ಚಿಂತೆಯನ್ನು ತೆಗೆದರೆ ಉಳಿಯುವುದು? ಸೆಪ್ಟೆಂಬರ್ 26, 2008
Posted by Bala in ಬದುಕು.Tags: ಚಿಂತೆ
6 comments
Do things really exist
as we think they do?
When we say
here is a table,
What do we really mean?
If we take away
the table legs
is that still a table?
If we take the top off
is it still a table?
If we take your worries
away are you still you?
-Buddha
ಅಲ್ಲಿರುವ ಮೇಜು, ಮೇಜು ಅನಿಸಿಕೊಳ್ಳಲು ಅದಕ್ಕೆ ನಾಲ್ಕು ಕಾಲಿರಬೇಕು, ನಾಲ್ಕು ಕಾಲಿನ ಮೇಲೆ ಒಂದು ದೊಡ್ಡ ಹಲಗೆ ಇರಬೇಕು. ಆಗಲೇ ಅದನ್ನ ಮೇಜು ಎನ್ನುವುದು. ಎಲ್ಲಾ ವಸ್ತುಗಳು ಮೊದಲು ಉದ್ಭವಿಸುವುದು ನಮ್ಮ ಮನಸ್ಸಿನಲ್ಲಿ. ಈಗ ಮೇಜಿನ ನಾಲ್ಕು ಕಾಲನ್ನ ಕಿತ್ತುಹಾಕಿದರೆ, ಅದು ಮೇಜಾಗೆ ಉಳಿಯುವುದಿಲ್ಲಾ ಹಾಗೆ, ಮೇಲೆ ಹೊದಿಸಿರುವ ಹಲಗೆಯನ್ನು ತೆಗೆದರೆ ಉಳಿಯುವುದನ್ನ ಮೇಜು ಅನ್ನಲಾಗುವುದಿಲ್ಲ. ಅಲ್ಲಿರುವುದು ಸೀಬೇಹಣ್ಣಿನ ಮರ ಅಂದರೆ ಒಂದು ಬಗೆಯ ಹಣ್ಣನ್ನು ಸೀಬೆಹಣ್ಣು ಎಂದು ಕರೆದು, ಯಾವ ಮರ ಸೀಬೇಹಣ್ಣನ್ನು ಬಿಡುತ್ತದೋ ಅದು ಸೀಬೇಹಣ್ಣಿನ ಮರವಾಗುತ್ತದೆ. ಹೀಗೆ ಸೃಷ್ಟಿಯಾದ ಪ್ರಪಂಚದಲ್ಲಿ, ನಾವು ಸದಾ ಆಲೋಚನೆ ಮಾಡುತ್ತಿರುತ್ತೇವೆ. ಈ ಅಲೋಚನೆಗಳು ಮುಂದೆ ಕಾರ್ಯದ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ. ಕಾರ್ಯವು ನಮ್ಮ ಗುಣವಾಗಿ ಬೆಳೆದು, ಗುಣ ನಮ್ಮ ಸ್ವಭಾವವಾಗುತ್ತದೆ. ಈ ಸ್ವಭಾವವೇ ನಾವು ’ನಾನು’ ಎಂದು ಹೇಳಿಕೊಳ್ಳುವಂತಹುದು. ತನ್ನ ನಿಜವಾದ ತನವನ್ನು ಮರೆತು ಸ್ವಭಾವದ ಅಡಿಯಾಳಾದ ಮನಸ್ಸು ಚಿಂತೆಗೊಳಗಾಗಿ ದುಃಖವನ್ನು ಅನುಭವಿಸುತ್ತದೆ.
ಹೇಗೆ ಕಾಲಿಲ್ಲದ ಮೇಜನ್ನ ಮೇಜು ಎನ್ನಲಾಗದೊ, ಹಾಗೆ ನಮ್ಮಲ್ಲಿರುವ ಚಿಂತೆಯನ್ನು ನಮ್ಮಿಂದ ತೆಗೆದುಹಾಕಿದರೆ ನಾನು ನಾನಾಗಿಯೇ ಉಳಿಯುವುದಿಲ್ಲ, ಅಲ್ಲಿ ದುಃಖವೂ ಇರುವುದಿಲ್ಲ.
———————————–
ಚಿಂತಾಯಾಶ್ಚ ಚಿತಾಯಾಶ್ಚ ಬಿಂದುಮಾತ್ರಂ ವಿಶಿಷ್ಯತೆ|
ಚಿತಾ ದಹತಿ ನಿರ್ಜೀವಂ ಚಿಂತಾ ದಹತಿ ಜೀವಿನಮ್||
-ಸುಭಾಷಿತಮಂಜರೀ
ಚಿಂತೆಗೂ ಚಿತೆಗೂ ಒಂದು ಸೊನ್ನೆ ಮಾತ್ರ ವಿಶೇಷ. ಚಿತೆ ಜೀವವಿಲ್ಲದ ಹೆಣವನ್ನು ಮಾತ್ರ ಸುಡುತ್ತದೆ. ಚಿಂತೆಯಾದರೋ ಜೀವವಿರುವವನನ್ನೇ ಸುಡುತ್ತದೆ.
ಅಮಾಯಕರನ್ನು ಹಿಂಸಿಸುವುದು ನಮ್ಮನ್ನು ನಾವೆ ಹಿಂಸಿಸಿಕೊಂಡಂತೆ ಸೆಪ್ಟೆಂಬರ್ 19, 2008
Posted by Bala in ಬದುಕು.Tags: ಪರಿಸರ ಅಮಾಯಕ ಹಿಂಸೆ
6 comments
If you hurt an innocent person, then you are only hurting yourself, just as dust thrown into a wind is blown back in your face. – Buddha
ಗಾಳಿಗೆ ಧೂಳನ್ನ ತೂರಿದರೆ ಅದು ನಮ್ಮ ಕಣ್ಣನ್ನೇ ಹೊಕ್ಕು ನಮ್ಮನ್ನೇ ನೋಯಿಸುವಂತೆ, ಅಮಾಯಕರನ್ನು ಹಿಂಸಿಸುವುದು ನಮ್ಮನ್ನು ನಾವೇ ಹಿಂಸಿಸಿಕೊಂಡಂತೆ ಎಂಬುದು ಬುದ್ಧನ ಹೇಳಿಕೆ. ಮನುಷ್ಯನಿಗೆ ತಾನು ಜೀವಿಸುವ ಪರಿಸರದೊಂದಿಗೆ ಸಾವಯವ ಸಂಬಂಧವಿರುತ್ತದೆ. ನಮ್ಮಲ್ಲಿ ಉದಿಸುವ ಯೊಚನೆಗಳೇ ಆಗಲೀ ನಾವು ಮಾಡುವ ಪ್ರತಿಯೊಂದು ಕಾರ್ಯವೂ ಕೂಡಾ ಪರಿಸರದ ಮೇಲೆ ಪ್ರಭಾವ ಬೀರುತ್ತದೆ. ಪ್ರತಿಯೊಂದು ಜೀವಿಯ ಆಶೆ ಆಕಾಂಕ್ಷೆಗಳು ಈ ಜಗತ್ತನ್ನು ರೂಪಿಸುತ್ತವೆ. ಈ ಜಗತ್ತು ಇವತ್ತು ಹೇಗಿದೆಯೊ ಅದಕ್ಕೆ ಪ್ರತಿಯೊಂದು ಜೀವಿಯೂ ಕಾರಣ. ಪರಿಸರದಲ್ಲಾಗುವ ಒಂದು ಸಣ್ಣ ಬದಲಾವಣೆ ಕೂಡ ನಮ್ಮನ್ನು ಬದಲಾಯಿಸದೇ ಇರುವುದಿಲ್ಲ. ನಮ್ಮ ಮತ್ತು ಪರಿಸರದ ನಡುವೆ ಇರುವ ಈ ಸಂಬಂಧ ನಮ್ಮ ಅರಿವಿಗೆ ಬರದಿದ್ದರೂ, ನಿರಂತರವಾಗಿ ನಡೆಯುತ್ತಿರುತಲೇ ಇರುತ್ತದೆ. ಒಂದು ಸಣ್ಣ ಉದಾಹರಣೆ ಯೆಂದರೆ, ನಮ್ಮ ಉಸಿರಾಟ ಕ್ರಿಯೆ. ನಾವು ಉಸಿರಾಡುವಾಗ ತೆಗೆದುಕೊಳ್ಲುವ ವಾಯು, ಹೊರ ಪರಿಸರದ ಪ್ರತಿನಿಧಿ. ಹೊರಪರಿಸರದ ಕಣಗಳು ಉಸಿರಿನ ಮೂಲಕ ನಮ್ಮ ದೇಹವನ್ನು ಪ್ರವೇಶಿಸುತ್ತಿರುತ್ತವೆ. ಈ ಕ್ರಿಯೆ ನಿರಂತರವಾಗಿ ಮನುಷ್ಯನನ್ನು ನಿಸರ್ಗದೊಂದಿಗೆ ಬೆಸೆದಿರುತ್ತದೆ. ಮನುಷ್ಯ ಶಕ್ತಿಯ (energy) ಒಂದು ಮುದ್ದೆ ಎಂದು ಇಟ್ಟುಕೊಂಡರೆ, ನಮ್ಮಲ್ಲಿ ಉದಿಸುವ ಯೋಚನೆಗಳು, ನಾವು ಮಾಡುವ ಕಾರ್ಯಗಳು ನಕರಾತ್ಮಕವಾಗಿದ್ದಾಗ, ನಮ್ಮಲ್ಲಿನ ಒಟ್ಟು ಶಕ್ತಿ ಕಡಿಮೆಯಾಗುತ್ತದೆ, ಇದರಿಂದ ನಮಗೇ ತೊಂದರೆ. ಸಕಾರಾತ್ಮಕ ವಾದ ಆಲೋಚನೆಗಳು, ಕಾರ್ಯಗಳು ನಮ್ಮ ಶಕ್ತಿಯ ಮೊತ್ತವನ್ನು ವೃದ್ದಿ ಗೊಳಿಸುತ್ತವೆ.
ನಮ್ಮನ್ನು ಕಾಡುತ್ತಿರುವ ಪ್ರತಿಯೊಂದು ಸಮಸ್ಯಗೂ ಉತ್ತರವೆಂದರೆ ನಮ್ಮಲ್ಲಾಗಬೇಕಾಗಿರುವ ಬದಲಾವಣೆ. ನಮ್ಮ ಮತ್ತು ಪರಿಸರದ ನಡುವಿನ ಸಂಬಂಧದ ಅರಿವು.