jump to navigation

ನಿನ್ನ ಹೃದಯ ಹಸಿರಾಗಿರಲೀ… ನವೆಂಬರ್ 21, 2008

Posted by Bala in ಬದುಕು.
trackback

ಫುಟ್ಟಣ್ಣ ಕಣಗಾಲರ ರಂಗನಾಯಕಿ ಚಿತ್ರದ, “ಕನ್ನಡ ನಾಡಿನ ರಸಿಕರ ಮನವ ಸೂರೆಗೊಂಡ ನಾಯಕೀ ರಂಗನಾಯಕಿ..”, ಗೀತೆಯಲ್ಲಿ ಬರುವ “ನಿನ್ನ ಹೃದಯ ಹಸಿರಾಗಿರಲೀ ನಿನ್ನ ನೆನಪು ಚಿರವಾಗಿರಲಿ ಹೋಗಿ ಬಾ..” ಎಂಬ ಸಾಲುಗಳು ಮನವನ್ನು ಕಲಕಿಬಿಡುತ್ತವೆ. ಎಸ್ಪಿ ಬಾಲಸುಬ್ರಮಣ್ಯಂ ರವರು ಸೊಗಸಾಗಿ ಹಾಡಿರುವ ಈ ಹಾಡಿನಲ್ಲಿ, ಅವರು “ನಿನ್ನ ಹೃದಯ ಹಸಿರಾಗಿರಲೀ..” ಎಂದು ಧೀರ್ಘವಾಗಿ ಅಲಾಪಿಸಿ ನಂತರ ” ನಿನ್ನ ಹೃದಯ ಹಸಿರಾಗಿರಲೀ… ನಿನ್ನ ನೆನಪು ಚಿರವಾಗಿರಲಿ” ಹೇಳಿ, “ಹೋಗಿ ಬಾ..” ಎಂಬಲ್ಲಿ ಹೆಣ್ಣು ದನಿಯೊಂದರ ಅಲಾಪದೊಂದಿಗೆ ಮತ್ತೆ “ಹೋಗಿ ಬಾ.. ಧೀರ್ಘ ಸುಮಂಗಲಿ.. ಧೀರ್ಘ ಸುಮಂಗಲಿ..”ಎಂಬಲ್ಲಿಗೆ ಹಾಡು ಕೊನೆಯಾಗುತ್ತದೆ, ನಮ್ಮ ಕಣ್ಣು ಒದ್ದೆಯಾಗಿರುತ್ತದೆ.

ರಾಮಣ್ಣ (ಅಂಬರೀಶ್) ಚಿಕ್ಕವನಾಗಿದ್ದಾಗ ರಂಗನಾಯಕಿ (ಆರತಿ) ಯನ್ನು ಮದುವೆಯಾಗಬೇಕೆಂಬ ಆಸೆಯಿರುತ್ತದೆ, ಆದರೆ ರಂಗನಾಯಕಿ ರಾಮಣ್ಣನನ್ನು ತನ್ನ ಅಣ್ಣನಂತೆ ಸ್ವೀಕರಿಸಿದಾಗ, ರಾಮಣ್ಣ ರಂಗನಾಯಕಿಯನ್ನು ತಂಗಿಯಂತೆ ಸ್ವೀಕರಿಸುತ್ತಾನೆ. ಕೊನೆಯವರೆಗೂ ರಾಮಣ್ಣ ಮದುವೆ ಆಗದೆ ಉಳಿಯುತ್ತಾನೆ. ಇಂತಹ ಅಣ್ಣನೊಬ್ಬ ಮದುವೆಯಾದ ತನ್ನ ತಂಗಿಯನ್ನು ತವರು ಮನೆಯಿಂದ ಗಂಡನ ಮನೆಗೆ ಬೀಳ್ಕೊಡುವಾಗ ಹಾಡುವ ಈ ಹಾಡು, ಆ ಸನ್ನಿವೇಶದ ಘಾಡತೆಯನ್ನು ಬಹಳ ಸುಂದರವಾಗಿ ಪರಿಚಯಿಸುತ್ತದೆ.

ನಮ್ಮ ಪ್ರೀತಿಯ ವಸ್ತುವೊಂದು ನಮ್ಮನ್ನು ಅಗಲಿ ದೂರವಾಗುವಾಗ ಅನುಭವಿಸುವ ವಿರಹ ಈ ಸಾಲುಗಳಲ್ಲಿ ಕೆನೆಗಟ್ಟಿದೆ ಎಂದೆನಿಸುತ್ತದೆ. ನಮ್ಮ ಪ್ರೀತಿಪಾತ್ರವಾದವರು ನಮ್ಮಿಂದ ದೂರವಾದರೆ, ಆ ಕ್ಷಣದಲ್ಲಿ ನಮಗೆ ನಮ್ಮ ಸುತ್ತಲಿನ ನೆಲ ಕುಸಿದಂತೆ, ಗೊಂಡಾರಣ್ಯದಲ್ಲಿ ನಾವೊಬ್ಬರೇ ಇದ್ದಂತೆ ಅನಿಸಿ, ಅವ್ಯಕ್ತ ಭಯ ನಮ್ಮನ್ನು ಆವರಿಸುತ್ತದೆ. ಯಾವುದೇ ಸುಖವನ್ನು ಅನುಭವಿಸಿದ ಮನಸ್ಸು ಅದನ್ನು ಮತ್ತೆ ಮತ್ತೆ ಬಯಸುತ್ತದೆ. ಅದನ್ನು ಕಳೆದುಕೊಳ್ಳುವಾಗ, ಮನಸ್ಸಿಗೆ ದುಃಖವಾಗುತ್ತದೆ.

***************

ಗಾಯನ  : ಎಸ್.ಪಿ.ಬಾಲಸುಬ್ರಮಣ್ಯಂ ಮತ್ತು ಎಸ್.ಪಿ.ಶೈಲಜ
ಸಾಹಿತ್ಯ : ಕಣಗಾಲ್ ಪ್ರಭಾಕರ ಶಾಸ್ತ್ರಿ

ಕನ್ನಡ ನಾಡಿನ ರಸಿಕರ ಮನವ
ಸೂರೆಗೊಂಡ ನಾಯಕಿ ರಂಗನಾಯಕಿ ರಂಗನಾಯಕಿ

ಕಲೆಯ ರಸಗಂಗೆಯಲ್ಲಿ ಮಿಂದ ಸೌಂದರ್ಯದಲ್ಲಿ
ಮಾತಂಗಿ ತಂಗಿ ಲಲಿತ ಲತಾಂಗಿ..
ತಂಗೀ ಲಲಿತ ಲತಾಂಗಿ..

ಬಣ್ಣದ ಬದುಕಿಂದ..
ಬಣ್ಣದ ಬದುಕಿಂದ ಚಿನ್ನದ ಬಾಳಿಗೆ
ಮನ್ನಣೆ ಪಡೆದ ಭಾಗ್ಯವತಿ ಸೌಭಾಗ್ಯವತಿ

ನಿನ್ನ ಹೃದಯ ಹಸಿರಾಗಿರಿಲೀ……
ನಿನ್ನ ನೆನಪು ಸವಿಯಾಗಿರಲಿ
ಹೋಗಿ ಬಾ.. ಹೋಗಿ ಬಾ.. ಹೋಗಿ ಬಾ..
ಧೀರ್ಘ ಸುಮಂಗಲಿ ಧೀರ್ಘ ಸುಮಂಗಲಿ

Advertisements

ಟಿಪ್ಪಣಿಗಳು»

1. Ramya - ಜನವರಿ 2, 2009

yavatthu kannige kanada vasthuna vivarisalu kasta sadya adaru nivu nimmge nimma mele prabhava beeridha sandarbavanna hanchikondideera namagu neevu heliruve reethi namma manavanna kalaki navu mathondhu sari a film nodo hage madibittiri any way mathondu sari namma kannali niru tharisiddeeri ok thanks

2. Ramya - ಜನವರಿ 2, 2009

very nice

3. balaglobal - ಜನವರಿ 2, 2009

ರಮ್ಯ,
ನಿಮ್ಮ ಕಣ್ಣಲ್ಲಿ ನೀರು ತರಿಸಿದ್ದಕ್ಕೆ ಥ್ಯಾಂಕ್ಸ್ !! ಇದು ಚಂದನದಲ್ಲಿ ಇದುವರೆವಿಗೂ ಬಂದ ಕಾಮೆಂಟ್ ಗಳಲ್ಲಿ ಅತ್ಯುತ್ತಮವಾದದ್ದು. ಈ ಹಾಡು ನಿಮ್ಮ ಮನಸನ್ನು ಕಲಕಿದ ವಿಷಯವನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

ಸ್ನೇಹದೊಂದಿಗೆ,
-ಬಾಲ

4. ಅನಿಲ್ ರಮೇಶ್ - ಜನವರಿ 5, 2009

ಅಯ್ಯೋ!!! ಈ ಹಾಡು ಕೇಳಿದಾಗಲೆಲ್ಲ ನನಗೆ ಹೀಗೇ ಆಗುತ್ತೆ.

ಆದರೆ, ಗಂಡಸರು ಅಳಬಾರದು ಅಂತ ನೆನಪಿಸಿಕೊಂಡು ನಕ್ಕುಬಿಡ್ತೀನಿ… 🙂

5. balaglobal - ಜನವರಿ 5, 2009

ಅನಿಲ್,
ಉಕ್ಕಿ ಬಂದ ಭಾವನೆಗಳನ್ನು ತಡೆಹಿಡಿಯಬಾರದಂತೆ…
ಧನ್ಯವಾದಗಳು,
-ಬಾಲ.

6. ಅನಿಲ್ ರಮೇಶ್ - ಜನವರಿ 6, 2009

ಅರ್ಧ ಚಂದಿರನ ಚಿತ್ರ ಹಾಕಿದ್ದೀನಿ.

ನನ್ನ ಬ್ಲಾಗಿಗೆ ಬನ್ನಿ…


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: