jump to navigation

ಹಾಗೇನಿಲ್ಲ….. ನವೆಂಬರ್ 25, 2008

Posted by Bala in ಬದುಕು, ಹಾಸ್ಯ, ಹರಟೆ.
trackback

ಮೂರು ಜನ ಮಧ್ಯ ವಯಸ್ಸಿನ ಹೆಂಗಸರು ಬ್ಯೂಟಿ ಪಾರ್ಲರ್ ಒಂದರಲ್ಲಿ ಕುಳಿತು ತಮ್ಮ ಸರದಿಗಾಗಿ ಕಾಯುತಿದ್ದರು. ಅವರಲ್ಲಿ ಒಬ್ಬಾಕೆ ಮೆಲ್ಲಗೆ ಮಾತು ಶುರುಮಾಡಿ, ಆ ಈ ವಿಶಯಗಳನ್ನೆಲ್ಲ ದಾಟಿ ನಂತರ, “ನಿನ್ನೆ ಏನಾಯಿತು ಗೊತ್ತಾ, ನಮ್ಮೆಜಮಾನ್ರು ಆಫೀಸಿಗೆ ಹೋಗ್ತೀನಿ ಅಂತ ಹೋದ್ರು, ಸ್ವಲ್ಪ ಹೊತ್ತಾದ ಮೇಲೆ ನಾನು ಆಫೀಸಿಗೆ ಫೋನ್ ಮಾಡಿದ್ರೆ, ಅವರು ಆಫೀಸಿಗೆ ಹೊಗಿಲ್ಲ ಅಂತ ಗೊತ್ತಾಯಿತು”, ಎಂದಳು.

ಅದಕ್ಕೆ ಇನ್ನೊಬ್ಬ ಹೆಂಗಸು, “ಅಯ್ಯೋ ನನ್ನ ವಿಷಯ ಕೇಳಿ, ನಮ್ಮೆಜಮಾನ್ರು ಸ್ನೇಹಿತನ ಮನೆಗೆ ಹೊಗ್ತೀನಿ ಅಂತ ಹೇಳಿದ್ರು, ಸ್ನೇಹಿತನ ಮನೆಗೆ ಫೋನ್ ಮಾಡಿದ್ರೆ ಅಲ್ಲಿಗೆ ಹೋಗೆ ಇಲ್ಲವಂತೆ”, ಎಂದಳು.

ಇಬ್ಬರ ಮಾತನ್ನು ಕೇಳಿಸಿಕೊಳ್ಳುತಿದ್ದ ಮತ್ತೊಬ್ಬಾಕೆ, ನಿಧಾನವಾಗಿ, “ನಮ್ಮೆಜಮಾನ್ರು ಎಲ್ಲಿರ್ತಾರೆ ಅಂತ ನನಗೆ ಚೆನ್ನಾಗಿ ಗೊತ್ತು”, ಎಂದಳು.

ಇನ್ನಿಬ್ಬರು ಹೆಂಗಸರು ಒಟ್ಟಿಗೆ, “ಸಾಧ್ಯಾನೇ ಇಲ್ಲ ! ನಿಮ್ಮ ಗಂಡ ನಿಮಗೆ ಸುಳ್ಳು ಹೇಳಿ ನಂಬಿಸಿದ್ದಾರೆ, ಅವರ ಮಾತನ್ನ ನಂಬಬೇಡಿ”, ಎಂದು ಕಿರುಚಿದರು.

ಅದಕ್ಕೆ ಇನ್ನೊಬ್ಬಾಕೆ ನಿಧಾನವಾಗಿ, “ಹಾಗೇನಿಲ್ಲ, ನಾನು ವಿಧವೆಯಾಗಿ ಒಂದು ವರುಷವಾಯಿತು” ಎಂದಳು.

Advertisements

ಟಿಪ್ಪಣಿಗಳು»

1. ಪಾಲಚಂದ್ರ - ನವೆಂಬರ್ 30, 2008

ಸಾರ್, ಗಂಡಸರು ಸಾಯೋವರೆಗೂ ಸುಳ್ಳು ಹೇಳ್ತಾರೆ ಅಂತ ಆಪಾದನೆ ಮಾಡ್ತಾ ಇದೀರಲ್ಲ!

2. balaglobal - ಡಿಸೆಂಬರ್ 1, 2008

ಪಾಲ ಅವರೇ,
ನನಗೆ ಅನಿಸಿದ್ದು, ಇಬ್ಬರು ಹೆಂಗಸರ ಅನಿಸಿಕೆಯನ್ನ ಮತ್ತೊಬ್ಬಾಕೆ ಮುರಿದುಬಿಟ್ಟರಲ್ಲ, ಅಲ್ಲಿಗೆ ಇಬ್ಬರು ಹೆಂಗಸರ ಅನಿಸಿಕೆ ಸುಳ್ಳಾಗಲಿಲ್ಲವೇ?

-ಬಾಲ.


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: