jump to navigation

ಮರ ಮತ್ತು ಅಭಿವೃದ್ದಿ ಸೆಪ್ಟೆಂಬರ್ 21, 2013

Posted by Bala in ಕವನ - ಚುಟುಕ.
1 comment so far

ಅಲ್ಲೊಂದು ಮರ ನಿಂತಿತ್ತು
ಸುತ್ತಲಿನ ಕಾರು, ಬಸ್ಸಿನ ಹೊಗೆಯೋ ಏನೋ ,
ಮರದ ಕಾಂಡ ಕಪ್ಪಾಗಿತ್ತು
ಪಕ್ಕದ್ಮನೆಯವರ ಬಾಲ್ಕನಿಗೆ ರೆಂಬೆ
ಆಡ್ಡವಾಗಿದ್ದಿರಬಹುದೋ ಏನೋ ,
ಮರದ ರೆಂಬೆ ತುಂಡಾಗಿತ್ತು,
ಮರದ ಕೆಳಗೆ ಬಿಬಿಎಂಪಿ ಹಾಕಿದ್ದ ಬೆಂಚು,
ಕಾಂಡವನ್ನು ಒತ್ತರಿಸಿಕೊಂಡಿತ್ತು
ಮರಕ್ಕೆ ಒರಗಿಕೊಂಡಂತೆ ಬೀಡಿ ಅಂಗಡಿ,
ತುಂಡು ಬೀಡಿಯ ಬೆಂಕಿ
ಉಜ್ಜಿ ಉಜ್ಜಿ ಕಾಂಡ ಅಲ್ಲಲ್ಲಿ ಕಪ್ಪಾಗಿತ್ತು,
ಬೋಳಾಗಿದ್ದ ರೆಂಬೆ,
ಕಪ್ಪಗಿದ್ದ ಕಾಂಡ, ಮರ ಸತ್ತಂತಿತ್ತು
ತಲೆ ಮೇಲೆತ್ತಿದರೆ
ಮೇಲೆ ಹಸಿರಾದ ಎಲೆ,
ರೆಂಬೆಗಳು ಗಾಳಿಗೆ ಮೇಲೆ ಕೆಳಗೆ ಆಡುತಿದ್ದವು
ಮರ ಮೇಲೆ ಉಸಿರಾಡುತ್ತಿರುವಂತಿತ್ತು
ನಗರ ಬಹಳ ಅಭಿವೃದ್ದಿ ಕಂಡಿದೆ
ಮರ ಇನ್ನೂ ಬದುಕಿದೆ
ನಾವು ಬದುಕಬಹುದೋ ಏನೋ