ಸತ್ಯದ ನದಿಯೊಂದು.. ಡಿಸೆಂಬರ್ 31, 2008
Posted by Bala in ಬದುಕು.Tags: ಹೊಸ ವರ್ಷದ ಹಾರ್ದಿಕ ಶುಭಾಶಯಗಳು
6 comments
Truth is a river that is always splitting up into arms that reunite. Islanded between the arms, the inhabitants argue for a lifetime as to which is the main river.
– Cyril Connolly
ಸತ್ಯದ ನದಿಯೊಂದು
ಕವಲೊಡೆದು
ಕವಲೊಡೆದ ಬಾಹುಗಳು
ಒಂದಾಗುವುದು ನಿರಂತರ
ಸತ್ಯದ ಬಾಹುಗಳ
ನಡುವಿನ ದ್ವೀಪದ ನಾವು
ಜೀವನ ಪರ್ಯಂತ
ಯಾವ ಕವಲು
ಮುಖ್ಯನದಿಯೆಂದು
ಚಿಂತಿಸುವುದರಲ್ಲಿಯೇ
ಕಾಲ ಕಳೆಯುತ್ತೇವೆ
ನಿಮ್ಮೆಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು, ಹೊಸ ವರ್ಷದಲ್ಲಿ ನಿಮ್ಮೆಲ್ಲರ ಸಂಕಲ್ಪಗಳು ನಿರ್ವಿಘ್ನವಾಗಿ ನೆರವೇರಲಿ ಎಂದು ಹಾರೈಸುತ್ತೇನೆ.
ಕಣ್ಣೀರ ಧಾರೆ ಇದೇಕೆ ಇದೇಕೆ ಡಿಸೆಂಬರ್ 16, 2008
Posted by Bala in ಬದುಕು.Tags: ಚಿತ್ರಗೀತೆಗಳು
10 comments
ರಾಜ್ ಕುಮಾರ್ ರವರು ಶೋಕರಸದಲ್ಲಿ ಹಾಡಿರುವ ’ಕಣ್ಣೀರ ಧಾರೆ ಇದೇಕೆ ಇದೇಕೆ’ ಗೀತೆ ನನ್ನ ಮೆಚ್ಚಿನ ಚಿತ್ರಗೀತೆ. ತಾನು ಕುರುಡನಾದನೆಂದು ತಿಳಿದು ದುಃಖಿತಳಾದ ಗೆಳತಿಯನ್ನು ಸಂತೈಸುವ ಚಿತ್ರಣ ಹಾಡಿನಲ್ಲಿ ಸೊಗಸಾಗಿ ಮೂಡಿಬಂದಿದೆ. ಬಾಳೆಲ್ಲಾ ಇರುಳಾದರು, ನಿನ್ನ ಕಣ್ಣಿನಿಂದ ಈ ಜಗತ್ತನ್ನು ನೋಡಬಲ್ಲೆ, ಬರುವುದು ಬರಲೆಂದು ನಸುನಗುತ ಬಾಳದೆ, ಓ ನನ್ನ ಗೆಳತಿ ಕಣ್ಣೀರ ಧಾರೆ ಇದೇಕೆ ಇದೇಕೆ…
ಕಣ್ಣೀರ ಧಾರೆ ಇದೇಕೆ ಇದೇಕೆ
ನನ್ನೊಲವಿನಾ ಹೂವೆ ಈ ಶೋಕವೇಕೆ
ಬಾಳೆಲ್ಲ ನನಗೆ ಇರುಳಾದರೇನು
ಜೊತೆಯಾಗಿ ಎಂದೆಂದು ನೀನಿಲ್ಲವೇನು
ನಾನಿನ್ನ ಕಣ್ಣಿಂದ ನೊಡುತಿರೆ ಸೊಗಸೆಲ್ಲಾ
ನಿನ್ನಲ್ಲಿ ನೊವು ಇದೇಕೆ ಇದೇಕೆ
ವಿಧಿಯಾಟವೇನೆಂದು ಬಲ್ಲವರು ಯಾರು
ಮುಂದೇನು ಎಂದು ಹೇಳುವರು ಯಾರು
ಬರುವುದು ಬರಲೆಂದು ನಸುನಗುತ ಬಾಳದೆ
ನಿರಾಸೆ ವಿಶಾದ ಇದೇಕೆ ಇದೇಕೆ
ಕೊನೆ ಹನಿ:
ಮೆಟ್ರೊದಲ್ಲಿ ಪ್ರಯಾಣಿಸುತಿದ್ದಾಗ, ಪಕ್ಕದಲ್ಲಿ ಕುರುಡು ವ್ಯಕ್ತಿಯೊಬ್ಬರು ನಿಂತಿದ್ದರು . ಅವರ ಮುಂದೆ ಇದ್ದ ಸೀಟಿನಲ್ಲಿ ಇಬ್ಬರು ಹೆಂಗಸರು ಕುಳಿತಿದ್ದರು. ಮುಂದಿನ ಸ್ಟಾಪ್ ನಲ್ಲಿ ಒಬ್ಬ ಮಹಿಳೆ ಇಳಿದು ಕೊಂಡಾಗ, ಈ ಕುರುಡು ವ್ಯಕ್ತಿ ನೇರವಾಗಿ ಖಾಲಿಯಾದ ಸ್ಥಳದಲ್ಲಿ ಹೋಗಿ ಸರಿಯಾಗಿ ಕುಳಿತುಕೊಂಡರು. ಇದು ಆ ವ್ಯಕ್ತಿಗೆ ದೈನಂದಿನ ಕಾರ್ಯವಾಗಿದ್ದರು, ಕಣ್ಣು ಇದ್ದವರಂತೆ ಅಷ್ಟು ನಿಖರವಾಗಿ ಹೋಗಿ ಕುಳಿತುಕೊಂಡಿದ್ದು ನನಗೆ ಆಶ್ಚರ್ಯವಾಗಿ ಕಂಡಿತು. ಹಾಗೆ ಮನಸ್ಸು ಕುರುಡನೊಬ್ಬ ತನ್ನ ಗೆಳತಿಯ ವೇದನೆಯನ್ನು ಅರಿತು ಆಕೆಯನ್ನು ಸಂತೈಸುವ ಗೀತೆ ನೆನಪಾಯಿತು.