jump to navigation

ಅಮಾಯಕರನ್ನು ಹಿಂಸಿಸುವುದು ನಮ್ಮನ್ನು ನಾವೆ ಹಿಂಸಿಸಿಕೊಂಡಂತೆ ಸೆಪ್ಟೆಂಬರ್ 19, 2008

Posted by Bala in ಬದುಕು.
Tags:
trackback

If you hurt an innocent person, then you are only hurting yourself, just as dust thrown into a wind is blown back in your face. – Buddha

ಗಾಳಿಗೆ ಧೂಳನ್ನ ತೂರಿದರೆ ಅದು ನಮ್ಮ ಕಣ್ಣನ್ನೇ ಹೊಕ್ಕು ನಮ್ಮನ್ನೇ ನೋಯಿಸುವಂತೆ, ಅಮಾಯಕರನ್ನು ಹಿಂಸಿಸುವುದು ನಮ್ಮನ್ನು ನಾವೇ ಹಿಂಸಿಸಿಕೊಂಡಂತೆ ಎಂಬುದು ಬುದ್ಧನ ಹೇಳಿಕೆ. ಮನುಷ್ಯನಿಗೆ ತಾನು ಜೀವಿಸುವ ಪರಿಸರದೊಂದಿಗೆ ಸಾವಯವ ಸಂಬಂಧವಿರುತ್ತದೆ. ನಮ್ಮಲ್ಲಿ ಉದಿಸುವ ಯೊಚನೆಗಳೇ ಆಗಲೀ ನಾವು ಮಾಡುವ ಪ್ರತಿಯೊಂದು ಕಾರ್ಯವೂ ಕೂಡಾ ಪರಿಸರದ ಮೇಲೆ ಪ್ರಭಾವ ಬೀರುತ್ತದೆ. ಪ್ರತಿಯೊಂದು ಜೀವಿಯ ಆಶೆ ಆಕಾಂಕ್ಷೆಗಳು ಈ ಜಗತ್ತನ್ನು ರೂಪಿಸುತ್ತವೆ. ಈ ಜಗತ್ತು ಇವತ್ತು ಹೇಗಿದೆಯೊ ಅದಕ್ಕೆ ಪ್ರತಿಯೊಂದು ಜೀವಿಯೂ ಕಾರಣ. ಪರಿಸರದಲ್ಲಾಗುವ ಒಂದು ಸಣ್ಣ ಬದಲಾವಣೆ ಕೂಡ ನಮ್ಮನ್ನು ಬದಲಾಯಿಸದೇ ಇರುವುದಿಲ್ಲ. ನಮ್ಮ ಮತ್ತು ಪರಿಸರದ ನಡುವೆ ಇರುವ ಈ ಸಂಬಂಧ ನಮ್ಮ ಅರಿವಿಗೆ ಬರದಿದ್ದರೂ, ನಿರಂತರವಾಗಿ ನಡೆಯುತ್ತಿರುತಲೇ ಇರುತ್ತದೆ. ಒಂದು ಸಣ್ಣ ಉದಾಹರಣೆ ಯೆಂದರೆ, ನಮ್ಮ ಉಸಿರಾಟ ಕ್ರಿಯೆ. ನಾವು ಉಸಿರಾಡುವಾಗ ತೆಗೆದುಕೊಳ್ಲುವ ವಾಯು, ಹೊರ ಪರಿಸರದ ಪ್ರತಿನಿಧಿ. ಹೊರಪರಿಸರದ ಕಣಗಳು ಉಸಿರಿನ ಮೂಲಕ ನಮ್ಮ ದೇಹವನ್ನು ಪ್ರವೇಶಿಸುತ್ತಿರುತ್ತವೆ. ಈ ಕ್ರಿಯೆ ನಿರಂತರವಾಗಿ ಮನುಷ್ಯನನ್ನು ನಿಸರ್ಗದೊಂದಿಗೆ ಬೆಸೆದಿರುತ್ತದೆ. ಮನುಷ್ಯ ಶಕ್ತಿಯ (energy) ಒಂದು ಮುದ್ದೆ ಎಂದು ಇಟ್ಟುಕೊಂಡರೆ, ನಮ್ಮಲ್ಲಿ ಉದಿಸುವ ಯೋಚನೆಗಳು, ನಾವು ಮಾಡುವ ಕಾರ್ಯಗಳು ನಕರಾತ್ಮಕವಾಗಿದ್ದಾಗ, ನಮ್ಮಲ್ಲಿನ ಒಟ್ಟು  ಶಕ್ತಿ ಕಡಿಮೆಯಾಗುತ್ತದೆ, ಇದರಿಂದ ನಮಗೇ ತೊಂದರೆ. ಸಕಾರಾತ್ಮಕ ವಾದ ಆಲೋಚನೆಗಳು, ಕಾರ್ಯಗಳು ನಮ್ಮ ಶಕ್ತಿಯ ಮೊತ್ತವನ್ನು ವೃದ್ದಿ ಗೊಳಿಸುತ್ತವೆ.

ನಮ್ಮನ್ನು ಕಾಡುತ್ತಿರುವ ಪ್ರತಿಯೊಂದು ಸಮಸ್ಯಗೂ ಉತ್ತರವೆಂದರೆ ನಮ್ಮಲ್ಲಾಗಬೇಕಾಗಿರುವ ಬದಲಾವಣೆ. ನಮ್ಮ ಮತ್ತು ಪರಿಸರದ ನಡುವಿನ ಸಂಬಂಧದ ಅರಿವು.

  • ಅನಂತಮೂರ್ತಿಯವರ ಸಬಕೋ ಸನ್ಮತಿ ದೇ ಭಗವಾನ್ ಲೇಖನ
  • Advertisements

    ಟಿಪ್ಪಣಿಗಳು»

    1. sunaath - ಸೆಪ್ಟೆಂಬರ್ 24, 2008

    ನೀವು ಹೇಳುವದು ನಿಜ. ಕೊಳದಲ್ಲಿಯ ತೆರೆಗಳಂತೆ ನಮ್ಮ ವಿಚಾರಗಳು ಹಾಗು ನಮ್ಮ ಚೈತನ್ಯ ಎಲ್ಲೆಡೆ ಹರಡುವದು. ಆದುದರಿಂದ ಒಳ್ಳೆಯ ವಿಚಾರಗಳನ್ನೇ ಮಾಡಬೇಕು.
    ಸಬಕೊ ಸನ್ಮತಿ ದೇ ಭಗವಾನ್!

    2. balaglobal - ಸೆಪ್ಟೆಂಬರ್ 24, 2008

    ಸುನಾಥ ಕಾಕ,

    ಧನ್ಯವಾದಗಳು

    -ಬಾಲ

    3. Tejaswini Hegde - ಸೆಪ್ಟೆಂಬರ್ 26, 2008

    ಬಾಲಕೃಷ್ಣ ಅವರೆ,

    ನಿಮ್ಮ ಲೇಖನ ಚೆನ್ನಾಗಿದೆ. ತಾನೇ ಎಲ್ಲಾ.. ತನ್ನಿಂದಲೇ ಎಲ್ಲಾ ಎಂಬ ಭಾವವನ್ನು ಹೊಂದಿರುವವರಿಂದಲೇ ಇಂದು ಈ ದುರ್ಗತಿ ಬಂದಿರುವುದು. ದಾಸರ ಸಾಲುಗಳು ನೆನಪಾಗುತ್ತಿವೆ..

    “ಧೂಳೀಲಿ ಕುದುರೆ ವೈಯಾರದಿ ಕುಣಿಯಲು
    ಧೂಳು ರವಿಯ ಮೇಲೆ ಮುಸುಕುವುದೇ ರಂಗ
    ನಾನಿನ್ನ ಧ್ಯಾನದೊಳಿರಲು..”

    ಆದರೆ ಅನಂತಮೂರ್ತಿಯವರ ಲೇಖನ ಇದಕ್ಕೆ ವಿರುದ್ಧಭಾವವನ್ನು ಹೊಮ್ಮಿಸುವಂತಿದೆ. ಕೇವಲ ಭಾರತಾಂಬೆಯನ್ನೇ ಪೂಜಿಸುವ ಎನ್ನುವುದು ಒಪ್ಪುವ.. ಆದರೆ ಅದಕ್ಕಾಗಿ ಭಾರತಾಂಬಿಯ ಉಳಿವಿನ ಬಗ್ಗೇಯೂ ಖಚಿತತೆ ಮಾಡಿಕೊಳ್ಳಬೇಕಾಗುತ್ತದೆ. ಜಾತಿ ಯಾವುದೇ ಇರಲಿ.. ಧರ್ಮಸಹಿಷ್ಣುತೆ ಇರಬೇಕು ನಿಜ. ಆದರೆ ತಮ್ಮ ಜಾತಿಯೇ ಶ್ರೇಷ್ಠ ಇದರಲ್ಲೇ ಮುಕ್ತಿ ಎಂದು ಆಮಿಷಗಳ ಮೂಲಕ ಕುಟಿಲತೆಯಿಂದ ಅಮಾಯಕ, ಮುಗ್ಧ ಜನರನ್ನು ತ್ರಿಶಂಕು ಸ್ಥಿತಿಗೆ ಒಯ್ಯುವುದು ಪರಮ ಹೇಡಿಗಳ ಕೆಲಸ. ಇದು ಯಾವ ಜಾತಿಯವರೇ ಮಾಡಲಿ ಅಕ್ಷಮ್ಯ. ಆಗ ಸಹಿಷ್ಣುತೆಯ ಭಾಷ್ಯವೇ ಬೇರೆಯಾಗಬಹುದು. ಹಾಗಾಗಿ ಬುದ್ಧಿಜೀವಿಗಳು ಸ್ವಲ್ಪ ತಮ್ಮ ಬುದ್ಧಿಗಳನ್ನು ಜೀವಂತಗೊಳಿಸಿಕೊಳ್ಳುವುದು ಸಮಾಜಕ್ಕೆ ವಿಹಿತ. ತಾವು ಓದಿದ್ದೇ ನಂಬಿದ್ದೇ.. ಒಪ್ಪಿದ್ದೇ ತತ್ತ್ವ, ಸತ್ಯ ಎಂದು ಹೇಳಿದರೆ ಅದು ವಾಸ್ತವಿಕತೆಗೆ ದೂರವಾಗಿರುತ್ತದೆ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ.

    -ತೇಜಸ್ವಿನಿ.

    4. balaglobal - ಸೆಪ್ಟೆಂಬರ್ 26, 2008

    ತೇಜಸ್ವಿನಿಯವರೆ,
    ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

    ನಿಮ್ಮ ಅಭಿಪ್ರಾಯದಲ್ಲಿ ಕಾಣುವ ಒಂದು ಮುಖ್ಯ ಅಂಶ ಎಂದರೆ
    “ಆದರೆ ತಮ್ಮ ಜಾತಿಯೇ ಶ್ರೇಷ್ಠ ಇದರಲ್ಲೇ ಮುಕ್ತಿ ಎಂದು ಆಮಿಷಗಳ ಮೂಲಕ ಕುಟಿಲತೆಯಿಂದ ಅಮಾಯಕ, ಮುಗ್ಧ ಜನರನ್ನು ತ್ರಿಶಂಕು ಸ್ಥಿತಿಗೆ ಒಯ್ಯುವುದು ಪರಮ ಹೇಡಿಗಳ ಕೆಲಸ”

    ನೀವು ಯಾವುದೇ ಜಾತಿ ಅಥವಾ ಧರ್ಮವನ್ನೇ ತೆಗೆದುಕೊಳ್ಳಿ ಅವರಿಗೆ ಅದೇ ಶ್ರೇಷ್ಠ (ಹೆತ್ತೊರಿಗೆ ಹೆಗ್ಗಣವು ಮುದ್ದು). ಅಷ್ಟೇಕೆ ಯಾವುದೇ ಒಂದು ಜಾತಿಯ ಒಳಜಾತಿಗಳಲ್ಲೂ ಕೂಡ ಮೇಲು ಕೀಳಿದೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಮತಾಂತರ ಮಾಡುತ್ತಿರುವವರ ವಿರುದ್ದ ನಾವು ಮಾಡಬೇಕಾದ ಕಾರ್ಯ ಎಂದರೆ. ನಾವು ಇನ್ನೊಬ್ಬರನ್ನು ಆಕ್ಷೇಪಿಸದೆ, ನಮ್ಮಲ್ಲಿರುವ ಕೆಳವರ್ಗದವರನ್ನು ವಿದ್ಯಾವಂತರನ್ನಾಗಿ ಮಾಡುವುದು(ಅಂದರೆ ಶಾಲೆಗೆ ಕಳಿಸಿ ಎಂತಲ್ಲಾ, ಅವರನ್ನ ಒಗ್ಗೂಡಿಸಿ, ನಮ್ಮ ಧರ್ಮದ ಬಗ್ಗೆ ಹೇಳುವುದು, ಅವರನ್ನು ನಮ್ಮ ಸಮಾಜದ ಮುಖ್ಯ ಭಾಗದವರನ್ನಾಗಿಸುವುದು ಇತ್ಯಾದಿ). ಆಗ ಬೇರೆಯವರು ನಮ್ಮ ದರ್ಮವನ್ನು ಹೀಗಳೆದರ ವಿದ್ಯಾವಂತರಾದ ನಮ್ಮವರು ನಮ್ಮ ಧರ್ಮದ ಹಿರಿತನವನ್ನು ಎತ್ತಿ ಹಿಡಿಯಬಲ್ಲರು.

    ದುರ್ಬಲತೆ ಎಲ್ಲೇ ಇರಲಿ ಅದನ್ನು ಆಕ್ರಮಿಸಲು ಒಂದು ಶಕ್ತಿ ಸದಾ ಸಿದ್ದವಿರುತ್ತದೆ. ನಾವು ಮಾಡಬೇಕಾದುದಿಷ್ಟೆ, ನಮ್ಮ ದುರ್ಬಲತೆಯನ್ನು ಹೋಗಲಾಡಿಸುವುದು. ಸಶಕ್ತವಾದ ಯಾವುದೇ ವ್ಯಕ್ತಿ, ಸಮಾಜ ಇನ್ನೊಬ್ಬರಿಗೆ ಅಂಜಬೇಕಾಗಿಲ್ಲ. ನಾವು ಸಶಕ್ತವಾಗಿದ್ದರೆ, ನಮ್ಮ ಕೆಳವರ್ಗದವರು ಹೆಚ್ಚಿನ ಅರಿವನ್ನ ಹೊಂದಿದ್ದರೆ, ಅವರು ಮತಾಂತರಿಗಳನ್ನು ಒಡಿಸಬಲ್ಲರು.

    ಧನ್ಯವಾದಗಳೊಂದಿಗೆ,
    ಬಾಲ.

    5. Tejaswini Hegde - ಸೆಪ್ಟೆಂಬರ್ 27, 2008

    ಬಾಲಕೃಷ್ಣ ಅವರೆ,

    ನಿಜ.. ನಮ್ಮ ದುರ್ಬಲತೆಯ ದುರ್ಬಳಕೆಯಿಂದಲೇ ಮತಾಂತರವಾಗುತ್ತಿರುವುದು. ಆದರೆ ಯಾವುದೇ ಒಂದು ದುರ್ಬಲತೆಯನ್ನು ಹೋಗಲಾಡಿಸಲು ಕಾಲಾವಕಾಶ ಬೇಕಾಗುತ್ತದೆ. ಅಷ್ಟರೊಳಗೇ ಸಮಯಸಾಧಕರು ಈ ರೀತಿ ಹೀನ ಕೃತ್ಯಕ್ಕೆ ಇಳಿದರೆ ನಮ್ಮ ಎಲ್ಲಾ ಪ್ರಯತ್ನಗಳು ವ್ಯರ್ಥವಾಗುವುದಿಲ್ಲವೇ? ವೈರಿಗಳನ್ನೋಡಿಸಿ ಮೊದಲು ಕೋಟೆಯನ್ನು ಭದ್ರಪಡಿಸಿಕೊಳ್ಳಬೇಕು. ನಂತರತಾನೆ ಊರೊಳಗಿನ ಕಷ್ಟವನ್ನು ಪರಿಹರಿಸಲು ಸಾಧ್ಯ? ಇಲ್ಲಿ ವೈರಿ ಊರೊಳಗೆ ಹೊಕ್ಕಿಯಾಗಿದೆ. ಕ್ರಮೇಣ ಕ್ಯಾನ್ಸರ್ ರೀತಿ ಹಬ್ಬುತ್ತಿದ್ದಾನೆ ಅಷ್ಟೇ.

    ನಾನು ನನ್ನ ಮೊದಲ ಪ್ರತಿಕ್ರಿಯೆಯಲ್ಲಿ ಬಹಳಷ್ಟು ಹೇಳಿದ್ದು ಅನಂತಮೂರ್ತಿಯವರ ಲೇಖನದ ಧಾಟಿಯನ್ನು ಪ್ರಶ್ನಿಸಿಯಾಗಿತ್ತು…

    ನಿಮ್ಮ ಅಭಿಪ್ರಾಯಕ್ಕೆ ನನ್ನದೂ ಮನ್ನಣೆ ಇದೆ.
    ವಂದನೆಗಳು.
    ತೇಜಸ್ವಿನಿ.

    6. balaglobal - ಸೆಪ್ಟೆಂಬರ್ 27, 2008

    ತೇಜಸ್ವಿನಿಯವರೆ,
    ನಿಮ್ಮ ಅನಿಸಿಕೆಗೆ ಧನ್ಯವಾದಗಳು. ನನ್ನ ಕೆಲವು ಅನಿಸಿಕೆಗಳನ್ನು ನಿಮ್ಮ ಮುಂದೆ ಇಟ್ಟಿದ್ದೇನೆ.
    ೧. ಮತಾಂತರ ಶುರುವಾಗಿದ್ದು ಕ್ರಿಶ್ಚಿಯನ್ನರು ಈ ದೇಶವನ್ನು ಪ್ರವೇಶಿಸಿದಾಗಲೇ. ಅಂದಮೇಲೆ ಇದು ಸುಮಾರು ಶತಮಾನಗಳ ಹಿಂದೆಯಿಂದಲೂ ನಡೆಯುತ್ತಾ ಬಂದಿದೆ.
    ೨. ಶತಮಾನಗಳಿಂದ ಮತಾಂತರ ನಡೆಯುತಿದ್ದರೂ, ಕ್ರಿಶ್ಚಿಯನ್ನರ ಜನಸಂಖ್ಯ ಸುಮಾರು ಶೇಖಡ ೨ ರಷ್ಚಿದೆ.
    ೩. ಇದು ಪ್ರಜಾಪ್ರಭುತ್ವ, ಮತಾಂತರಿಗಳನ್ನು ಹೊಡೆದೊಡಿಸುವುದು ಕಾನೂನು ರೀತಿ ಮಾತ್ರ ಸಾಧ್ಯ.

    ಇನ್ನೂ ಅನಂತಮೂರ್ತಿಯವರ ಲೇಖನ, ನನ್ನ ಮಟ್ಟಿಗೆ ಅವರು ಹೇಳುತ್ತಿರುವದಕ್ಕೆ ನನ್ನ ಸಹಮತವಿದೆ.

    ನೀವು ಹೇಳಿರುವಂತ,
    “ಕೇವಲ ಭಾರತಾಂಬೆಯನ್ನೇ ಪೂಜಿಸುವ ಎನ್ನುವುದು ಒಪ್ಪುವ.. ಆದರೆ ಅದಕ್ಕಾಗಿ ಭಾರತಾಂಬಿಯ ಉಳಿವಿನ ಬಗ್ಗೇಯೂ ಖಚಿತತೆ ಮಾಡಿಕೊಳ್ಳಬೇಕಾಗುತ್ತದೆ.”

    ಅನಂತಮೂರ್ತಿಯವರು ಕುವೆಂಪು ಮತ್ತು ಅಲ್ಲಮರ ಕವನವನ್ನು ಹೇಳಿರುವುದು ಮುಂದಿನ ವಾಕ್ಯದ ವನ್ನು ಸಮರ್ಥಿಸಲು.”ನಮ್ಮ ಬಿಜೆಪಿ ಆಡಳಿತದಲ್ಲಿ ಇವೆಲ್ಲವೂ ಕಾನೂನು ಬಾಹಿರ. ಕುವೆಂಪು ಮತ್ತು ಅಲ್ಲಮ ಶಿಕ್ಷಾರ್ಹರು. ಯಾಕೆಂದರೆ ಅವರು ನಾವು ನಂಬುವ ದೇವರನ್ನು ಹೀಗೆಳಿದಿದ್ದಾರೆ.”

    ನಿಮ್ಮ ಅಭಿಪ್ರಾಯ ಓದಿದಾಗ, ಅವರು ಭಾರತಾಂಬೆಯನ್ನು ಪೂಜಿಸಿ ಎಂದು ಹೇಳಿದ್ದಾರೆ ಎಂಬ ಅರ್ಥಬರುತ್ತದೆ.

    ಅಭಿಪ್ರಾಯಗಳು ಬೇರೆಯಿರಬಹುದು, ಅಭಿಪ್ರಾಯಗಳು ಬದಲಾಗಬಹುದು, ಇವೆಲ್ಲದರ ಹಿಂದಿನ ಚೈತನ್ಯ ಒಂದೇ.

    ಸ್ನೇಹದಿಂದ.
    ಬಾಲ.


    ನಿಮ್ಮದೊಂದು ಉತ್ತರ

    Fill in your details below or click an icon to log in:

    WordPress.com Logo

    You are commenting using your WordPress.com account. Log Out / Change )

    Twitter picture

    You are commenting using your Twitter account. Log Out / Change )

    Facebook photo

    You are commenting using your Facebook account. Log Out / Change )

    Google+ photo

    You are commenting using your Google+ account. Log Out / Change )

    Connecting to %s

    %d bloggers like this: