jump to navigation

ನೀನು ಸೆಪ್ಟೆಂಬರ್ 28, 2009

Posted by Bala in ಕವನ - ಚುಟುಕ.
add a comment

ನಿನ್ನಲ್ಲಿ, ನನ್ನ
ಮೆಚ್ಚಿನ ನಡತೆಯನ್ನು ಕಂಡು
ಆನಂದಿಸುವುದನ್ನು
ನಿಲ್ಲಿಸಿದಾಗ,
ನೀನು ನಿನ್ನಂತೆ ಗೋಚರಿಸುವೆ!

ನಿರಂತರ ಸೆಪ್ಟೆಂಬರ್ 24, 2009

Posted by Bala in ಕವನ - ಚುಟುಕ.
add a comment

ಮಲ್ಲಿಗೆಯ ಪರಿಮಳ
ಹಾರುತ್ತಿರುವ ಪಾರಿವಾಳ

ನೆಲದಾಳಕ್ಕಿಳಿವ ಬೇರು
ಜೀವನಾಧಾರವಾದ ನೀರು

ಬೀಜ ರಕ್ಷಕ ಹಣ್ಣು
ಜೀವ ಪೋಷಕಿ ಹೆಣ್ಣು

ಹಸಿರಾದ ಬಯಲು
ಮುಗಿಯದಾ ಕಡಲು

ಎಲ್ಲವೂ ನಿರಂತರ
ಎಲ್ಲವೂ ಸ್ವತಂತ್ರ

ಮೆಚ್ಚಿನ ವಚನಗಳು ಸೆಪ್ಟೆಂಬರ್ 22, 2009

Posted by Bala in ಬದುಕು.
add a comment

ಮಾಡಿದೆನೆನ್ನದಿರ ಲಿಂಗಕೆ
ನೀಡಿದೆನೆನ್ನದಿರ ಜಂಗಮಕೆ
ಮಾಡುವ ನೀಡುವ ನಿಜಗುಣವುಳ್ಳವರ ಕೂಡಿಕೊಂಡಿಪ್ಪ ನಮ್ಮ
ಕೂಡಲಸಂಗಮದೇವ
ಮಾಡಿದೆನೆಂಬುದು ಮನದಲಿ ಹೊಳೆದರೆ
ನೀಡಿದೆನೆಂಬುದು ನಿಜದಲಿ ತಿಳಿದರೆ
ಏಡಿಸಿ ಕಾಡಿತ್ತು ಶಿವನ ಡಂಗುರ

ಹಬ್ಬಕ್ಕೆ ತಂದ ಹರಕೆಯ ಕುರಿ
ತೊರಣಕ್ಕೆ ತಂದ ತಳಿರ ಮೇಯಿತು
ಕೊಂದವರೆಂಬುದ ಅರಿಯದೆ ಬೆಂದ ಒಡಲ ಹೊರೆಯ ಹೋಯಿತು
ಅಂದಂದೆ ಹುಟ್ಟಿತು ಅಂದಂದೆ ಹೊಂದಿತ್ತು
ಕೊಂದವರುಳಿವರೆ ಕೂಡಲಸಂಗಮದೇವ

ಎನ್ನ ಕಾಲೆ ಕಂಬ ದೇಹವೇ ದೇಗುಲ
ಶಿರವೇ ಹೊನ್ನ ಕಳಸವಯ್ಯ
ಕೂಡಲಸಂಗಮ ದೇವ ಕೇಳಯ್ಯ
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ

ಶುದ್ಧವಾದ ನೀರು ಸೆಪ್ಟೆಂಬರ್ 17, 2009

Posted by Bala in ಬುದ್ಧ ಮತ್ತು ಝೆನ್.
add a comment

Water which is too pure has no fish

ಅತಿ ಶುದ್ಧವಾದ
ನೀರಿನಲ್ಲಿ
ಮೀನುಗಳು
ವಾಸಿಸುವುದಿಲ್ಲ

ಕುರ್ಚಿ ಎಂದರೇನು ಸೆಪ್ಟೆಂಬರ್ 16, 2009

Posted by Bala in ಬದುಕು, ಹಾಸ್ಯ, ಹರಟೆ.
add a comment

ತತ್ವಶಾಸ್ತ್ರದ ಪ್ರಾಧ್ಯಾಪಕರೊಬ್ಬರು, ಆ ವರ್ಷದ ಕೊನೆಯ ಕ್ಲಾಸ್ ತೆಗೆದುಕೊಳ್ಳಲು ಶಾಲೆಗೆ ಬಂದರು. ತಾವು ಕುಳಿತುಕೊಳ್ಳುತಿದ್ದ ಕುರ್ಚಿಯನ್ನು ಮೇಜಿನ ಮೇಲೆ ಎಲ್ಲರಿಗೂ ಕಾಣುವ ಹಾಗೆ ಇಟ್ಟು, “ಪ್ರೀತಿಯ ವಿದ್ಯಾರ್ಥಿಗಳೇ, ಇಷ್ಟು ದಿನ ನನ್ನ ಪಾಠವನ್ನು ಕೇಳಿಸಿಕೊಂಡಿದ್ದೀರಿ, ಅದೆಲ್ಲವನ್ನು ಬಳಸಿಕೊಂಡು, ಈ ಕುರ್ಚಿ ಇಲ್ಲಿ ಇಲ್ಲಾ ಎಂದು ನಿರೂಪಿಸಿ”, ಎಂದರು.

ಸರಿ ಎಲ್ಲರು ಉತ್ತರ ಬರೆಯಲು ಪ್ರಾರಂಭಿಸಿದರು. ಕೆಲವರಂತೂ ಕಾದಂಬರಿ ಬರೆಯುವ ಮಟ್ಟಕ್ಕೆ ಹೋಗುವಂತೆ ಕಾಣುತಿದ್ದರು. ಆದರೆ ಗಣಪತಿ ಮಾತ್ರ ಒಂದೇ ನಿಮಿಷದಲ್ಲಿ ಉತ್ತರ ಬರೆದು ಕೊಟ್ಟು ಹೊರಟುಹೋದ.

ಆ ವರ್ಷದ ತತ್ವಶಾಸ್ತ್ರದಲ್ಲಿ ಹೆಚ್ಚಿನ ಅಂಕ ಗಣಪತಿಗೆ ದೊರಕಿದ್ದು ಎಲ್ಲ ವಿಧ್ಯಾರ್ಥಿಗಳಿಗೂ ಆಶ್ಚರ್ಯ. ನಾವೆಲ್ಲ ಪುಟಗಟ್ಟಲೆ ಬರೆದಿದ್ದರೂ ಗಣಪತಿಗೆ ಹೆಚ್ಚಿನ ಅಂಕ ಹೇಗೆ ಎಂದು ಪ್ರಾಧ್ಯಾಪಕರನ್ನು ಕೇಳಿದಾಗ. ಪ್ರಾಧ್ಯಾಪಕರು ಗಣಪತಿಯ ಉತ್ತರ ಪತ್ರಿಕೆಯನ್ನು ತೋರಿಸಿದರು.

ಅದರಲ್ಲಿ “ಕುರ್ಚಿ ಎಂದರೇನು?” ಎಂದಷ್ಟೇ ಬರೆದಿದ್ದ ಗಣಪತಿ