ಸತ್ತು ನಾನೆಂದು ಕೇವಲವಾಗಿದ್ದೆ? ನವೆಂಬರ್ 13, 2010
Posted by Bala in ಕವನ - ಚುಟುಕ, ಬದುಕು.4 comments
I died as a mineral and became a plant,
I died as plant and rose to animal,
I died as animal and I was Man.
Why should I fear? When was I less by dying?
Rumi
ವಜ್ರವಾಗಿ ಸತ್ತು ಗಿಡವಾದೆ,
ಗಿಡವಾಗಿ ಸತ್ತು ಮಲ್ಲಿಗೆಯಾದೆ,
ಮಲ್ಲಿಗೆಯಾಗಿ ಸತ್ತು ಮೃಗವಾದೆ,
ಮೃಗವಾಗಿ ಸತ್ತು ಮನುಷ್ಯನಾದೆ
ಭಯವೇಕೆ ನನಗೆ? ಸತ್ತು ನಾನೆಂದು ಕೇವಲವಾಗಿದ್ದೆ?
ಎಲ್ಲಿದ್ದೆಯಪ್ಪಾ ನವೆಂಬರ್ 11, 2010
Posted by Bala in ಹಾಸ್ಯ, ಹರಟೆ.3 comments
ಒಮ್ಮೆ ಅತ ನಡೆದು ಹೋಗುತಿದ್ದಾಗ, ಇದ್ದಕ್ಕಿದ್ದಂತೆ ಅಶರೀರವಾಣಿಯೊಂದು “ಇನ್ನು ಒಂದು ಹೆಜ್ಜೆ ಮುಂದಿಟ್ಟರೆ, ಒಂದು ಕಲ್ಲು ನಿನ್ನ ತಲೆಯ ಮೇಲೆ ಬೀಳುತ್ತದೆ” ಎಂದಿತು. ಈತ, ಮುಂದೆ ಹೆಜ್ಜೆ ಇಡದೆ ನಿಂತಲ್ಲೇ ನಿಂತ. ಆಗ ಮೇಲಿಂದ ದಪ್ಪದೊಂದು ಕಲ್ಲು ಇವನ ಮುಂದೆ ಬಿತ್ತು. ಆಶ್ಚರ್ಯವಾದರೂ, ಅತ ನಡೆಯುವುದನ್ನು ಮುಂದುವರೆಸಿದ. ಮುಂದೆ ರಸ್ತೆಯ ತಿರುವನ್ನು ಇನ್ನೇನು ದಾಟಬೇಕು ಅನ್ನುವಷ್ಟರಲ್ಲಿ, ಅಶರೀರವಾಣಿ ಮತ್ತೆ “ಇನ್ನು ಒಂದು ಹೆಜ್ಜೆ ಮುಂದಿಟ್ಟರೆ, ಒಂದು ಕಾರು ನಿನ್ನ ಮೇಲೆ ಹರಿದು ನೀನು ಸಾಯುತ್ತೀಯ” ಎಂದು ಎಚ್ಚರಿಸಿತು. ಅತ ರಸ್ತೆ ದಾಟದೆ ಅಲ್ಲೇ ನಿಂತ, ಆ ಕ್ಷಣದಲ್ಲಿ ಕಣ್ಣು ಮುಚ್ಚಿ ಕಣ್ಣು ತೆರೆಯುವುದರೊಳಗೆ ಕಾರೊಂದು ರಸ್ತೆಯ ತಿರುವನ್ನು ದಾಟಿ ಮುಂದೆ ಹೋಯಿತು. ಆಗ ಆಶ್ಚರ್ಯ ಚಕಿತನಾಗಿ, “ಯಾರಪ್ಪಾ ನೀನು” ಎಂದು ಅಶರೀರವಾಣಿಯನ್ನು ಉದ್ದೇಶಿಸಿ ಕೇಳಿದ. ಆಗ ಅಶರೀರವಾಣಿ “ನಾನು ನಿನ್ನ ರಕ್ಷಣಾ ದೇವತೆ” ಎಂದು ಉಲಿಯಿತು. ಆಗ ಆಶ್ಚರ್ಯದಿಂದ “ಹೌದಾ ! ” ಎಂದಾತ ನಂತರ ವ್ಯಂಗ್ಯವಾಗಿ ಕೇಳಿದ “ನಾನು ಮದುವೆಯಾಗುವಾಗ ನೀನು ಎಲ್ಲಿದ್ದೆಯಪ್ಪಾ?”
ಇದು ನಾನು ಇತ್ತೀಚಿಗೆ ಓದಿದ ಇಂಗ್ಲೀಶ್ ಜೋಕಿನ ಭಾಷಾಂತರ.