jump to navigation

ಅಪ್ಪ ಮಗ ಅಕ್ಟೋಬರ್ 2, 2008

Posted by Bala in ಬದುಕು.
Tags:
trackback

ತುಂಬಾ ವಯಸ್ಸಾದ ಮುದುಕನೊಬ್ಬ ಒಂಟಿಯಾಗಿ ಜೀವಿಸುತಿದ್ದನು. ಈ ಬಾರಿ ತನ್ನ ಹೊಲದಲ್ಲಿ ಗೆಣಸನ್ನು ಬೆಳೆಯಲು, ಹೊಲವನ್ನು ಅಗೆಯಲು ತನ್ನಲ್ಲಿ ಶಕ್ತಿಯಿಲ್ಲ ವೆನಿಸಿತು. ಹಿಂದೆ ತನ್ನ ಒಬ್ಬನೇ ಮಗ ಹೊಲವನ್ನು ಉಳಲು ಸಹಾಯಮಾಡುತಿದ್ದ ಆದರೆ ಈಗ ಆತ ಜೈಲಿನಲ್ಲಿರುವದರಿಂದ ಅದು ಸಾಧ್ಯವಾಗುವ ಹಾಗಿರಲಿಲ್ಲ. ಮುದುಕ ತನ್ನ ಕಷ್ಟವನ್ನು ತನ್ನ ಮಗನಿಗೆ ಹೇಳಿಕೊಳ್ಳಲು ಒಂದು ಪತ್ರ ಬರೆದ.

ಮಗನೆ,
ನನಗೆ ವಯಸ್ಸಾಯಿತು ಈ ತೋಟವನ್ನು ಅಗೆಯಲು ನನ್ನೊಬ್ಬನಿಂದಲೇ ಸಾಧ್ಯವಿಲ್ಲ, ಈ ಸಾರಿ ಗೆಣಸನ್ನು ಬೆಳೆಯಲು ಆಗುವುದಿಲ್ಲಾ ಎಂದು ದುಖವಾಗುತ್ತಿದೆ. ನೀನಿದ್ದಿದ್ದರೆ ನನ್ನ ಕಷ್ಟಗಳೆಲ್ಲ ಪರಿಹಾರವಾಗುತಿತ್ತು. ನನಗೆ ಗೊತ್ತು ನೀನು ಖಂಡಿತ ಹೊಲವನ್ನು ಅಗೆದು ಹಸನು ಮಾಡಿಕೊಡುತಿದ್ದೆ.
ಇಂತಿ ನಿನ್ನ ಪ್ರೀತಿಯ
ಅಪ್ಪ.

ಸ್ವಲ್ಪ ದಿನಗಳ ನಂತರ ಮಗನ ಪತ್ರವೊಂದು ಅಪ್ಪನನ್ನು ತಲುಪಿತು.

ಪ್ರೀತಿಯ ಅಪ್ಪ,
ದಯವಿಟ್ಟು ತೋಟವನ್ನು ಅಗಯಬೇಡ, ನಾನು ಹೆಣಗಳನ್ನು ಅಲ್ಲೇ ಹೂತಿರುವುದು.
ಇಂತಿ ನಿನ್ನ
ಮಗ.

ಮಾರನೆಯ ದಿನ ಬೆಳಗಿನ ಜಾವಕ್ಕೆ ಪೋಲಿಸರು ಬಂದು ತೋಟವನ್ನು ಅಗೆಯಲಾರಂಬಿಸಿದರು. ಇಡೀ ತೋಟವನ್ನೇ ಅಗೆದರೂ ಎಲ್ಲೂ ಹೆಣದ ಸುಳಿವಿರಲಿಲ್ಲ. ಪೋಲಿಸರು ಮುದುಕನ ಕ್ಷಮೆ ಕೇಳಿ ಹೊರಟುಹೋದರು.

ಮಾರನೆಯ ದಿನ ಮಗನಿಂದ ಮತ್ತೊಂದು ಪತ್ರ ಬಂದಿತು.

ಪ್ರೀತಿಯ ಅಪ್ಪ,
ನೀನೀಗ ಗೆಣಸನ್ನು ನಿಶ್ಚಿಂತೆಯಿಂದ ಬೆಳೆಯಬಹುದು. ನಾನಿರುವ ಸ್ಥಿತಿಯಲ್ಲಿ ನನ್ನಿಂದಾದ ಸಹಾಯವನ್ನು ಮಾಡಿರುವೆ.
ಇಂತಿ ನಿನ್ನ
ಮಗ.

ಇದನ್ನು ನಾನು ದಿನಕ್ಕೊಂದು ಜೋಕ್ಸ್ ನಲ್ಲಿ ಓದಿದ್ದು. ಆದರೆ ಇಲ್ಲಿ ಹಾಸ್ಯಕ್ಕಿಂತ ಹೆಚ್ಚಿನ ವಿಷಯವಿದೆ ಎನಿಸಿತು.

Advertisements

ಟಿಪ್ಪಣಿಗಳು»

1. sunaath - ಅಕ್ಟೋಬರ್ 4, 2008

Good joke.

2. balaglobal - ಅಕ್ಟೋಬರ್ 4, 2008

ಕಾಕಾ,
ಧನ್ಯವಾದಗಳು.

3. neelihoovu - ಅಕ್ಟೋಬರ್ 20, 2008

ಇದು ಜೋಕ್ ಅನ್ನಿಸುತ್ತಿಲ್ಲ.
ತುಂಬಾ ಚೆನ್ನಾಗಿದೆ ಇದರರ್ಥ…

ಥ್ಯಾಂಕ್ಸ್..

4. balaglobal - ಅಕ್ಟೋಬರ್ 22, 2008

ರಂಜಿತ್,
ನನಗೂ ಹಾಗೆ ಅನ್ನಿಸಿತು, ಧನ್ಯವಾದಗಳು.

-ಬಾಲ.

5. anilramesh - ಜನವರಿ 6, 2009

ಬಾಲ,
ಇದು ನನಗೆ ಹಾಸ್ಯ ಅಂತ ಅನ್ನಿಸಲಿಲ್ಲ…

ಚೆನ್ನಾಗಿದೆ.

6. balaglobal - ಜನವರಿ 6, 2009

ಅನಿಲ್,
ಧನ್ಯವಾದಗಳು.
-ಬಾಲ.

7. sangamesh.hiremath - ಜೂನ್ 9, 2010

edu obba intiligentsan kate.e kateyalli bundivantike ede hassya alla

8. balaglobal - ಜೂನ್ 9, 2010

ಸಂಗಮೇಶ್ ಅವರೆ,
ನಿಮ್ಮ ಅನಿಸಿಕೆಯನ್ನು ಹಂಚಿ ಕೊಂಡಿದ್ದಕ್ಕೆ ಧನ್ಯವಾದಗಳು.


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: