ಪ್ರೀತಿ ಅಕ್ಟೋಬರ್ 29, 2017
Posted by Bala in ಕವನ - ಚುಟುಕ, ಬದುಕು.add a comment
ನನ್ನಲ್ಲಿ ಎಲ್ಲವೂ ಇತ್ತು,
ಆದರೇ ತಿಳಿದಿರಲಿಲ್ಲಾ
ನೀ ಕಂಡಂದಿನಿಂದಾ
ತಿಳಿಯಿತು, ಎಲ್ಲಾ ನನ್ನದೇ
ಮೊದಮೊದಲು
ಎಲ್ಲಾ ಬೇಕೆನಿಸುತಿತ್ತು
ನೀ ಕಂಡಂದಿನಿಂದಾ,
ಅದೊಂದೇ ಸಾಕೆನಿಸುತ್ತಿದೆ
ನಿನ್ನ ಆ ಮುಗ್ದ ನಗು,
ನನ್ನಲ್ಲಿ ಮೂಡಿಸಿದ
ಭಾವನೆಯನ್ನು,
ಪ್ರೀತಿ ಎನ್ನಬಹುದೇ?
ಮರ ಮತ್ತು ಅಭಿವೃದ್ದಿ ಸೆಪ್ಟೆಂಬರ್ 21, 2013
Posted by Bala in ಕವನ - ಚುಟುಕ.1 comment so far
ಅಲ್ಲೊಂದು ಮರ ನಿಂತಿತ್ತು
ಸುತ್ತಲಿನ ಕಾರು, ಬಸ್ಸಿನ ಹೊಗೆಯೋ ಏನೋ ,
ಮರದ ಕಾಂಡ ಕಪ್ಪಾಗಿತ್ತು
ಪಕ್ಕದ್ಮನೆಯವರ ಬಾಲ್ಕನಿಗೆ ರೆಂಬೆ
ಆಡ್ಡವಾಗಿದ್ದಿರಬಹುದೋ ಏನೋ ,
ಮರದ ರೆಂಬೆ ತುಂಡಾಗಿತ್ತು,
ಮರದ ಕೆಳಗೆ ಬಿಬಿಎಂಪಿ ಹಾಕಿದ್ದ ಬೆಂಚು,
ಕಾಂಡವನ್ನು ಒತ್ತರಿಸಿಕೊಂಡಿತ್ತು
ಮರಕ್ಕೆ ಒರಗಿಕೊಂಡಂತೆ ಬೀಡಿ ಅಂಗಡಿ,
ತುಂಡು ಬೀಡಿಯ ಬೆಂಕಿ
ಉಜ್ಜಿ ಉಜ್ಜಿ ಕಾಂಡ ಅಲ್ಲಲ್ಲಿ ಕಪ್ಪಾಗಿತ್ತು,
ಬೋಳಾಗಿದ್ದ ರೆಂಬೆ,
ಕಪ್ಪಗಿದ್ದ ಕಾಂಡ, ಮರ ಸತ್ತಂತಿತ್ತು
ತಲೆ ಮೇಲೆತ್ತಿದರೆ
ಮೇಲೆ ಹಸಿರಾದ ಎಲೆ,
ರೆಂಬೆಗಳು ಗಾಳಿಗೆ ಮೇಲೆ ಕೆಳಗೆ ಆಡುತಿದ್ದವು
ಮರ ಮೇಲೆ ಉಸಿರಾಡುತ್ತಿರುವಂತಿತ್ತು
ನಗರ ಬಹಳ ಅಭಿವೃದ್ದಿ ಕಂಡಿದೆ
ಮರ ಇನ್ನೂ ಬದುಕಿದೆ
ನಾವು ಬದುಕಬಹುದೋ ಏನೋ
ಬರವಣಿಗೆ ಡಿಸೆಂಬರ್ 30, 2010
Posted by Bala in ಕವನ - ಚುಟುಕ.add a comment
ಬರೆಯೋದೇ ಕಾಯಕವಾದವನಿಗೆ
ಬರವಣಿಗೆ ಯಾಂತ್ರಿಕವಾಗಬಹುದು
ಸೃಷ್ಟಿ ಕ್ರಿಯೆಯಲಿ ತೊಡಗಿದವಗೆ
ತನ್ನ ಇರುವಿಕೆಯಷ್ಟೇ ಸಹಜವಾಗಬಹುದು
ಸರಳತೆ ಡಿಸೆಂಬರ್ 9, 2010
Posted by Bala in ಕವನ - ಚುಟುಕ, ಬದುಕು.4 comments
“The ability to simplify means to eliminate the unnecessary so that the necessary may speak.”
-by Hans Hoffmann
ಸರಳತೆಯ ಶಕ್ತಿ
ಬೇಡವಾದದ್ದನ್ನು ತೆಗೆದು
ಬದುಕಿಗೆ ಬೇಕಾದ್ದನ್ನು
ಮಾತ್ರ ಉಳಿಸುವುದು
ದಾರಿ ಡಿಸೆಂಬರ್ 7, 2010
Posted by Bala in ಕವನ - ಚುಟುಕ, ಬದುಕು.2 comments
Knowing is not enough; we must apply. Wishing is not enough; we must do.
– By Johann Wolfgang Von Goethe
ಗೊತ್ತಿದ್ದರಷ್ಟೇ ಸಾಲದು
ಜೀವನದಲ್ಲಿ ಅಳವಡಿಸಿಕೊಳ್ಳಬೇಕು
ಬಯಸಿದರಷ್ಟೇ ಸಾಲದು
ಸಾಧಿಸುವೆಡೆಗೆ ಕಾರ್ಯ ನಿರತವಾಗಬೇಕು