು
ಪಕ್ಕದ್ಮನೆಯವರ ಬಾಲ್ಕನಿಗೆ ರೆಂಬೆ
ಆಡ್ಡವಾಗಿದ್ದಿರಬಹುದೋ ಏನೋ ,
ಮರದ ರೆಂಬೆ ತುಂಡಾಗಿತ್ತು,
ಮರದ ಕೆಳಗೆ ಬಿಬಿಎಂಪಿ ಹಾಕಿದ್ದ ಬೆಂಚು,
ಕಾಂಡವನ್ನು ಒತ್ತರಿಸಿಕೊಂಡಿತ್ತು
ಮರಕ್ಕೆ ಒರಗಿಕೊಂಡಂತೆ ಬೀಡಿ ಅಂಗಡಿ,
ತುಂಡು ಬೀಡಿಯ ಬೆಂಕಿ
ಉಜ್ಜಿ ಉಜ್ಜಿ ಕಾಂಡ ಅಲ್ಲಲ್ಲಿ ಕಪ್ಪಾಗಿತ್ತು,
ಬೋಳಾಗಿದ್ದ ರೆಂಬೆ,
ಕಪ್ಪಗಿದ್ದ ಕಾಂಡ, ಮರ ಸತ್ತಂತಿತ್ತು
ತಲೆ ಮೇಲೆತ್ತಿದರೆ
ಮೇಲೆ ಹಸಿರಾದ ಎಲೆ,
ರೆಂಬೆಗಳು ಗಾಳಿಗೆ ಮೇಲೆ ಕೆಳಗೆ ಆಡುತಿದ್ದವು
ಮರ ಮೇಲೆ ಉಸಿರಾಡುತ್ತಿರುವಂತಿತ್ತು
ನಗರ ಬಹಳ ಅಭಿವೃದ್ದಿ ಕಂಡಿದೆ
ಮರ ಇನ್ನೂ ಬದುಕಿದೆ
ನಾವು ಬದುಕಬಹುದೋ ಏನೋ

ಬದಲಾವಣೆ ಡಿಸೆಂಬರ್ 30, 2011

Posted by Bala in ಬದುಕು.
2 comments

Yesterday I was clever, so I wanted to change the world.
Today I am wise, so I am changing myself.

-Rumi

ನಿನ್ನೆ ನಾನು ಬುದ್ಧಿವಂತ, ಇಡೀ ಜಗತ್ತನ್ನೇ ಬದಲಿಸಬೇಕೆಂದಿದ್ದೆ
ಇಂದು ನಾನು ವಿವೇಕಿ, ಹಾಗಾಗಿ ನಾನೇ ಬದಲಾಗುತಿದ್ದೇನೆ.

 

ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು