ಇರುಹು ನವೆಂಬರ್ 17, 2009
Posted by Bala in ಕವನ - ಚುಟುಕ, ಬದುಕು.add a comment
To be conscious that we are perceiving or thinking is to be conscious of our own existence.
-Aristotle
ಗ್ರಹಿಕೆ ಹಾಗು
ಯೋಚನೆಗಳನ್ನು
ನಮ್ಮ ಅರಿವಿನ ಪರಿಧಿಗೆ
ತರುವುದೇ
ನಮ್ಮ ಇರುಹನ್ನು
ಅರಿಯುವ ಮಾರ್ಗ
ಪುನರ್ಜನ್ಮ ನವೆಂಬರ್ 6, 2009
Posted by Bala in ಹಾಸ್ಯ, ಹರಟೆ.4 comments
ಬಾಸ್: ನಿಮಗೆ ಪುನರ್ಜನ್ಮದಲ್ಲಿ ನಂಬಿಕೆಯಿದೆಯೇ?
ಗುಮಾಸ್ತ : ಹೌದು ಸಾರ್, ನಂಬಿಕೆಯಿದೆ
ಬಾಸ್: ಓ ಹಾಗಾದರೆ ನಿನ್ನೆ ನಡೆದದ್ದಕ್ಕೆಲ್ಲಾ ಒಂದು ಅರ್ಥವಿದೆ ಎನಿಸುತ್ತದೆ.
ಗುಮಾಸ್ತ : ಯಾಕೆ ಸಾರ್, ಏನಾಯ್ತು?
ಬಾಸ್: ಏನಿಲ್ಲಾ, ನಿನ್ನೆ ನೀವು, ನಿಮಗಿದ್ದ ಒಬ್ಬರೇ ಅಜ್ಜಿ ಸತ್ತು ಹೋದರು ಎಂದು ಬೇಗ ಹೊದಿರಲ್ಲ, ಆಗ ನಿಮ್ಮ ಅಜ್ಜಿ ನಿಮ್ಮನ್ನು ನೋಡಲು ಇಲ್ಲಿಗೆ ಬಂದಿದ್ದರು.
ಕವಿತೆ ನವೆಂಬರ್ 5, 2009
Posted by Bala in ಕವನ - ಚುಟುಕ.3 comments
ಕಣ್ಣಿಗೆ ಕಾಣದ್ದನ್ನು
ಕಿವಿಗೆ ಕೇಳದ್ದನ್ನು
ಸ್ಪರ್ಶಮಾತ್ರವೇ ಅರಿವುದನ್ನು
ಭಾಷೆ ತಿಳಿಸಲಾರದ್ದನ್ನು
ಹೃದಯ ಮಿಡಿತವನ್ನು…..
ಕವಿತೆಯ ಪದಗಳು
ಸಹೃದಯನ ಮನದ
ಕಲ್ಪನೆಯಲ್ಲಿ ಮೂಡಿಸಬಲ್ಲವು