ಮಿಥ್ಯಾ ಫೆಬ್ರವರಿ 15, 2009
Posted by Bala in ಕವನ - ಚುಟುಕ, ಬದುಕು.4 comments
If a man is offered a fact which goes against his instincts, he will scrutinize it closely, and unless the evidence is overwhelming, he will refuse to believe it. If, on the other hand, he is offered something which affords a reason for acting in accordance to his instincts, he will accept it even on the slightest evidence. The origin of myths is explained in this way.
– Bertrand Russel
ಮಿಥ್ಯಾ
ನನ್ನ ನಂಬಿಕೆಗೆ
ವಿರುದ್ದವಾದದ್ದನ್ನು ನಂಬಲು
ಬಲವಾದ ಕಾರಣವನ್ನು
ಹುಡುಕುವ ನಾನು
ನನ್ನ ನಂಬಿಕೆಗೆ
ಅನುಗುಣವಾದದ್ದನ್ನು ಒಪ್ಪಲು
ಕ್ಷುಲ್ಲುಕ ಕಾರಣವೊಂದು ಸಾಕು
ಬಯಕೆ ಫೆಬ್ರವರಿ 9, 2009
Posted by Bala in ಕವನ - ಚುಟುಕ.Tags: ಬಯಕೆ
3 comments
ಬಯಕೆಗಳು ಅರಳಲು
ಮನದಲ್ಲಿ ನಿಲ್ಲದ ಕಾತರದ ಸಾಲು
ಬಯಕೆಗಳು ಇಲ್ಲದಿರೆ
ಎನ್ನುವರೆ ಅದನ್ನೂ ಒಂದು ಬಾಳು
ತೀರದ ಬಯಕೆ
ಕಾಡುವ ಮರೀಚಿಕೆ
ಬೆನ್ನೇರಿ ಹೊರಟಿರುವ ನಾನು
ತಲುಪುವೆನೇ ನನ್ನ ಕಾನು
ಹೆಂಡತಿಯ ಭಯ ಫೆಬ್ರವರಿ 3, 2009
Posted by Bala in ಹಾಸ್ಯ, ಹರಟೆ.Tags: ಹೆಂಡತಿಯ ಭಯ
4 comments
ಒಮ್ಮೆ ಒಬ್ಬ ಪೋಲಿಸ್, ಬಹಳ ದೂರ ಅಟ್ಟಿಸಿಕೊಂಡು ಹೋಗಿ ಕಷ್ಟ ಪಟ್ಟು, ತಪ್ಪು ಮಾಡಿದವನ ಕಾರನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿವಂತೆ ಮಾಡುವಲ್ಲಿ ಯಶಸ್ವಿಯಾದ.
ನಂತರ ಪೋಲಿಸ್, ಚಾಲಕನ ಬಳಿ ಬಂದು, “ಅಲ್ಲಯ್ಯ, ನಿನ್ನ ಕಾರಿನ ಹಿಂದಿನ ಲೈಟ್ ಉರಿಯುತ್ತಿಲ್ಲ ಎಂದು ಹೇಳಲು ನಿನ್ನನ್ನು ಹಿಂಬಾಲಿಸಿದೆ, ಅದ್ಯಾಕೆ ನೀನು ನಾನು ಹಿಂದೆ ಬಿದ್ದ ತಕ್ಷಣ ಒಳ್ಳೆ ರಾಕೆಟ್ ಥರ ಕಾರ್ ಓಡಿಸಿಕೊಂಡು ಹೋದೆ?” ಎಂದು ಪ್ರಶ್ನಿಸಿದ.
ಅದಕ್ಕೆ ಚಾಲಕ ಉತ್ತರಿಸಿದ , “ಏನಿಲ್ಲ, ಕಳೆದ ವಾರ ನನ್ನ ಹೆಂಡತಿ ಒಬ್ಬ ಪೋಲಿಸನ ಜೊತೆ ಓಡಿಹೋಗಿದ್ದಳು. ನೀವು ನನ್ನ ಹೆಂಡತಿಯನ್ನು ಮತ್ತೆ ಹಿಂದಿರುಗಿಸಲು ನನ್ನ ಹಿಂದೆ ಬಿದ್ದಿದ್ದೀರಿ ಎಂದು ಭಯವಾಯಿತು. ಅದಕ್ಕೆ…..”