ಜಗತ್ತಿನ ಅತಿ ಕೆಟ್ಟ ಆಹಾರ ಮೇ 27, 2009
Posted by Bala in ಹಾಸ್ಯ, ಹರಟೆ.7 comments
ವೈದ್ಯರೊಬ್ಬರು ತುಂಬಿದ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡುತಿದ್ದರು.
“ನಾವು ನಮ್ಮ ಹೊಟ್ಟೆ ಯೊಳಗೆ ತುರುಕುತ್ತಿರುವ ಎಷ್ಟೂಂದು ಪದಾರ್ಥಗಳು ಎಷ್ಟು ಕೆಟ್ಟವೆಂದರೆ ಹೇಳಲಸಾದ್ಯ. ದಿನನಿತ್ಯ ಸೇವಿಸುವ ತಂಪು ಪಾನೀಯಗಳು, ಕರಿದ ಪದಾರ್ಥಗಳು, ಕೊನೆಗೆ ನಾವು ಕುಡಿಯುವ ನೀರಿನಲ್ಲಿರುವ ಕ್ರಿಮಿಗಳು ನಮ್ಮ ಆರೋಗ್ಯವನ್ನು ಹಾಳು ಮಾಡುತ್ತವೆ…. ಆದರೆ ಎಲ್ಲಕ್ಕಿಂತ ಹೆಚ್ಚು ಹಾನಿಕರವಾದ, ನಾವೆಲ್ಲರೂ ತಿಂದಿರಬಹುದಾದ ಅಥವಾ ಮುಂದೆ ತಿನ್ನಬಹುದಾದ, ಹಾಗು ತಿಂದು ಬಹಳ ವರ್ಷಗಳಾದ ಮೇಲೂ ನಮ್ಮನ್ನು ಕಷ್ಟ, ನೋವಿಗೆ ಗುರಿ ಪಡಿಸುವಂಥಾ ಆಹಾರ ಯಾವುದಿರಬಹುದು ಎಂದು ಯಾರಾದರು ಹೇಳಬಲ್ಲಿರಾ?”
ಸಭೆಯಲ್ಲಿದ್ದವರಿಗೆ ಪ್ರಶ್ನೆ ಕೇಳಿ, ವೈದ್ಯರು ಮಾತು ನಿಲ್ಲಿಸಿದರು.
ಸಭೆ ಒಮ್ಮೆಲೇ ನಿಶ್ಯಭ್ದವಾಯಿತು, ಎಲ್ಲರೂ ಮೌನವಾಗಿದ್ದರು. ಮುಂದೆ ಕುಳಿತಿದ್ದ ವಯೋವೃದ್ದರೊಬ್ಬರು ಮೆಲ್ಲನೆ ತಮ್ಮ ಕೈ ಮೇಲೆತ್ತಿದರು. ಸಭೆಯಲ್ಲಿದ್ದ ಎಲ್ಲರ ಗಮನ ಅ ವಯೋವೃದ್ದರ ಕಡೆಗೆ ಹರಿಯಿತು.
ವಯೋವೃದ್ಧರು ತಮ್ಮ ಮೆದುವಾದ ಧ್ವನಿಯಲ್ಲಿ ಹೇಳಿದರು “ವೆಡ್ಡಿಂಗ್ ಕೇಕ್“!
ವಿ.ಸೂ. ವೈದ್ಯರ ಪ್ರಶ್ನೆಗೆ ಸರಿಯಾದ(!) ಉತ್ತರ ಇನ್ನೂ ಸಿಕ್ಕಿಲ್ಲ, ನಿಮಗೇನಾದರೂ ತಿಳಿದಿದ್ದರೆ ದಯವಿಟ್ಟು ತಿಳಿಸಿ ಪುಣ್ಯ ಕಟ್ಟಿಕೊಳ್ಳಿ.
ಮಗುವಿನ ಮನಸ್ಸು ಮೇ 20, 2009
Posted by Bala in ಕವನ - ಚುಟುಕ, ಬದುಕು.2 comments
Man is most nearly himself when he achieves the seriousness of a child at play.
– Heraclitus
ನಾನು
ನನ್ನ ತನವನ್ನು
ಅರಿಯಲು ಬೇಕು
ಆಟದಲ್ಲಿ
ಮುಳುಗಿರುವ ಎಳೆಯ
ಮಗುವಿನ ಮನಸ್ಸು
ಮಾತು ಮೇ 7, 2009
Posted by Bala in ಕವನ - ಚುಟುಕ.add a comment
Speech is conveniently located midway between thought and action, where it often substitutes for both.
– John Andrew Holmes
ಚಿಂತನೆ, ಕಾರ್ಯಗಳ
ನಡುವೆ ನೆಲೆಸಿರುವ ಮಾತು
ಸಮಯ, ವ್ಯಕ್ತಿಗೆ ತಕ್ಕಂತೆ
ಅವೆರಡೂ ಸಾಧ್ಯತೆಗಳ
ಬದಲಿಯಾಗಬಹುದು