jump to navigation

ನನಗೇನು ಬೇಕು ಮಾರ್ಚ್ 4, 2009

Posted by Bala in ಬದುಕು, ಹಾಸ್ಯ, ಹರಟೆ.
trackback

ಪ್ರಖ್ಯಾತ ಕನ್ನಡದ ಗಾಯಕನೊಬ್ಬನ ಕಛೇರಿಯಿಂದ ಜನ ಹೊರಬರುತಿದ್ದಾರೆ, ಅಲ್ಲಿ ನಡೆಯುವ ಒಂದು ಸಂಭಾಷಣೆ.

ಒಬ್ಬ: ಏನ್ ಸಕತ್ತಾಗಿತ್ತಲ್ವಾ

ಇನ್ನೊಬ್ಬ: ಎಲ್ ಸಕತ್ತಾಗಿತ್ರಿ? ನಾನು ಇಷ್ಟ ಪಟ್ಟು ಕಳಿಸಿದ ಒಂದು ಹಾಡ್ನೂ ಹಾಡಲಿಲ್ಲ, ಜೊತೆಗೆ ಬರೀ ತೆಲುಗು ತಮಿಳು ಹಿಂದಿ ಹಾಡನ್ನೇ ಜಾಸ್ತಿ ಹಾಡಿ,  ಒಂದೋ ಎರಡೋ ಕನ್ನಡ ಹಾಡನ್ನ ಹಾಡಿದ, ನನಗ್ಯಾಕೋ ಒಂಚೂರು ಇಷ್ಟ ಆಗಲಿಲ್ಲ. ಇನ್ನು  ಮುಂದೆ ಈ ಗಾಯಕನ ಕಚೇರಿಯಿದೆ ಎಂದರೆ ಆ ಕಡೆ ತಲೆ ಹಾಕಿ ಕೂಡ ಮಲಗೋದಿಲ್ಲ.

ಒಬ್ಬ: ನೀವು ಹೇಳೋದು ಸರಿ, ಇವನು ಕನ್ನಡದ ಹಾಡನ್ನ ಹಾಡೋದು ಬಿಟ್ಟು ಬೇರೆ ಭಾಷೆ ಹಾಡನ್ನೇ ಜಾಸ್ತಿ ಹಾಡಿದ, ಹೆಸರಿಗೆ ಮಾತ್ರ ಇದು ಕನ್ನಡ ಸಂಗೀತ ಕಛೇರಿ.

ಇನ್ನೊಬ್ಬ: ಅಲ್ಲಾರಿ, ಏನೋ ಕನ್ನಡ ಹಾಡನ್ನ ಕೇಳೋಣ ಅಂತ, ಅಷ್ಟು ದುಡ್ಡು ಕೊಟ್ಟು, ಅಷ್ಟು ದೂರದಿಂದ ಬಂದರೆ, ಇಲ್ಲಿ ನೋಡಿ ಪರಿಸ್ಥಿತಿ ಹೇಗಿದೆ ಅಂತಾ? ತಣ್ಣಗೆ ಮನೇಲೆ ಕೂತು ಕನ್ನಡ ಕ್ಯಾಸೆಟ್ ಕೇಳಿಕೊಂಡಿರಬಹುದಿತ್ತು.

ಒಬ್ಬ: ನೀವು ಹೇಳೋದು ನಿಜ, ನಾನು ಬೇರೆ ನನ್ನ ಹೆಂಡತಿಗೆ ಹೇಳದೆ ಬಂದಿದೀನಿ!

ಇನ್ನೊಬ್ಬ: ಸರಿ ಮತ್ತೆ ಸಿಗೋಣ.

ಇನ್ನೊಬ್ಬನ ನಿರ್ಗಮನ ಮತ್ತೊಬ್ಬನ ಆಗಮನ

ಮತ್ತೊಬ್ಬ: ಏನ್ ಸೂಪರ್ರಾಗಿತ್ತಲ್ವ ಕಚೇರಿ, ನೀವು ಏನೇ ಹೇಳಿ, ಒಂದೊಂದು ಹಾಡು ಕಿವಿಗಳಿಗೆ ಇಂಪು ಅಂದರೇನು ಎಂಬುದರ ಪರಿಚಯ ಮಾಡಿಕೊಟ್ಟವು. ಮೊದಲಬಾರಿಗೆ ರಸಾನುಭವದ ಅನುಭವವಾಯಿತು. ಇನ್ನು ಮುಂದೆ ಈ ಗಾಯಕನ ಕಛೇರಿಯನ್ನು ಎಂದೂ ತಪ್ಪಿಸಿಕೊಳ್ಳುವುದಿಲ್ಲ.

ಒಬ್ಬ: ಹಂಗಂತೀರಾ , ನನಗೂ ಹಾಡುಗಳು ಇಷ್ಟಾ ಆದವು,  ಆದರೆ ಈತ ಬರೀ ಬೇರೆ ಭಾಷೆ ಹಾಡುಗಳನ್ನೇ ಜಾಸ್ತಿ ಹಾಡಿದ ಅನ್ನಿಸ್ಲಿಲ್ವೆ.

ಮತ್ತೊಬ್ಬ: ರಸಾನುಭಕ್ಕೆ ಭಾಷೆಯ ಬೇಲಿಯೆಲ್ಲಿರುತ್ತೆ, ಹಾಡು ಹಾಡೇ, ಸ್ವರಗಳ ಏರಿಳಿತ, ಮಾಧುರ್ಯ ಮುಖ್ಯವಲ್ಲವೆ. ಗಾಯನದಲ್ಲಿ ಭಾಷೆಯ ಪಾತ್ರ ಗೌಣ ಎಂಬುದು ನನ್ನ ಅಭಿಪ್ರಾಯ.

ಒಬ್ಬ: ನೀವು ಹೇಳೋದು ನಿಜ, ಅಂತೂ ನನ್ನ ಹೆಂಡತಿಗೆ ಹೇಳದೆ ಬಂದಿದ್ದು ಸಾರ್ಥಕ ಆಯಿತು.

ಮತ್ತೊಬ್ಬ: ಸರಿ ಮುಂದಿನ ಕಛೇರಿಯಲ್ಲಿ ಮತ್ತೆ ಭೇಟಿಯಾಗೋಣ.

ಮತ್ತೊಬ್ಬನ ನಿರ್ಗಮನ

ಒಬ್ಬ: ಸಧ್ಯ ಇವತ್ತು ನಾನು ಬಚಾವ್, ನಾನಂತೂ ಕಛೇರಿ ಶುರುವಾದಾಗಿನಿಂದ ಮುಗಿಯುವವರೆಗೂ ಕಛೇರಿಯಲ್ಲಿದ್ದವರನ್ನೆಲ್ಲ ಸರಿಯಾಗಿ ಗಮನಿಸುತ್ತಿದ್ದೆ, ನನ್ನ ಹೆಂಡತಿಯ ಗೆಳತಿಯರಾರು ಕಂಡಿರಲಿಲ್ಲ !

Advertisements

ಟಿಪ್ಪಣಿಗಳು»

1. ಸುನಾಥ - ಮಾರ್ಚ್ 4, 2009

ಹಹ್ಹಹ್ಹಾ!!

2. Vikas Hegde - ಮಾರ್ಚ್ 5, 2009

🙂

3. ರಂಜಿತ್ - ಮಾರ್ಚ್ 5, 2009

🙂

4. balaglobal - ಮಾರ್ಚ್ 6, 2009

ಕಾಕ, ವಿಕಾಸ್, ರಂಜಿತ್
🙂

5. ranjanahegde - ಏಪ್ರಿಲ್ 17, 2009

ತಮ್ಮ ಸಾಲುಗಳಿಂದ ಭಾಷೆ ಮುಖ್ಯವಲ್ಲ ಭಾವನೆ ಮುಖ್ಯ ಎಂದು ತಿಳಿಸಿಕೊಟ್ಟಿದ್ದು ತುಂಬಾ ಚೆನ್ನಾಗಿತ್ತು..

6. balaglobal - ಏಪ್ರಿಲ್ 19, 2009

ರಂಜನ,
ನಿಮ್ಮ ಅನಿಸಿಕೆಗೆ ಧನ್ಯವಾದಗಳು.

-ಬಾಲ.


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: