ಕಣ್ಣೀರ ಧಾರೆ ಇದೇಕೆ ಇದೇಕೆ

ರಾಜ್ ಕುಮಾರ್ ರವರು  ಶೋಕರಸದಲ್ಲಿ ಹಾಡಿರುವ ’ಕಣ್ಣೀರ ಧಾರೆ ಇದೇಕೆ ಇದೇಕೆ’ ಗೀತೆ ನನ್ನ ಮೆಚ್ಚಿನ ಚಿತ್ರಗೀತೆ. ತಾನು ಕುರುಡನಾದನೆಂದು ತಿಳಿದು ದುಃಖಿತಳಾದ ಗೆಳತಿಯನ್ನು ಸಂತೈಸುವ ಚಿತ್ರಣ ಹಾಡಿನಲ್ಲಿ ಸೊಗಸಾಗಿ ಮೂಡಿಬಂದಿದೆ. ಬಾಳೆಲ್ಲಾ ಇರುಳಾದರು, ನಿನ್ನ ಕಣ್ಣಿನಿಂದ ಈ ಜಗತ್ತನ್ನು ನೋಡಬಲ್ಲೆ, ಬರುವುದು ಬರಲೆಂದು ನಸುನಗುತ ಬಾಳದೆ, ಓ ನನ್ನ ಗೆಳತಿ ಕಣ್ಣೀರ ಧಾರೆ ಇದೇಕೆ ಇದೇಕೆ…

ಕಣ್ಣೀರ ಧಾರೆ ಇದೇಕೆ ಇದೇಕೆ
ನನ್ನೊಲವಿನಾ ಹೂವೆ ಈ ಶೋಕವೇಕೆ

ಬಾಳೆಲ್ಲ ನನಗೆ ಇರುಳಾದರೇನು
ಜೊತೆಯಾಗಿ ಎಂದೆಂದು ನೀನಿಲ್ಲವೇನು
ನಾನಿನ್ನ ಕಣ್ಣಿಂದ ನೊಡುತಿರೆ ಸೊಗಸೆಲ್ಲಾ
ನಿನ್ನಲ್ಲಿ ನೊವು ಇದೇಕೆ ಇದೇಕೆ

ವಿಧಿಯಾಟವೇನೆಂದು ಬಲ್ಲವರು ಯಾರು
ಮುಂದೇನು ಎಂದು ಹೇಳುವರು ಯಾರು
ಬರುವುದು ಬರಲೆಂದು ನಸುನಗುತ ಬಾಳದೆ
ನಿರಾಸೆ ವಿಶಾದ ಇದೇಕೆ ಇದೇಕೆ

ಕೊನೆ ಹನಿ:
ಮೆಟ್ರೊದಲ್ಲಿ ಪ್ರಯಾಣಿಸುತಿದ್ದಾಗ, ಪಕ್ಕದಲ್ಲಿ ಕುರುಡು ವ್ಯಕ್ತಿಯೊಬ್ಬರು ನಿಂತಿದ್ದರು . ಅವರ ಮುಂದೆ ಇದ್ದ ಸೀಟಿನಲ್ಲಿ ಇಬ್ಬರು ಹೆಂಗಸರು ಕುಳಿತಿದ್ದರು. ಮುಂದಿನ ಸ್ಟಾಪ್ ನಲ್ಲಿ ಒಬ್ಬ ಮಹಿಳೆ ಇಳಿದು ಕೊಂಡಾಗ, ಈ ಕುರುಡು ವ್ಯಕ್ತಿ ನೇರವಾಗಿ ಖಾಲಿಯಾದ ಸ್ಥಳದಲ್ಲಿ ಹೋಗಿ ಸರಿಯಾಗಿ ಕುಳಿತುಕೊಂಡರು. ಇದು ಆ ವ್ಯಕ್ತಿಗೆ ದೈನಂದಿನ ಕಾರ್ಯವಾಗಿದ್ದರು, ಕಣ್ಣು ಇದ್ದವರಂತೆ ಅಷ್ಟು ನಿಖರವಾಗಿ ಹೋಗಿ ಕುಳಿತುಕೊಂಡಿದ್ದು ನನಗೆ ಆಶ್ಚರ್ಯವಾಗಿ ಕಂಡಿತು. ಹಾಗೆ ಮನಸ್ಸು ಕುರುಡನೊಬ್ಬ ತನ್ನ ಗೆಳತಿಯ ವೇದನೆಯನ್ನು ಅರಿತು ಆಕೆಯನ್ನು ಸಂತೈಸುವ ಗೀತೆ ನೆನಪಾಯಿತು.

10 thoughts on “ಕಣ್ಣೀರ ಧಾರೆ ಇದೇಕೆ ಇದೇಕೆ

  1. ನಿನ್ನೆ ಈ ಚಲನಚಿತ್ರ ಉದಯ ಮೂವೀಸ್ ವಾಹಿನಿಯಲ್ಲಿ ಪ್ರಸಾರವಾಯ್ತು.

    ನನ್ನ ಮೆಚ್ಚಿನ ಚಿತ್ರಗೀತೆಗಳಲ್ಲಿ ಈ ಹಾಡೂ ಒಂದು.
    ಅಂದ ಹಾಗೆ, ನನ್ನ ಬ್ಲಾಗಿಗೆ ಒಮ್ಮೆ ಭೇಟಿಕೊಡಿ.
    http://anil-ramesh.blogspot.com

    ಅನಿಲ್.

  2. ಅನಿಲ್,
    ಪ್ರತಿಕ್ರಿಯೆಗೆ ಧನ್ಯವಾದಗಳು, ನಿಮ್ಮ ಬ್ಲಾಗ್ ನೋಡಿದೆ, ತುಂಬಾ ಚೆನ್ನಾಗಿದೆ, ನಿಮ್ಮ ಬ್ಲಾಗ್ ಈಗ ನನ್ನ ಕನ್ನಡ ಪೋರ್ಟಲ್ ಅನ್ನು ಅಲಂಕರಿಸಿದೆ.

    -ಬಾಲ.

  3. ಇದರ ಮೂಲ ರಾಗ ಜಗಜೀತ್ ಸಿಂಗ್ ಹಾಡಿರುವ
    “ಕೋಈ ಯಾದ್ ಆಯಾ ಸವೇರೆ ಸವೇರೆ
    ಖುದಾ ಯಾದ್ ಆಯಾ ಸವೇರೆ ಸವೇರೆ”
    ದಿಂದ ಎಂ ರಂಗರಾವ್ ಕದ್ದದ್ದು ಎಂದು ಗೊತ್ತಾ?

    -ಕೇಶವ (www.kannada-nudi.blogspot.com)

  4. ಕೇಶವ್,
    ಖಂಡಿತವಾಗಿಯೂ ಈ ವಿಷಯ ತಿಳಿದಿರಲಿಲ್ಲ, ವಿಷಯವನ್ನು ತಿಳಿಸಿದ್ದಕ್ಕೆ ಧನ್ಯವಾದಗಳು.
    ಇಲ್ಲಿ ಹಾಡಿನ ರಾಗ ಬಹಳ ಮುಖ್ಯವಾದರೂ, ನನಗೆ ತುಂಬಾ ಹಿಡಿಸಿದ್ದು ಚಿತ್ರದಲ್ಲಿನ ಸಂಧರ್ಭಕ್ಕೆ ಹೊಂದುವ ಹಾಡಿನ ಪದಗಳು , ಕುರುಡು ವ್ಯಕ್ತಿಯೊಬ್ಬ ಗೆಳತಿಯನ್ನು ಸಂತೈಸುಲು ಬಳಸುವ ಪದಗಳು.

    ಸ್ನೇಹದೊಂದಿಗೆ,
    -ಬಾಲ.

  5. ಈ ಹಾಡು ಹಿಂದುಸ್ತಾನಿಯ ಲಲಿತ್ ರಾಗದಲ್ಲಿದೆಯಲ್ಲವೇ.. ಕಿಶೋರ್ ಕುಮಾರ್ ಹಾಡಿದ “ಮಂಝಿಲೆ ಅಪ್ನಿ ಜಗಹ್ ಹೆ, ರಾಸ್ತೆ ಅಪ್ನಿ ಜಗಹ್” ಹಾಡು ಕೂಡ ಇದೇ ರಾಗದಲ್ಲಿದೆ.


    PaLa

  6. ಪಾಲ,
    ನನಗೆ ಸಂಗೀತದ ಜ್ಞಾನ ವಿಲ್ಲ, ಆದರೆ ಕಿಶೋರ್ ಕುಮಾರ್ ಹಾಡಿರುವ “ಮಂಝಿಲೆ ಅಪ್ನಿ ಜಗಹ್ ಹೆ, ರಾಸ್ತೆ ಅಪ್ನಿ ಜಗಹ್” ಕೂಡ ನನ್ನ ಮೆಚ್ಚಿನ ಗೀತೆ, ಅಂದ ಮೇಲೆ ಲಲಿತ್ ರಾಗ ನನ್ನ ಮೆಚ್ಚಿನ ರಾಗ ಎಂದಾಯಿತು. ರಾಗದ ವಿಷಯ ತಿಳಿಸಿದ್ದಕ್ಕೆ ಧನ್ಯವಾದಗಳು.

    ಸ್ನೇಹದೊಂದಿಗೆ,
    -ಬಾಲ.

  7. ಟಿವಿಯಲ್ಲಿ ಈಗ ಈ ಪದ್ಯ ಪ್ರಸಾರವಾಗುತ್ತಿದೆ, ಇದರ ರಾಗ ಯಾವುದೆಂದು ಹುಡುಕುತ್ತಾ ಇಲ್ಲಿಗೆ ಬಂದೆ. ಧನ್ಯವಾದಗಳು.

ನಿಮ್ಮ ಟಿಪ್ಪಣಿ ಬರೆಯಿರಿ