jump to navigation

ಎಲ್ಲಿದ್ದೆಯಪ್ಪಾ ನವೆಂಬರ್ 11, 2010

Posted by Bala in ಹಾಸ್ಯ, ಹರಟೆ.
trackback

ಒಮ್ಮೆ ಅತ ನಡೆದು ಹೋಗುತಿದ್ದಾಗ, ಇದ್ದಕ್ಕಿದ್ದಂತೆ ಅಶರೀರವಾಣಿಯೊಂದು “ಇನ್ನು ಒಂದು ಹೆಜ್ಜೆ ಮುಂದಿಟ್ಟರೆ, ಒಂದು ಕಲ್ಲು ನಿನ್ನ ತಲೆಯ ಮೇಲೆ ಬೀಳುತ್ತದೆ” ಎಂದಿತು. ಈತ, ಮುಂದೆ ಹೆಜ್ಜೆ ಇಡದೆ ನಿಂತಲ್ಲೇ ನಿಂತ. ಆಗ ಮೇಲಿಂದ ದಪ್ಪದೊಂದು ಕಲ್ಲು ಇವನ ಮುಂದೆ ಬಿತ್ತು. ಆಶ್ಚರ್ಯವಾದರೂ, ಅತ ನಡೆಯುವುದನ್ನು ಮುಂದುವರೆಸಿದ. ಮುಂದೆ ರಸ್ತೆಯ ತಿರುವನ್ನು ಇನ್ನೇನು ದಾಟಬೇಕು ಅನ್ನುವಷ್ಟರಲ್ಲಿ, ಅಶರೀರವಾಣಿ ಮತ್ತೆ “ಇನ್ನು ಒಂದು ಹೆಜ್ಜೆ ಮುಂದಿಟ್ಟರೆ, ಒಂದು ಕಾರು ನಿನ್ನ ಮೇಲೆ ಹರಿದು ನೀನು ಸಾಯುತ್ತೀಯ” ಎಂದು ಎಚ್ಚರಿಸಿತು. ಅತ ರಸ್ತೆ ದಾಟದೆ ಅಲ್ಲೇ ನಿಂತ, ಆ ಕ್ಷಣದಲ್ಲಿ ಕಣ್ಣು ಮುಚ್ಚಿ ಕಣ್ಣು ತೆರೆಯುವುದರೊಳಗೆ ಕಾರೊಂದು ರಸ್ತೆಯ ತಿರುವನ್ನು ದಾಟಿ ಮುಂದೆ ಹೋಯಿತು. ಆಗ ಆಶ್ಚರ್ಯ ಚಕಿತನಾಗಿ, “ಯಾರಪ್ಪಾ ನೀನು” ಎಂದು ಅಶರೀರವಾಣಿಯನ್ನು ಉದ್ದೇಶಿಸಿ ಕೇಳಿದ. ಆಗ ಅಶರೀರವಾಣಿ “ನಾನು ನಿನ್ನ ರಕ್ಷಣಾ ದೇವತೆ” ಎಂದು ಉಲಿಯಿತು. ಆಗ ಆಶ್ಚರ್ಯದಿಂದ “ಹೌದಾ ! ” ಎಂದಾತ ನಂತರ ವ್ಯಂಗ್ಯವಾಗಿ ಕೇಳಿದ “ನಾನು ಮದುವೆಯಾಗುವಾಗ ನೀನು ಎಲ್ಲಿದ್ದೆಯಪ್ಪಾ?”

ಇದು ನಾನು ಇತ್ತೀಚಿಗೆ ಓದಿದ ಇಂಗ್ಲೀಶ್ ಜೋಕಿನ ಭಾಷಾಂತರ.

Advertisements

ಟಿಪ್ಪಣಿಗಳು»

1. Sunaath - ನವೆಂಬರ್ 11, 2010

ಯಾಕ್ರೀ, ಇಷ್ಟು ದಿನ ಅದೃಶ್ಯರಾಗಿ ಬಿಟ್ಟಿದ್ದಿರಿ?
ಜೋಕು ಚೆನ್ನಾಗಿದೆ.

2. V.R.BHAT - ನವೆಂಬರ್ 11, 2010

ಎಲ್ಲಿದ್ದೀರಿ ಇಲ್ಲೀತನಕ ? ಜೋಕು ಮಜವಾಗಿದೆ!

3. balaglobal - ನವೆಂಬರ್ 12, 2010

🙂
ನನ್ನ ಬ್ಲಾಗೂ “ಎಲ್ಲಿದ್ದೆಯಪ್ಪಾ” ಎಂದು ನನ್ನ ಕೇಳುತ್ತಿದೆ !!

ಧನ್ಯವಾದಗಳು,
ಬಾಲ.


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: