jump to navigation

ಕವಿ – ಮಾಲಿ ಆಗಷ್ಟ್ 28, 2009

Posted by Bala in ಕವನ - ಚುಟುಕ.
add a comment

“A true poet does not bother to be poetical. Nor does a nursery gardener scent his roses”
– Jean Cocteau

ಕವಿತ್ವದ ಹಂಗಿಲ್ಲದೆ
ಸಾಹಿತ್ಯವನ್ನು ನೀಡಬಲ್ಲ
ನಿಜವಾದ ಕವಿ,
ಗುಲಾಬಿಯಲ್ಲಿ
ಸುವಾಸನೆಯನ್ನಿಡದ
ತೋಟದ ಮಾಲಿಯಂತೆ

ಗೊಂದಲ ಆಗಷ್ಟ್ 24, 2009

Posted by Bala in ಕವನ - ಚುಟುಕ.
2 comments
Alaska Glacier - by Balakrishna

Alaska Glacier - by Balakrishna

 

ನಿನ್ನ ಗೊಂದಲ
ನನ್ನ ಮನದ ಶಾಂತಿ
ಕದಡಿ ಆಯಿತು
ನನ್ನ ಗೊಂದಲ

ಈ ಹೊತ್ತಿನ ಅರಿವು ಆಗಷ್ಟ್ 21, 2009

Posted by Bala in ಕವನ - ಚುಟುಕ.
2 comments
Sunset

Sunset - Taken by Balakrishna

 

ನನ್ನಂತೆ ನನ್ನ ನಡೆ
ನನ್ನ ನಡೆಯಂತೆ ನಾನು
ಬರೆದವನ ಮನಸ್ಸು
ಬರವಣಿಗೆಯಲ್ಲಿ
ಬರವಣಿಗೆಯಿಂದ
ಬರದವನ ಮನಸ್ಸು
ಶುರುವಿನ ನಂತರ
ಗೋಲಾಕಾರದ ಸುತ್ತು
ಹೊರಬರಲು ಬೇಕು
ಈ ಹೊತ್ತಿನ ಅರಿವು

ಮರದ ಸದ್ದು ಆಗಷ್ಟ್ 1, 2009

Posted by Bala in ಬುದ್ಧ ಮತ್ತು ಝೆನ್.
4 comments

If a tree falls in a forest and no one is around to hear it,
Does the falling tree still makes a sound?

ಮರ(ಚಿತ್ರ ಬಾಲಕೃಷ್ಣ)
Tree Taken by Balakrishna

 

ಕಾಡಿನಲ್ಲೊಂದು ಮರ ಬಿದ್ದು
ಅದನ್ನು ಕೇಳಲು
ಅಲ್ಯಾರೂ ಇರದಿದ್ದಾಗ
ಬಿದ್ದ ಮರ
ಸದ್ದು ಮಾಡುವುದೇ?