ಇನ್ನೂ ಏನೂ ಸಾಧಿಸಿಲ್ಲಾ ಜೂನ್ 20, 2009
Posted by Bala in ಕವನ - ಚುಟುಕ.6 comments
ಏನೂ ಸಾಧಿಸಿಲ್ಲಾ
ಇಷ್ಟ್ರೊಳಗೇ
ಏನಾದ್ರೂ ಸಾಧಿಸಬೇಕಿತ್ತು, ಆದ್ರೆ
ಇನ್ನೂ ಏನೂ ಸಾಧಿಸಿಲ್ಲಾ
ಸಾಧಿಸ್ಬೇಕು ಅನ್ನೊದು
ಸಾವಿರಾರಿವೆ
ಆದ್ರೆ ಟೈಮಿಲ್ಲಾ ನೋಡಿ
ಹಾಗಾಗಿ….
ಇನ್ನೂ ಏನೂ ಸಾಧಿಸಿಲ್ಲಾ
ಏನ್ಬೇಕಾದ್ರೂ ಸಾಧಿಸೋ
ಶಕ್ತಿಯೆನೋ ಇದೇ, ಆದ್ರೆ
ಯಾವುದ್ನ ಮೊದಲ್
ಸಾಧಿಸ್ಬೇಕು
ಅನ್ನೊದೇ ಗೊಂದಲ ನೋಡಿ
ಹಾಗಾಗಿ….
ಇನ್ನೂ ಏನೂ ಸಾಧಿಸಿಲ್ಲಾ
ನನಗಿಂತಾ ದೊಡ್ಡೋರನ್ನ
ನೋಡಿದ್ರೆ, ಸಾಧಿಸೊಕೆ
ಬಹಳ ಸಮಯ ಇದೆ ಅನ್ಸತ್ತೆ
ಹಾಗಾಗಿ….
ಇನ್ನೂ ಏನೂ ಸಾಧಿಸಿಲ್ಲಾ
ನಿಮ್ಮತ್ರ ಸುಳ್ಯಾಕ್ಹೇಳ್ಳಿ
ಇದುವರೆಗೂ
ಏನೂ ಸಾಧಿಸ್ಬೇಕು
ಅನ್ಕೊಂಡಿರ್ಲಿಲ್ಲಾ
ಹಾಗಾಗಿ….
ಏನನ್ನೂ ಸಾಧಿಸಿಲ್ಲಾ
ಆದ್ರೂ ಮನಸ್ನೊಳಗೆ
ಒಂದು ಹುಳ ಹೇಳ್ತಿರುತ್ತೆ
ಇಷ್ಟ್ರೊಳಗೇ
ಏನಾದ್ರೂ ಸಾಧಿಸಬೇಕಿತ್ತು….
ಜಯದ ಹುಡುಕಾಟ ಜೂನ್ 19, 2009
Posted by Bala in ಕವನ - ಚುಟುಕ.add a comment
Success is not to be pursued;
It is to be attracted by the person we become.
– Jim Rohn
ಜಯವನ್ನು ಅರಸಿ
ಹೊರಟವರಾಗದೆ ನಾವು
ನಮ್ಮ ವ್ಯಕ್ತಿತ್ವದಿಂದ
ಜಯವನ್ನು ಆಕರ್ಶಿಸುವಂತವರಾಗಬೇಕು
ಲೆಕ್ಕಾಚಾರ ಜೂನ್ 18, 2009
Posted by Bala in ಕವನ - ಚುಟುಕ, ಬದುಕು.add a comment
I have been through some terrible things in my life, some of which actually happened.
– Mark Twain
ನನ್ನ ಜೀವನದಲ್ಲಿ ಅನುಭವಿಸಿದ
ಕೆಟ್ಟ ಘಟನೆಗಳು ಹಲವು
ಆದರೆ ನಿಜವಾಗಿಯು ನಡೆದದ್ದು
ಅವುಗಳಲ್ಲಿ ಕೆಲವೇ ಕೆಲವು
ನೀರು ಜೂನ್ 6, 2009
Posted by Bala in ಕವನ - ಚುಟುಕ.Tags: ನೀರು
2 comments
ಅಂದಿನಿಂದ ಎಂದಿಂದಿಗೂ
ಇರುವುದೊಂದೇ ನೀರು
ಮೇಲೆ ಹೋಗಿ
ಕೆಳಗೆ ಸುರಿದು
ಜೀವವನ್ನು ಪೋಷಿಸುತ್ತಿರುವ
ನೀರು
ಅಂದಿಗೂ ಎಂದಿಗೂ
ಹೆಚ್ ಟು ಓನೇ
ನಮ್ಮ ಪೂರ್ವಜರು
ಬಳಸಿದ ಅದೇ ನೀರನ್ನೇ
ನಾವು ಬಳಸುತ್ತಿರುವುದು
ಸನಾತನ ಪ್ರಾಣಿಯೊಂದು
ಕುಡಿದು ಬಿಟ್ಟ ನೀರನ್ನೇ
ನಾವು ಕುಡಿಯುತ್ತಿರುವುದು
ನಮ್ಮೊಡನಿಲ್ಲದೊಂದು ಗಿಡದೊಳಗೆ
ಅಂದು ಹರಿದ ನೀರೇ
ಇಂದು ನಮ್ಮಲ್ಲೂ ಹರಿಯುತ್ತಿರುವುದು
ಅಂದು ಅಲ್ಲಿದ್ದು
ಎಂದೆಂದಿಗೂ ಇಲ್ಲಿರುವ
ನೀರು ಶಾಶ್ವತ
ಜೀವ ನೆಪಮಾತ್ರ
ಬಟ್ಟೆ ಮತ್ತು ನೀರು ಜೂನ್ 4, 2009
Posted by Bala in ಕವನ - ಚುಟುಕ.Tags: ನೀರು, ಬಟ್ಟೆ
2 comments
ಬಟ್ಟೆ ಶುಭ್ರವಾಗಲು
ನೀರು ಕೊಳೆಯಾಗಬೇಕು
ನಿಜ, ಆದರೆ ಕೊಳೆಯಾದ
ನೀರಿನಲ್ಲಿರುವ ನೀರು
ಆವಿಯಾಗಿ
ಮೋಡವಾಗಿ
ಮಳೆಯಾಗಿ
ಮತ್ತೆ ಬಟ್ಟೆ
ತೊಳೆಯಲು
ಸಜ್ಜಾಗಿದೆ