jump to navigation

ಭಿಕ್ಷು ಮತ್ತು ಹುಡುಗಿ ಏಪ್ರಿಲ್ 9, 2008

Posted by Bala in ಬುದ್ಧ ಮತ್ತು ಝೆನ್.
Tags:
add a comment

ಒಮ್ಮೆ ನಂದ ಮತ್ತು ಮುಕುಂದ ಬೌಧ್ದ ಭಿಕ್ಷುಗಳು ಜೊತೆಯಾಗಿ ಪ್ರಯಾಣಿಸುತಿದ್ದರು. ಒಂದು ಹಳ್ಳಿಯನ್ನು ದಾಟುವಾಗ ಜೋರಾಗಿ ಮಳೆ ಶುರುವಾಯಿತು. ಇಬ್ಬರೂ ತಮ್ಮ ಪ್ರಯಾಣ ನಿಲ್ಲಿಸದೇ ಮುಂದುವರೆದಿದ್ದರು. ಮಳೆಯಿಂದಾಗಿ ಕಚ್ಚಾ ರಸ್ತೆ ಪೂರಾ ತೊಪ್ಪೆ ತೊಪ್ಪೆಯಾಗಿತ್ತು. ನಡೆಯಲು ತುಸು ಕಷ್ಟವಾದರೂ ಭಿಕ್ಷುಗಳು ತಮ್ಮ ಪ್ರಯಾಣವನ್ನು ನಿಲ್ಲಿಸದೆ ಮುಂದುವರೆಯುತಿದ್ದಾಗ, ರಸ್ತೆಯ ತಿರುವಿನಲ್ಲಿ ಇಬ್ಬರೂ ಒಂದು ಸುಂದರ ಹುಡುಗಿಯು ಮಣ್ಣಿನಲ್ಲಿ ಹೂತು ಹೊಗಿದ್ದ ತನ್ನ ಕಾಲುಗಳನ್ನು ಹೊರಗೆಳೆಯಲು ಕಷ್ಟಪಡುತಿದ್ದುದನ್ನು ನೋಡಿದರು. ಆಗ ಇದ್ದಕ್ಕಿದ್ದಂತೆ ನಂದ, ಬಾಯಿಲ್ಲಿ ಹುಡುಗಿ ಎಂದು, ಅಕೆಯನ್ನು ತನ್ನ ಎರಡು ಕೈಗಳಿಂದ ಮೇಲೆ ಎತ್ತಿ ತಂದು ಸುರಕ್ಷಿತವಾದ ಜಾಗದಲ್ಲಿ ಇಳಿಸಿದನು. ಮುಕುಂದ ಗರಬಡಿದವನಂತೆ ನಂದನ ಕಾರ್ಯವನ್ನು ನೊಡುತ್ತ ನಿಂತಿದ್ದ.

ಹುಡುಗಿಯನ್ನು ಇಳಿಸಿದ ನಂತರ ನಂದ ತನ್ನ ಪ್ರಯಾಣ ಮುಂದುವರೆಸಿದ, ಮುಕುಂದ ಅವನನ್ನು ಅನುಸರಿಸಿದ. ಮುಂದೆ ತಮ್ಮ ಮಠವನ್ನು ಸೇರುವವರೆಗೂ ಮುಕುಂದ ಏನೂ ಮಾತಾಡಲಿಲ್ಲ. ಅಂದು ರಾತ್ರಿ, ಮುಕುಂದನಿಗೆ ತಡೆಯಲಾಗಲಿಲ್ಲಾ, “ಅಲ್ಲಾ ನಾವು ಭಿಕ್ಷುಗಳು, ಹುಡುಗಿಯಿರಿಂದ ದೂರವಿರಬೇಕು, ಅದರಲ್ಲೂ ಆಷ್ಟು ಸುಂದರವಾದ ಹುಡುಗಿಯರ ಬಳಿ ಸುಳಿಯುವುದೂ ಅಪಾಯಕಾರಿ. ಇಂಥಾದ್ದರಲ್ಲಿ, ನೀನು ಯಾಕೆ ಹೀಗೆ ಮಾಡಿದೆ.” ಎಂದ

ಆಗ ನಂದ ಹೇಳಿದ, ನಾನು ಆ ಹುಡುಗಿಯನ್ನು ಅಲ್ಲ್ಲಿಯೇ ಇಳಿಸಿಬಿಟ್ಟೆ, ನೀನಿನ್ನೂ ಆಕೆಯ ಬಗ್ಗೆ ಚಿಂತಿಸುತಿದ್ದೀಯಾ?