ಕಟ್ಟದಿರು ಹಲವನ್ನು ಏಪ್ರಿಲ್ 27, 2009
Posted by Bala in ಬದುಕು.Tags: ರೂಮಿ
4 comments
You are in love with me,
I shall make you perplexed
Do not build much,
for I intend to have you in ruins.
If you build two hundred houses in a manner that the bees do,
I shall make you as homeless as a fly.
If you are the mount Qaf in stability,
I shall make you whirl like a millstone.
-Rumi
ಕಟ್ಟದಿರು ಹಲವನ್ನು,
ನಿನ್ನನ್ನು ಅವಶೇಷಗಳ ನಡುವೆ
ಇರಿಸಬೇಕೆಂದಿರುವೆ.
ಜೇನಿನಂತೆ ಹಲವಾರು ಮನೆ
ಕಟ್ಟುವಿಯಾದರೆ,
ನಿನ್ನನ್ನು ಮನೆಯಿಲ್ಲದಾ
ನೊಣವನ್ನಾಗಿಸುವೆ.
ಸಹ್ಯಾದ್ರಿಯಂತೆ
ಅಚಲವಾಗಿದ್ದರೆ,
ನಿನ್ನನ್ನು ಗಿರ್ರನೆ ತಿರುಗುವ
ರಾಗಿಕಲ್ಲನ್ನಾಗಿಸುವೆ.
ಇನ್ನಿಲ್ಲದಂತೆ ನನ್ನ ಪ್ರೀತಿಸಿದರೆ
ನಿನ್ನನ್ನು ಕಂಗಾಲಾಗಿಸುವೆ
ಜ್ಯೋತಿಷಿ ಸುಸ್ತೂ! ಏಪ್ರಿಲ್ 23, 2009
Posted by Bala in ಹಾಸ್ಯ, ಹರಟೆ.13 comments
ಜ್ಯೋತಿಶ್ಯಾಲಯ, ನಿಮ್ಮ ಭವಿಷ್ಯವನ್ನು ನಿಖರವಾಗಿ ತಿಳಿಯಲು ಒಮ್ಮೆ ಭೇಟಿ ಕೊಡಿ, ಬೋರ್ಡನ್ನು ಓದಿದ ಮಹಿಳೆಯೊಬ್ಬರು, ಅತ್ತಿತ್ತ ತಿರುಗಿ ಯಾರು ಗಮನಿಸುತ್ತಿಲ್ಲವೆಂದು ಖಚಿತ ಪಡಿಸಿಕೊಂಡು, ಒಳಗೆ ಬಂದರು. ಖಾಲಿಯಿದ್ದ ಕುರ್ಚಿಯೊಂದರಲ್ಲಿ ಮುದುಡಿ ಕುಳಿತರು. ಗಿರಾಕಿ ಬಂದ ಸುಳಿವನ್ನು ಪಡೆದ ಜ್ಯೋತಿಷಿ, ಬಾಗಿಲಿಗೆ ಹಾಕಿದ ಪರದೆ ಸರಿಸಿ, ಮುಖ ಹೊರಗೆ ಹಾಕಿ, “ಒಳಗೆ ಬನ್ನಿ” ಎಂಬ ಆಹ್ವಾನವಿತ್ತರು.
ಹೆಂಗಸು ಸಂಕೋಚದಿಂದ, ತಲೆಯ ಮೇಲಿನ ಸೆರಗನ್ನು ಸರಿ ಪಡಿಸಿಕೊಂಡು, ಒಳಹೋದರು. ತಮ್ಮ ಜಾತಕವನ್ನು ಜ್ಯೋತಿಷಿ ಕೈಗಿತ್ತು, ತಲೆ ತಗ್ಗಿಸಿ ಯಾವುದೋ ಯೋಚನೆಯಲ್ಲಿ ಮಗ್ನರಾದರು. ಜಾತಕವನ್ನು ತುಂಬಾ ಹೊತ್ತು ಪರಿಶೀಲಿಸಿ ನಂತರ, ಜ್ಯೋತಿಷಿ ಭಾರವಾದ ಧನಿಯಲ್ಲಿ ಹೇಳಿದರು, “ಅಮ್ಮಾ, ಕೆಟ್ಟ ಸುದ್ದಿಯೊಂದಿದೆ, ಇನ್ನು ಕೆಲವೇ ತಿಂಗಳುಗಳಲ್ಲಿ ನಿಮ್ಮ ಗಂಡ ಧಾರುಣವಾದ ಸಾವನ್ನಪ್ಪಲಿದ್ದಾರೆ”
ಜ್ಯೋತಿಷಿ ಮಾತಿನಿಂದ ಆಘಾತಕ್ಕೆ ಒಳಗಾದ ಹೆಂಗಸು, ನಿಧಾನವಾಗಿ ಚೇತರಿಸಿಕೊಂಡು, ನಿಡಿದಾದ ಉಸಿರನ್ನು ಒಳತೆಗೆದುಕೊಂಡು, ಧ್ವನಿ ಸರಿಮಾಡಿಕೊಂಡು, ಖಚಿತವಾದ ಧ್ವನಿಯಲ್ಲಿ ಕೇಳಿದರು, “ನಾನು ಕೊಲೆಯ ಅಪರಾಧದಿಂದ ಮುಕ್ತಳಾಗುವೆನಾ?”
ಆಕೆಯ ಮಾತು ಕೇಳಿ ಜ್ಯೋತಿಷಿ ಸುಸ್ತೂ! ಇನ್ನೇನು ಮೂರ್ಚೆ ಹೋಗುವುದೊಂದು ಬಾಕಿ!
ಕಷ್ಟ-ಸುಖ ಏಪ್ರಿಲ್ 19, 2009
Posted by Bala in ಕವನ - ಚುಟುಕ.Tags: ಕಷ್ಟ-ಸುಖ
4 comments
ಜಗತ್ತಿನಲ್ಲಿ ಯಾರಿಗೂ ಇಲ್ಲದ
ದುಃಖ, ಕಷ್ಟ,
ಬೇಸರ ನನಗೆ ಮಾತ್ರ?
ಏಕೆಂದರೆ
ನೋವು, ಕಷ್ಟ,
ಬೇಸರವಿರದ
ಸುಖವೊಂದೇ ಸತ್ಯ
ಎಂಬ ಭ್ರಮೆಯಲ್ಲಿದ್ದೇನೆ ನಾನು
ಕೂಡು-ಕಳೆ ಏಪ್ರಿಲ್ 17, 2009
Posted by Bala in ಕವನ - ಚುಟುಕ.Tags: ಕೂಡು-ಕಳೆ
2 comments
ನನ್ನ ಆಸೆ ಈಡೇರಿ
ಗಳಿಸಿದ ಖುಷಿಯಲ್ಲಿ
ಕಳಕೊಂಡದ್ದು ನನ್ನ
ಅರಿವಿಗೆ ಬರಲಿಲ್ಲ
ಸೂಸನ್ ಬೊಯ್ಲ್ – Susan Boyle ಏಪ್ರಿಲ್ 16, 2009
Posted by Bala in ಬದುಕು.Tags: ಸೂಸನ್ ಬಾಯ್ಲ್, susan boyle
5 comments
೪೭ ವರ್ಷ ವಯಸ್ಸಿನ, ಅತಿ ಸಾಮಾನ್ಯಳಂತೆ ಕಾಣುವ ಸೂಸನ್ ಬೊಯ್ಲ್, ಯಾರಿಗೂ ನಂಬಲಸಾದ್ಯವದದ್ದನ್ನು ಸಾಧಿಸಿದ್ದಾರೆ. ಆಕೆ ಹಾಡಿದ “I Dreamed a Dream (from Les Misérables)” ಹಾಡು ಅದ್ಭುತವಾಗಿದೆ. ಆಕೆಯನ್ನು ನೀವಿನ್ನು ನೋಡಿರದಿದ್ದರೆ ಇಲ್ಲಿ ನೋಡಬಹುದು