jump to navigation

ಇನ್ನೂ ಏನೂ ಸಾಧಿಸಿಲ್ಲಾ ಜೂನ್ 20, 2009

Posted by Bala in ಕವನ - ಚುಟುಕ.
trackback

ಏನೂ ಸಾಧಿಸಿಲ್ಲಾ
ಇಷ್ಟ್ರೊಳಗೇ
ಏನಾದ್ರೂ ಸಾಧಿಸಬೇಕಿತ್ತು, ಆದ್ರೆ
ಇನ್ನೂ ಏನೂ ಸಾಧಿಸಿಲ್ಲಾ

ಸಾಧಿಸ್ಬೇಕು ಅನ್ನೊದು
ಸಾವಿರಾರಿವೆ
ಆದ್ರೆ ಟೈಮಿಲ್ಲಾ ನೋಡಿ
ಹಾಗಾಗಿ….
ಇನ್ನೂ ಏನೂ ಸಾಧಿಸಿಲ್ಲಾ

ಏನ್ಬೇಕಾದ್ರೂ ಸಾಧಿಸೋ
ಶಕ್ತಿಯೆನೋ ಇದೇ, ಆದ್ರೆ
ಯಾವುದ್ನ ಮೊದಲ್
ಸಾಧಿಸ್ಬೇಕು
ಅನ್ನೊದೇ ಗೊಂದಲ ನೋಡಿ
ಹಾಗಾಗಿ….
ಇನ್ನೂ ಏನೂ ಸಾಧಿಸಿಲ್ಲಾ

ನನಗಿಂತಾ ದೊಡ್ಡೋರನ್ನ
ನೋಡಿದ್ರೆ, ಸಾಧಿಸೊಕೆ
ಬಹಳ ಸಮಯ ಇದೆ ಅನ್ಸತ್ತೆ
ಹಾಗಾಗಿ….
ಇನ್ನೂ ಏನೂ ಸಾಧಿಸಿಲ್ಲಾ

ನಿಮ್ಮತ್ರ ಸುಳ್ಯಾಕ್ಹೇಳ್ಳಿ
ಇದುವರೆಗೂ
ಏನೂ ಸಾಧಿಸ್ಬೇಕು
ಅನ್ಕೊಂಡಿರ್ಲಿಲ್ಲಾ
ಹಾಗಾಗಿ….
ಏನನ್ನೂ ಸಾಧಿಸಿಲ್ಲಾ
ಆದ್ರೂ ಮನಸ್ನೊಳಗೆ
ಒಂದು ಹುಳ ಹೇಳ್ತಿರುತ್ತೆ
ಇಷ್ಟ್ರೊಳಗೇ
ಏನಾದ್ರೂ ಸಾಧಿಸಬೇಕಿತ್ತು….

Advertisements

ಟಿಪ್ಪಣಿಗಳು»

1. ಸುನಾಥ - ಜೂನ್ 21, 2009

ಅಹಹಾ! ಚೆನ್ನಾಗಿದೆ ಕವನ!

2. balaglobal - ಜೂನ್ 24, 2009

ಕಾಕ,
ಪ್ರತಿಕ್ರಿಯೆಗೆ ಧನ್ಯವಾದಗಳು.

3. PaLa - ಜೂನ್ 25, 2009

ವ್ಯರ್ಥ ಪ್ರಲಾಪ, ಚೆನ್ನಾಗಿದೆ 🙂

4. balaglobal - ಜೂನ್ 26, 2009

ಪಾಲ,
ನಿಮ್ಮ ಪ್ರತಿಕ್ರಿಯೆ ಮೆಚ್ಚುಗೆಯಾಯಿತು

5. Anil Ramesh - ಜುಲೈ 16, 2009

>>ಆದ್ರೂ ಮನಸ್ನೊಳಗೆ
ಒಂದು ಹುಳ ಹೇಳ್ತಿರುತ್ತೆ
ಹುಳ ಅಲ್ಲು ಹೆಬ್ಬಾವು.

ಅಂದಹಾಗೆ, ಚುಟುಕ ಚೆನ್ನಾಗಿದೆ.

6. balaglobal - ಜುಲೈ 16, 2009

ಅನಿಲ್,
ಹುಳುವನ್ನ ಹೆಬ್ಬಾವಗಿಸಿದ್ದಕ್ಕೆ ಧನ್ಯವಾದಗಳು 🙂


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: