jump to navigation

ಒಲವೇ ಜೀವನ ಸಾಕ್ಷಾತ್ಕಾರ ಫೆಬ್ರವರಿ 3, 2021

Posted by Bala in ಬದುಕು.
add a comment

ಒಲವೇ ಜೀವನ ಸಾಕ್ಷಾತ್ಕಾರ
ಒಲವೇ ಮರೆಯದ ಮಮಕಾರ

ಧುಮ್ಮಿಕ್ಕಿ ಹರಿಯುವ ಜಲಧಾರೆಯಲ್ಲೊ
ಧುಂಭಿಯ ಹಾಡಿನ ಝೇಂಕಾರದಲ್ಲೊ
ಘಮ್ಮನೆ ಹೊಮ್ಮಿರುವ ಹೊಸ ಹೂವಿನಲ್ಲೊ
ತುಂಬಿದೆ ಒಲವಿನ ಸಾಕ್ಷಾತ್ಕಾರ

ವಸಂತ ಕೋಗಿಲೆ ಪಂಚ ಮನೋಂಚರ
ಗಾಂಧಾರ ಭಾಷೆಯ ಹಕ್ಕಿಗಳಿಂಚರ
ಈ ಮಲೆನಾಡಿನ ಭೂರಮೆ ಶೃಂಗಾರ
ಚೆಲುವಿನ ಒಲವಿನ ಸಾಕ್ಷಾತ್ಕಾರ

ಒಲವಿನ ಪೂಜೆಗೆ ಒಲವೇ ಮಂದಾರ
ಒಲವೇ ಬದುಕಿನ ಬಂಗಾರ
ಒಲವಿನ ನೆನಪೇ ಹೃದಯಕೆ ಮಧುರ
ಒಲವೇ ದೈವದ ಸಾಕ್ಷಾತ್ಕಾರ

ಕವಿ – ಕಣಗಾಲ ಪ್ರಭಾಕರ ಶಾಸ್ತ್ರಿ

ಸಾಕ್ಷಾತ್ಕಾರ ಜನವರಿ 8, 2021

Posted by Bala in ಬದುಕು.
add a comment

ಕಾಮವೆಂಬ ರಾಜನು ಜ್ಞಾನವೆಂಬ ರಾಜನೊಡನೆ ಒಮ್ಮೆ ಯುದ್ಧ ಮಾಡಿದನು. ಅದರಲ್ಲಿ ಜ್ಞಾನವೂ ಇನ್ನೇನು ಸೋಲುವುದರಲ್ಲಿದ್ದಾಗ ಅವನು ಉಪನಿಷತ್ತೆಂಬ ರಾಣಿಯನ್ನು ಮದುವೆಯಾದನು. ಅವರಿಗೆ ಸಾಕ್ಷಾತ್ಕಾರವೆಂಬ ಮಗು ಆಯಿತು. ಆ ಮಗುವೇ ಅವನಿಗೆ ಜಯವನ್ನು ಕೊಡಿಸಿತು.

~ ವಿವೇಕಾನಂದ

ಕವಿರಾಜಮಾರ್ಗದ ದ್ವನಿಕಂದ ಕುರಿತು ಒಂದು ಜಿಜ್ಞಾಸೆ: ನವೆಂಬರ್ 5, 2017

Posted by Bala in ಬದುಕು.
add a comment
ಧ್ವನಿಕಂದ-
ಧ್ವನಿಯೆಂಬುದಳಂಕಾರಂ
ಧ್ವನಿಯಿಸುಗುಂ ಶಬ್ದದಿಂದಮರ್ಥದೆ ದೂಷ್ಯಂ
ನೆನೆವುದಿದನಿಂತು ಕಮಲದೊಳ್
ಅನಿಮಿಷಯುಗಮೊಪ್ಪಿ ತೋರ್ಪುದಿಂತಿದು ಚೋದ್ಯಂ

ಧ್ವನಿಕಂದವೆಂಬುದೊಂದು ಸಂಸ್ಕೃತಹೂರಣದ ಕನ್ನಡಕಣಕದ ಸುಕ್ಕಿನುಂಡೆ. ಹೂರಣವನ್ನು ಕೊಂಚ ತಾಳ್ಮೆಯೆಂದ ಎಳೆಎಳೆಯಾಗಿ ತೊಳೆತೊಳೆಯಾಗಿ ಬಿಡಿಬಿಡಿಯಾಗಿ ಬಿಡಿಸಿ ನೋಡಿ. ಜಾತ್ಯೇಕವಚನ, ಪರಿಸಂಖ್ಯಾ, ಅನ್ವಯಸಾಮಗ್ರಿ, ಗುಣೇತ್ವನ್ಯಾಯಕಲ್ಪನಾ, ಅರ್ಥಂ ಬುದ್ಧ್ಯಾ ಶಬ್ದರಚನಾ, ನಿಷೇಧಸ್ಯಪ್ರಾಪ್ತಿಪೂರ್ವಕತ್ವನಿಯಮಃ, ಉಭಯಪ್ರಾಪ್ತಿ, ಅನ್ಯತರನಿವೃತ್ತಿ, ಸಾಹಚರ್ಯನಿಯಮ, ನೆನೆ ಧಾತು ಪ್ರಯೋಗ, ಧ್ವನಿಕಾವ್ಯಲಕ್ಷಣಕಾರಿಕೆಯ ಹಿನ್ನೆಲೆ, ಧ್ವನ್ಯಲಂಕಾರವೆಂದರೆ ಶಬ್ದಾಲಂಕಾರವೆಂದರ್ಥ. ಆಂತರ್ಭಾವವಾದವೂ ಕೂಡ ಧ್ವನಿಕಂದದ ಅರ್ಥ.

ಪೂರ್ಣ ಕೃತಿಗಾಗಿ ಕೆಳಗಿನ ಬ್ಲಾಗನ್ನು ನೋಡಿ.

https://ykrishnasharma.blogspot.in/

ಪ್ರೀತಿ ಅಕ್ಟೋಬರ್ 29, 2017

Posted by Bala in ಕವನ - ಚುಟುಕ, ಬದುಕು.
add a comment

ನನ್ನಲ್ಲಿ ಎಲ್ಲವೂ ಇತ್ತು,
ಆದರೇ ತಿಳಿದಿರಲಿಲ್ಲಾ
ನೀ ಕಂಡಂದಿನಿಂದಾ
ತಿಳಿಯಿತು, ಎಲ್ಲಾ ನನ್ನದೇ

 

ಮೊದಮೊದಲು
ಎಲ್ಲಾ ಬೇಕೆನಿಸುತಿತ್ತು
ನೀ ಕಂಡಂದಿನಿಂದಾ,
ಅದೊಂದೇ ಸಾಕೆನಿಸುತ್ತಿದೆ

 

ನಿನ್ನ ಆ ಮುಗ್ದ ನಗು,
ನನ್ನಲ್ಲಿ ಮೂಡಿಸಿದ
ಭಾವನೆಯನ್ನು,
ಪ್ರೀತಿ ಎನ್ನಬಹುದೇ?

ಹಳೆಕನ್ನಡ ಕಾವ್ಯಸಂಗ್ರಹ ಮಾರ್ಚ್ 26, 2017

Posted by Bala in ಬದುಕು, ಸಾಹಿತ್ಯ.
1 comment so far

ಹಳೆಕನ್ನಡ ಕಾವ್ಯಸಂಗ್ರಹ ವನ್ನು ಕೆಳಗಿನ ಬ್ಲಾಗ್ ನಲ್ಲಿ ಓದಬಹುದು.

ಹಳೆಗನ್ನಡಕಾವ್ಯ ಸಂಗ್ರಹ

ಪಂಪ ಭಾರತ / ವಿಕ್ರಮಾರ್ಜುನ ವಿಜಯ

ಸೋಮೇಶ್ವರ ಶತಕ

ಕುಮಾರವ್ಯಾಸ ರಚಿತ ಕರ್ನಾಟಕ ಭಾರತ ಕಥಾಮಂಜರಿಯಿಂದ ಆಯ್ದ ಕಾವ್ಯ ಸಂಗ್ರಹ

ರನ್ನನ ಗಧಾಯುದ್ದ ಅಥವಾ ಸಾಹಸಭೀಮ ವಿಜಯ

ಯಶೋಧರ ಚರಿತೆ – ಜನ್ನ

ಲಕ್ಷ್ಮೀಶನ ಜೈಮಿನಿ ಭಾರತ