ವಿಪರ್ಯಾಸ ಜನವರಿ 30, 2009
Posted by Bala in ಕವನ - ಚುಟುಕ, ಬದುಕು.Tags: ವಿಪರ್ಯಾಸ
3 comments
Every generation imagines itself to be more intelligent than the one that went before it, and wiser than the one that comes after it.
– George Orwell
ವಿಪರ್ಯಾಸ
ತಾವು ತಮ್ಮ ಪೂರ್ವಜರಿಗಿಂತ
ಬುದ್ಧಿವಂತರು ಹಾಗು
ಮುಂದಿನ ಪೀಳಿಗೆಯವರಿಗಿಂತ
ವಿವೇಕಿಗಳು ಎಂಬ
ಈ ತಲೆಮಾರಿನ ಜನರ ಕಲ್ಪನೆ
ಕೇಳಿದ್ದು ಮರೆತೊ….. ಜನವರಿ 14, 2009
Posted by Bala in ಕವನ - ಚುಟುಕ, ಬದುಕು.4 comments
I hear and I forget. I see and I remember. I do and I understand.
– Confucius
ಕೇಳಿದ್ದು ಮರೆತೊ….ಗತ್ತೆ
ನೋಡಿದ್ದು ನೆನೆಪಿನಲ್..ಇರತ್ತೆ
ಓದಿದ್ದು ಮನಸ್ಸಿನಲ್..ಇರತ್ತೆ
ಮಾಡಿದ್ದು ಅರ್ಥವಾ….ಗತ್ತೆ
ಡೇವ್ ಬ್ಯಾರಿಯ ಕೆಲವು ಪಾಠಗಳು ಜನವರಿ 5, 2009
Posted by Bala in ಬದುಕು.6 comments
ಡೇವ್ ಬ್ಯಾರಿ ಎಂಬುವನು ೫೦ ವರುಷಗಳಲ್ಲಿ ಕಲಿತ ೧೬ ಪಾಠಗಳನ್ನು ಗುರುತಿಸಿದ್ದಾನೆ, ಅವುಗಳಲ್ಲಿ ನನ್ನ ಮೆಚ್ಚಿನ ಕೆಲವನ್ನು ಇಲ್ಲಿ ಕೊಡುತಿದ್ದೇನೆ.
- ನಿದ್ರೆ ಮಾತ್ರೆ ತೊಗೊಂಡ ದಿನ ಭೇದಿ ಮಾತ್ರೆ ತೊಗೊಬೇಡಿ.
- ಮನುಷ್ಯ ಇನ್ನು ಯಾಕೆ ತನ್ನ ಪೂರ್ಣ ಸಾಮರ್ಥ್ಯವನ್ನು ಉಪಯೋಗಿಸಿಕೊಂಡಿಲ್ಲ ಅಥವಾ ಸಾಧಿಸಿಲ್ಲ ಎನ್ನುವುದಕ್ಕೆ ಒಂದು ಪದದ ಕಾರಣ ಹೇಳಬೇಕೆಂದರೆ ಅದು ‘ಮೀಟಿಂಗ್’.
- ತಮ್ಮ ಧಾರ್ಮಿಕ ವಿಷಯವನ್ನು ನಿಮಗೆ ತಿಳಿಸಲು ಬರುವ ಜನ ನಿನ್ನ ಧಾರ್ಮಿಕ ವಿಷಯವನ್ನು ಅರಿಯುವುದರಲ್ಲಿ ಏನೇನು ಆಸಕ್ತಿ ವಹಿಸುವುದಿಲ್ಲ.
- ಗಂಡಸು ಒಂದು ರೀತಿ ವೈನ್ ಇದ್ದಂತೆ. ಶುರುವಿನಲ್ಲಿ ಗಂಡಸು ದ್ರಾಕ್ಷಿ ಯಾಗಿರುತ್ತಾನೆ, ಈ ದ್ರಾಕ್ಷಿಯಲ್ಲಿರುವ ಗಡಸುತನವನ್ನು ಚೆನ್ನಾಗಿ ತುಳಿದು, ಮಾಗಿಸಿ, ಸುಧಾರಿಸಿ ಸೊಗಸಾದ ವೈನ್ ಮಾಡುವುದು ಹೆಂಗಸು.