ಒರಟು ಗ್ರಾಹಕ

ದಿನಪತ್ರಿಕೆ ಅಂಗಡಿ ಮಾಲೀಕನಿಗೊಬ್ಬ ಒರಟಾದ ಗ್ರಾಹಕನಿದ್ದ. ಪ್ರತಿದಿನ ಈ ಒರಟು ಗ್ರಾಹಕ ಅಂಗಡಿಗೆ ಬಂದು, ಮಾಲೀಕ ನಮಸ್ಕಾರ ಹೇಳಿದರೆ ಬದಲಿಗೆ ಮುಖ ಗಂಟಿಕ್ಕಿ, ತನಗೆ ಬೇಕಾದ ಪತ್ರಿಕೆಯನ್ನು ಎಳೆದು ಕೊಂಡು, ಹಣವನ್ನು ಮಾಲೀಕನತ್ತ ಬಿಸಾಕುವುದು, ಮಾಲೀಕ ತನ್ನೆಡೆಗೆ ಬಿಸಾಕಿದ ಹಣವನ್ನು ನಗುಮುಖದಿಂದ ತೆಗೆದುಕೊಂಡು ಆತನಿಗೆ ಚಿಲ್ಲರೆ ಹಿಂದಿರುಗಿಸಿ, ಧನ್ಯವಾದ ಹೇಳಿದರೆ, ಗ್ರಾಹಕ ತಿರುಗಿ ನೋಡದೆ ಬರಬರನೆ ಹೊರಟುಹೊಗುತಿದ್ದ.

ಪ್ರತೀ ದಿನ ಇದೆ ಸನ್ನಿವೇಶವನ್ನು ನೋಡುತಿದ್ದ ಅಂಗಡಿಯ ಕೆಲಸಗಾರನೊಬ್ಬ, ಮಾಲೀಕನನ್ನು ಕುರಿತು, ” ನೀವು ಯಾಕೆ ಅಷ್ಟು ನಯವಾಗಿ ಆತನೊಡನೆ ವರ್ತಿಸುವಿರಿ? ಅವನು ಅಷ್ಟು ಒರಟಾಗಿ ನಿಮ್ಮೆಡೆಗೆ ಹಣ ಎಸೆದಂತೆ, ನೀವು ಯಾಕೆ ಪತ್ರಿಕೆಯನ್ನು ಆತನೆಡೆಗೆ ಎಸೆಯಬಾರದು?” ಎಂದು ಕೇಳಿದ.

ಅದಕ್ಕೆ ಮಾಲೀಕ, “ಒರಟುತನ ಆತನ ಹುಟ್ಟು ಗುಣ, ಅವನಿಗೆ ಹಾಗಿರದೆ ಇರಲು ಸಾಧ್ಯವಿಲ್ಲ, ಹಾಗೆ ನನಗೆ ನಯವಾಗಿರದೆ ಇರುವುದು ಸಾಧ್ಯವಿಲ್ಲ. ಆತನ ಒರಟುತನಕ್ಕೆ ಪ್ರತಿಯಾಗಿ ನಾನು ಒರಟುತನ ಪ್ರದರ್ಶಿಸಿದರೆ, ಆತನ ಒರಟುತನ ನನ್ನನ್ನು ನಿಯಂತ್ರಿಸಿದಂತಾಗಲಿಲ್ಲವೇ?” ಎಂದು ಉತ್ತರಿಸಿದನು.

3 thoughts on “ಒರಟು ಗ್ರಾಹಕ

ನಿಮ್ಮ ಟಿಪ್ಪಣಿ ಬರೆಯಿರಿ