ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಡಿಸೆಂಬರ್ 31, 2009
Posted by Bala in ಬದುಕು.1 comment so far
It is only the artificial ego that suffers. The man who has transcended his false ‘me’ no longer identifies with his suffering.
– Fingers Pointing Toward the Moon by Wei Wu Wei…
ನೋವನ್ನು ಅನುಭವಿಸುವುದು
ಹೊರಗಿನ, ಅಸಹಜವಾದ ‘ನಾನು’,
ನಾನೆಂಬ ನಾನನ್ನು ದಾಟಿದವ
ತನ್ನ ನೋವಿನೊಂದಿಗೆ ಗುರುತಿಸಿಕೊಳ್ಳಲಾರ
ಹೊಸ ವರ್ಷದಲ್ಲಿ ನಿಮ್ಮೆಲ್ಲ ಆಸೆ ಆಕಾಂಕ್ಷೆಗಳು ಈಡೇರಲಿ ಎಂಬ ಹಾರೈಕೆಗಳೊಡನೆ, ನಿಮ್ಮೆಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು
ಅತಿ ಸುಂದರಿ ಮತ್ತು ಟಿವಿ ಡಿಸೆಂಬರ್ 15, 2009
Posted by Bala in ಹಾಸ್ಯ, ಹರಟೆ.6 comments
ಅತಿ ಸುಂದರಿಯೊಬ್ಬಳು ಒಮ್ಮೆ ಎಲೆಕ್ಟ್ರಾನಿಕ್ಸ್ ಅಂಗಡಿಗೆ ಬಂದು ಅಲ್ಲಿದ್ದ ಮಾರಾಟಗಾರನಿಗೆ ಒಂದು ವಸ್ತುವನ್ನು ತೋರಿಸುತ್ತಾ, “ಆ ಟಿವಿ ನನಗೆ ಬೇಕು” ಎಂದಳು.
ಅದಕ್ಕೆ ಮಾರಾಟಗಾರ ‘ಕ್ಷಮಿಸಿ, ಅತಿ ಸುಂದರಿಯರೊಂದಿಗೆ ನಾವು ವ್ಯಾಪಾರ ಮಾಡುವುದಿಲ್ಲ” ಎಂದು ನಯವಾಗಿ ಹೇಳಿದ .
ಅತಿ ಸುಂದರಿ ಸಿಟ್ಟಿನಿಂದ ಮನೆಗೆ ಹೋಗಿ, ಮುಖಕ್ಕೆ ಇದ್ದಿಲನ್ನು ಬಳಿದುಕೊಂಡು, ಹಳೆಯ ಉಡುಪನ್ನು ಧರಿಸಿ, ತಲೆ ಕೆದರಿಕೊಂಡು ಮತ್ತೆ ಅಂಗಡಿಗೆ ಬಂದಳು. ಮತ್ತೆ ಅದೇ ವಸ್ತುವನ್ನು ತೋರಿಸಿ, “ಆ ಟಿವಿ ನನಗೆ ಬೇಕು” ಎಂದಳು.
ಅದಕ್ಕೆ ಮಾರಾಟಗಾರ ಮತ್ತೆ “ಕ್ಷಮಿಸಿ, ಅತಿ ಸುಂದರಿಯರಿಯರೊಂದಿಗೆ ನಾವು ವ್ಯಾಪಾರ ಮಾಡುವುದಿಲ್ಲ” ಎಂದು ನಸುನಗುತ್ತ ಹೇಳಿದ.
ಅದನ್ನು ಕೇಳಿ ಆಶ್ಚರ್ಯದಿಂದ ಅತಿ ಸುಂದರಿ ಮಾರಾಟಗಾರನನ್ನು ಕುರಿತು, “ಅಲ್ಲಾ ನಾನು ಅತಿ ಸುಂದರಿ ಎಂದು ನಿಮಗೆ ಹೇಗೆ ತಿಳಿಯಿತು” ಎಂದು ಕೇಳಿದಳು.
ಅದಕ್ಕೆ ಮಾರಾಟಗಾರ ಹೇಳಿದ “ನೀವು ಕೇಳುತ್ತಿರುವ ವಸ್ತು ಟಿವಿಯಲ್ಲ ಅದು ಮೈಕ್ರೋವೇವ್’ ! ”
(ಇಂಗ್ಲೀಷಿನ ಬ್ಲಾಂಡ್ (Blonde) ಅನ್ನು ಕನ್ನಡದಲ್ಲಿ ಅತಿ ಸುಂದರಿ ಎಂದು ಕನ್ನಡೀಕರಿಸಿದ್ದೇನೆ. )
ಯಾಕೆಂದರೆ ! ಡಿಸೆಂಬರ್ 15, 2009
Posted by Bala in ಹಾಸ್ಯ, ಹರಟೆ.2 comments
ಗಂಡ: ಚಿನ್ನ, ನನ್ನ ಸ್ನೇಹಿತನೊಬ್ಬನಿಗೆ ನಾಳೆ ರಾತ್ರಿ ಊಟಕ್ಕೆ ನಮ್ಮನೆಗೆ ಬರೋದಕ್ಕೆ ಹೇಳಿದ್ದೀನಿ.
ಹೆಂಡತಿ: ಏನಂದ್ರಿ? ನಾಳೆ ರಾತ್ರಿ ಊಟಕ್ಕ? ನಿಮಗೇನು ಜ್ಞಾನ ಇದೆಯೇನ್ರಿ, ಅಲ್ಲಾ ಮನೆ ನೋಡಿದ್ರಾ! ಗಲೀಜಾಗಿದೆ, ಮನೆ ಕ್ಲೀನ್ ಮಾಡಿಲ್ಲ, ಮನೆಯಲ್ಲಿ ಅಡುಗೆ ಮಾಡೋಕ್ಕೆ ಸಾಮಾನು ತರಬೇಕು, ನನಗೆ ತರತರಾವರಿ ಅಡುಗೆ ಮಾಡೋಕೆ ಮನಸ್ಸಿಲ್ಲ…
ಗಂಡ: ಅದೆಲ್ಲಾ ನನಗೆ ಗೊತ್ತು ಚಿನ್ನ !
ಹೆಂಡತಿ: ಎಲ್ಲಾ ಗೊತ್ತಿದ್ದೂ ಊಟಕ್ಕೆ ಕರೆದಿದ್ದೀರ?
ಗಂಡ: ಹೌದು, ಯಾಕೆಂದರೆ ಆ ಬಡಪಾಯಿ ಮದುವೆ ಆಗಬೇಕು ಅಂತಾ ಯೋಚಿಸ್ತಿದ್ದಾನೆ !