jump to navigation

ಹರಿಕತೆಯಲ್ಲಿನ ಉಪಕತೆ ಜನವರಿ 23, 2008

Posted by Bala in ಬದುಕು.
Tags: ,
1 comment so far

ಗುರುರಾಜಲು ನಾಯ್ಡು ಅವರ ಹರಿಕತೆಗಳಲ್ಲಿ ಮೂಲಕತೆಗಿನ್ನ ಅಗಾಗ್ಗೆ ಸಾಂಧರ್ಭಿಕವಾಗಿ ಹೇಳುತಿದ್ದ ಉಪಕತೆಗಳು ರೊಚಕ, ಮಾರ್ಮಿಕವಾಗಿರುತಿದ್ದವು. ಅಂತ ಒಂದು ಉಪಕತೆಗಳಲ್ಲಿ ಒಂದನ್ನು ನನಗೆ ನೆನಪಿದ್ದಷ್ಟು  ಅವರದೇ ನಾಟಕೀಯ ಶೈಲಿಯಲ್ಲಿ, ದಾಖಲಿಸುತಿದ್ದೇನೆ.

ಒಮ್ಮೆ ಇಬ್ಬರು ಅತ್ಯಂತ ಕಠಿಣ ತಪಸ್ಸಿನಲ್ಲಿ ತೊಡಗಿದ್ದರು. ತುಂಬಾ ಕಾಲದ ಬಳಿಕ ದೇವರು ಮೊದಲನೆಯವನಲ್ಲಿ ಪ್ರತ್ಯಕ್ಷನಾಗಿ,

ದೇವರು : ವತ್ಸ , ನಾನು ಬಂದಿದ್ದೇನೆ, ಕಣ್ಣನ್ನು ತೆರೆದು ನಿನಗೆ ಏನು ವರ ಬೇಕು ಕೇಳು
ಮೊದಲನೆಯವ: ಸ್ವಾಮಿ, ನನ್ನ ಕರೆಗೆ ಒಗೊಟ್ಟು  ಈ ಬಡವನಲ್ಲಿ ಬಂದದ್ದು ನನಗೆ ಅತೀವ ಸಂತೋಷವಾಗಿದೆ. ಎಂದು ಹೇಳಿ ಬಲಗಡೆ ದೂರದಲ್ಲಿ ಕುಳಿತಿದ್ದ ಇನ್ನೊಬ್ಬನೆಡೆ ತಿರುಗಿ, ಅವನ್ನಿನ್ನೂ ತಪಸ್ಸಿನಲ್ಲಿ ಕುಳಿತಿರುವುದನ್ನು ನೋಡಿ. ದೇವರನ್ನು ಮತ್ತೆ ಕೇಳಿದ. “ಸ್ವಾಮಿ, ನೀವು ಅವನಿಗೂ ವರ ಕೊಡುತ್ತೀರಾ”
ದೇವರು: ಹೌದಪ್ಪ, ನಿನ್ನಂತೆ ಅವನೂ ಕೂಡಾ ಅತ್ಯಂತ ಕಠಿಣ ತಪಸ್ಸಿನಲ್ಲಿ ತೊಡಗಿದ್ದಾನೆ, ಆದ್ದರಿಂದ ಅವನಿಗೂ ವರ ಕೊಡುತ್ತೇನೆ.
ಮೊದಲನೆಯವ:(ಸ್ವಗತ) ಏನು ಮಾಡುವುದು, ಅವನು ಏನು ಕೇಳುತ್ತಾನೆ ಎನ್ನುವುದು ಗೊತ್ತಿಲ್ಲ, ನಾನು ಏನೇ ಕೇಳಿದರೂ ನನಗಿಂತ ಹೆಚ್ಚಿಗೆ ಅವನು ಕೇಳಬಹುದು ಎಂದು ಯೋಚಿಸಿ ಕೊನೆಗೆ ದೇವರಿಗೆ ಕೇಳಿದ. “ಸ್ವಾಮಿ, ನೀವು ಅವನಿಗೆ ಏನು ಕೊಡುತ್ತೀರೊ ಅದರ ಎರಡರಷ್ಟು ನನಗೆ ಬೇಕು”
ದೇವರು : ಅಲ್ಲಯ್ಯ, ನಿನಗೆ ಏನು ಬೇಕೊ ಅದನ್ನು ಕೇಳದೆ, ಇದೆಂಥಾ ವರವಯ್ಯ ನೀನು ಕೇಳುತ್ತಿರುವುದು
ಮೊದಲನೆಯವ: ಅದೆಲ್ಲ ನನಗೆ ಗೊತ್ತಿಲ್ಲಾ ಸ್ವಾಮಿ, ನೀವು ಅವನಿಗೆ ಏನು ಕೊಡುತ್ತೀರೊ ಅದರ ಎರಡರಷ್ಟು ನನಗೆ ಬೇಕು.
ದೇವರು:(ನಗುತ್ತಾ) ತಥಾಸ್ತು

ನಂತರ ದೇವರು ಎರಡನೆಯವನ ಬಳಿ ಪ್ರತ್ಯಕ್ಷವಾಗಿ,

ದೇವರು : ವತ್ಸ , ನಾನು ಬಂದಿದ್ದೇನೆ, ಕಣ್ಣನ್ನು ತೆರೆದು ನಿನಗೆ ಏನು ವರ ಬೇಕು ಕೇಳು
ಎರಡನೆಯವ: ಓ ಅಪದ್ಭಾಂದವ, ನನ್ನ ಕರೆಗೆ ಒಗೊಟ್ಟು ಈ ಬಡವನಲ್ಲಿ ಬಂದದ್ದು ನನಗೆ ತುಂಬಾ ಸಂತೋಷವಾಗಿದೆ. ಎಂದು ಹೇಳಿ ಎಡಗಡೆ ದೂರದಲ್ಲಿ ಕುಳಿತಿದ್ದ ಇನ್ನೊಬ್ಬನೆಡೆ ತಿರುಗಿ, ಅವನಾಗಲೆ ಕಣ್ಣು ಬಿಟ್ಟು ಕುಳಿತಿರುವುದನ್ನು ನೋಡಿ. ದೇವರನ್ನು ಮತ್ತೆ ಕೇಳಿದ. “ಸ್ವಾಮಿ, ನೀವು ಅವನಿಗೆ ಆಗಲೇ ವರ ಕೊಟ್ಟಿರಾ”
ದೇವರು: ಹೌದಪ್ಪ,, ಅವನಿಗೆ ಆಗಲೇ ವರ ಕರುಣಿಸಿದ್ದೇನೆ.
ಎರಡನೆಯವ: ಸ್ವಾಮಿ ಅವನಿಗೆ ನೀವು ಏನು ವರ ಕೊಟ್ರಿ.
ದೇವರು: ಅವನು ಕೇಳಿದ್ದಾನಪ್ಪ, ನಿನಗೆ ಏನು ವರ ಕೊಡ್ತೀನೊ ಅದರ ಎರಡರಷ್ಟು ಅವನಿಗೆ ಬೇಕಂತಪ್ಪ.
ಎರಡನೆಯವ:(ಸ್ವಗತ) ಅಯ್ಯಯ್ಯೊ ಮೊಸ ಮಾಡ್ಬಿಟ್ನಲ್ಲಪ್ಪೋ, ಮೊಸ ಮಾಡ್ಬಿಟ್ಟಾ, ನಾನು ಏನು ಕೇಳಿದರೂ ಅದರ ಎರಡರಷ್ಟು ಅವನಿಗೆ ಸಿಗುತ್ತೆ ಎಂದು ಧೀರ್ಘವಾಗಿ ಆಲೋಚಿಸಿ ಕೊನೆಗೆ ದೇವರನ್ನು ಕೇಳಿದ “ಸ್ವಾಮಿ, ನನಗೆ ಒಂದು ಕೈ, ಒಂದು ಕಾಲು, ಒಂದು ಕಣ್ಣು, ಒಂದು ಕಿವಿ ಹೋಗೊವಂಥಾ ವರ ಕೊಡು”
ದೇವರು:(ನಗುತ್ತಾ) ಲೇ, ಇದ್ಯಾವ ಸೀಮೆ ವರನಯ್ಯ ನೀನು ಕೇಳ್ತಾ ಇರೋದು. ಅಲ್ಲಾ ಒಂದು ಕೈ, ಒಂದು ಕಾಲು, ಒಂದು ಕಣ್ಣು, ಒಂದು ಕಿವಿ ಹೋಗೊವಂಥಾ ವರ.
ಎರಡನೆಯವನು: ನೀನು ಕೊಡು ಸ್ವಾಮಿ, ನನಗೆ ಒಂದು ಕೈ, ಒಂದು ಕಾಲು, ಒಂದು ಕಣ್ಣು, ಒಂದು ಕಿವಿ ಹೋದರೂ ಪರ್ವಾಗಿಲ್ಲ ಅವನಿಗೆ ಎರಡು ಕೈ, ಎರಡು ಕಾಲು, ಎರಡು ಕಣ್ಣು, ಎರಡು ಕಿವಿ ಹೋಗ್ತದಲ್ಲಾ ಆಷ್ಟೇ ಸಾಕು.
ದೇವರು:(ನಗುತ್ತಾ) ತಥಾಸ್ತು.

ಮೊನ್ನೆ ಎಲ್ಲೊ ಓದುತಿದ್ದಾಗ ತಿಳಿದ ವಿಶಯ, ಯಾರೊ ದಂಪತಿಗಳ ವಿವಾಹ ವಿಚ್ಚೇದನದ ನಂತರ, ಕೋರ್ಟ್ ಪತಿಗೆ ತನ್ನ ಆಸ್ತಿಗಳನ್ನು ಮಾರಿ ಅದರ ಅರ್ಧ ಬೆಲೆಯನ್ನು ಪತ್ನಿಗೆ ಕೊಡು ಎಂದು ಆದೇಶಿಸಿತು. ಇದಕ್ಕೆ ಆ ಪತಿ ಮಹರಾಯ ಲಕ್ಷಾಂತರ ಬೆಲೆಬಾಳುವ ಆಸ್ತಿಯನ್ನು ಕಡಲೇಕಾಯಿ ಬೆಲೆಗೆ ಮಾರಿದನಂತೆ. ಯಾಕೆಂದರೆ, ನನಗೆ ದಕ್ಕದಿದ್ದರೂ ಚಿಂತೆಯಿಲ್ಲಾ ತನ್ನ ವಿಚ್ಚೇದಿತ ಪತ್ನಿಗೆ ಏನೂ ಸಿಗಬಾರದೆಂದು.

ನನ್ನ ಹೆಂಡತಿ ಕಿವುಡಿ ಜನವರಿ 14, 2008

Posted by Bala in ಬದುಕು, ಹಾಸ್ಯ, ಹರಟೆ.
4 comments

ಒಮ್ಮೆ ಗಂಡನೊಬ್ಬನಿಗೆ ತನ್ನ ಹೆಂಡತಿ ಕಿವುಡಿ ಎನಿಸಿತು, ಆದರೆ ಅದನ್ನು ಅಕೆಗೆ ಹೇಗೆ ತಿಳಿಸುವುದು, ನೇರವಾಗಿ ಹೇಳಿದರೆ ಅವಳ ಮನಸ್ಸು ನೋಯಬಹುದು ಎಂದು ತುಂಬಾ ಅಲೋಚನೆ ಮಾಡಿ, ಕೊನೆಗೆ ಡಾಕ್ಟರೊಬ್ಬನಿಗೆ ತನ್ನ ಕಷ್ಟವನ್ನು ನಿವೇದಿಸಿಕೊಂಡನು. ಅದಕ್ಕೆ ಡಾಕ್ಟರ್ ಹೇಳಿದರು, ನೊಡಪ್ಪ ನೀನು ನಾನು ಹೇಳುವ ಒಂದು ಸಣ್ಣ ಪರೀಕ್ಷೆಯನ್ನು ಮಾಡಿ ಅದರ ಪಲಿತಾಂಶ ತಿಳಿಸು ನಂತರ ನಾವು ಮುಂದೆ ಎನು ಮಾಡಬೇಕು ಎಂಬುದನ್ನು ನಿರ್ದರಿಸೋಣ ಎಂದರು. ಗಂಡನಿಗೆ ಒಪ್ಪಿಗೆಯಾಯಿತು. ಸರಿ ಅದೇನು ಪರೀಕ್ಷೆ ಹೇಳಿ ಎಂದ. ಡಾಕ್ಟರ್ ಹೇಳಿದರು, ಸುಮಾರು ನಲ್ವತ್ತು ಆಡಿ ದೂರದಲ್ಲಿ ನಿಂತು, ನಿನ್ನ ಸಾಮಾನ್ಯ ಧ್ವನಿಯಲ್ಲಿ ಮಾತಾಡು ನಿನ್ನ ಹೆಂಡತಿಗೆ ನೀನು ಹೇಳಿದ್ದು ಕೇಳಿಸದಿದ್ದರೆ, ಆಗ ಇದೇ ಪರೀಕ್ಷೆಯನ್ನು ಮೂವತ್ತು ಅಡಿ ದೂರದಿಂದ ನಂತರ ಇಪ್ಪತ್ತು ಅಡಿ ದೂರದಿಂದ, ನಂತರ ಹತ್ತು ಅಡಿ ದೂರದಿಂದ ಕೊನೆಗೆ ಆಕೆಯ ಪಕ್ಕದಲ್ಲಿ ನಿಂತು ಮಾತಾಡು. ನಿನ್ನ ಹೆಂಡತಿಗೆ ಎಷ್ಟು ದೂರದಿಂದ ನೀನು ಮಾತಾಡಿದ್ದು ಕೇಳಿಸುತ್ತದೆ ಎಂಬುದು ನನಗೆ ತಿಳಿದರೆ ಮುಂದೆ ಏನು ಮಾಡಬೇಕು ಎಂದು ನಾನು ಹೇಳುತ್ತೇನೆ.

ಮನೆಗೆ ಬಂದ ಗಂಡ, ಸಂಜೆಯಾಗಿತ್ತು. ಸರಿ ತನ್ನ ಪರೀಕ್ಷೆಯನ್ನು ಪ್ರಾರಂಭಿಸಿದ. ಸುಮಾರು ನಲ್ವತ್ತು ಅಡಿ ದೂರದಲ್ಲಿ ನಿಂತು, “ಏನೇ ಇವತ್ತು ಏನು ಅಡುಗೆ” ಎಂದ, ಇವನಿಗೆ ಎನೂ ಕೇಳಿಸಲಿಲ್ಲ. ಸರಿ ಮೂವತ್ತು ಅಡಿ ದೂರದಲ್ಲಿ ನಿಂತು, “ಏನೇ ಇವತ್ತು ಏನು ಅಡುಗೆ” ಎಂದ ಇವನಿಗೆ ಎನೂ ಕೇಳಿಸಲಿಲ್ಲ. ಇವನ ಸಂಶಯ ನಿಜ ಎಂದುಕೊಂಡು, ಇಪ್ಪತ್ತು ಅಡಿ ದೂರದಲ್ಲಿ ನಿಂತು, “ಏನೇ ಇವತ್ತು ಏನು ಅಡುಗೆ” ಎಂದ ಆಗಲೂ ಇವನಿಗೆ ಎನೂ ಕೇಳಿಸಲಿಲ್ಲ. ಏನಪ್ಪ ಇದು ಎಂದುಕೊಂಡು ಹತ್ತು ಅಡಿ ದೂರದಲ್ಲಿ ನಿಂತು, “ಏನೇ ಇವತ್ತು ಏನು ಅಡುಗೆ” ಎಂದ ಆಗಲೂ ಇವನಿಗೆ ಎನೂ ಕೇಳಿಸಲಿಲ್ಲ. ಕೊನೆಗೆ ತನ್ನ ಹೆಂಡತಿಯ ಪಕ್ಕ ನಿಂತು, “ಏನೇ ಇವತ್ತು ಏನು ಅಡುಗೆ ಎಂದ”. ಆಗ ಅವನ ಹೆಂಡತಿ ಹೇಳಿದಳು “ಇದು ಐದನೇ ಸಾರಿ ಹೇಳುತ್ತಿರುವುದು, ಇವತ್ತು ಬೆಂಡೇಕಾಯಿ ಗೊಜ್ಜು  ಅಂತ” ಎಂದು ಗದರಿಕೊಂಡಳು.

ಕೆಲವೊಮ್ಮೆ ನಮ್ಮಲ್ಲಿರುವ ದೋಷಗಳನ್ನು ಮತ್ತೊಬ್ಬರಿಗೆ ಆರೋಪಿಸುತ್ತೇವೆ ಎಂಬುದನ್ನು ಮೇಲಿನ ಸನ್ನಿವೇಶ ಅತಿ ಸರಳವಾಗಿ ವಿವರಿಸುತ್ತದೆ.

ಇದು ಲೈಟ್ ಹೌಸ್ ಜನವರಿ 10, 2008

Posted by Bala in ಬದುಕು.
add a comment

 light-house.jpg

ಒಬ್ಬ ಕ್ಯಾಪ್ಟನ್ನಿನ ನಾಯಕತ್ವದಲ್ಲಿ ಎರಡು ಹಡಗುಗಳು ಯುದ್ಧಾಭ್ಯಾಸಕ್ಕೆಂದು ಸಮುದ್ರದ ಒಳಬಾಗಕ್ಕೆ ಹೊರಟವು. ಆ ರಾತ್ರಿ, ಮಂಜುಮುಸುಕಿದಂತಾಗಿ ಎಲ್ಲವೂ ಮಸುಕಾಗಿ ಕಾಣತೊಡಗಿತ್ತು. ಕ್ಯಾಪ್ಟನ್ ಎಂದಿನಂತೆ ತನ್ನ ಕೋಣೆಯಲ್ಲಿ ಕುಳಿತು ಎಲ್ಲವನ್ನೂ ಗಮನಿಸುತಿದ್ದ.

ಆಗ, ಹಡಗಿನ ಮುಂಬಾಗದಲ್ಲಿ ನಿಂತು ನೊಡುತಿದ್ದ ಗಾರ್ಡ್, ಕ್ಯಾಪ್ಟನ್ನಿನಿಗೆ ಒಂದು ಸಂದೇಶ ಕಳಿಸಿದ. ನನಗೆ ಬೆಳಕು ಕಾಣಿಸುತ್ತಿದೆ. ತಕ್ಷಣ ಎಚ್ಚೆತ್ತ ಕ್ಯಾಪ್ಟನ್ , ಬೆಳಕು ನಿಂತಲ್ಲೇ ನಿಂತಿದೆಯಾ ಇಲ್ಲಾ ಚಲಿಸುತ್ತಿದೆಯಾ ಎಂದು ಕೇಳಿದ. ಅದಕ್ಕೆ ಗಾರ್ಡ್ ಹೇಳಿದ ನಿಂತಿರುವಂತೆ ಕಾಣುತ್ತಿದೆ.

ಆಗ ಕ್ಯಾಪ್ಟನ್, ತಾವು ಇನ್ನೊಂದು ಹಡಗಿನ ಹಾದಿಯಲ್ಲಿದ್ದೇವೆ, ಹೀಗೆ ಮುಂದುವರೆದರೆ ಎರಡು ಹಡಗು ಡಿಕ್ಕಿ ಹೊಡೆಯಬಹುದು ಎಂದುಕೊಂಡು ತಕ್ಷಣ, ಸುದ್ದಿ ಕಳಿಸುವವನಿಗೆ, ಮುಂದೆ ಬರುತ್ತಿರುವ ಹಡಗಿಗೆ “ತಮ್ಮ ದಿಕ್ಕನ್ನು ಇಪ್ಪತ್ತು ಕೋನ ತಿರುಗಿಸಿಕೊಳ್ಳುವಂತೆ” ಸುದ್ದಿ ಕಳಿಸು ಎಂದ. ಸುದ್ದಿ ಕಳಿಸುವವ ಸಂದೇಶವನ್ನು ತಲುಪಿಸಿದ, ಹಾಗೆ ಅಲ್ಲಿಂದ ವಾಪಸ್ಸು ಬಂದ ಸಂದೇಶವನ್ನು ಕ್ಯಾಪ್ಟನ್ನಿಗೆ ಕಳುಹಿಸಿದ. ಸಂದೇಶ “ದಯವಿಟ್ಟು ನಿಮ್ಮ ದಿಕ್ಕನ್ನು ಇಪ್ಪತ್ತು ಕೋನ ತಿರುಗಿಸಿಕೊಳ್ಳಿ” ಎಂದಿತ್ತು.

ಸುದ್ದಿ ಕೇಳಿದ ಕ್ಯಾಪ್ಟನ್, ಕೋಪದಿಂದ ಸುದ್ದಿ ಕಳಿಸುವವನಿಗೆ, “ನಾನು ಕ್ಯಾಪ್ಟನ್ ಹೇಳುತಿದ್ದೇನೆ, ನಿಮ್ಮ ದಿಕ್ಕನ್ನು ಇಪ್ಪತ್ತು ಕೋನ ತಿರುಗಿಸಿಕೊಳ್ಳಿ” ಎಂದು ಮರು ಸುದ್ದಿ ಕಳಿಸು ಎಂದ. ಸುದ್ದಿಕಳಿಸುವವ ಸುದ್ದಿಯನ್ನು ಕಳಿಸಿ, ವಾಪಸ್ಸು ಬಂದ ಸುದ್ದಿಯನ್ನು ಕ್ಯಾಪ್ಟನ್ನಿಗೆ ತಲುಪಿಸಿದ. ಸಂದೇಶ ಹೀಗಿತ್ತು “ನಾನು ಎರಡನೇ ದರ್ಜೆ ಸೈನಿಕ, ದಯವಿಟ್ಟು ನಿಮ್ಮ ದಿಕ್ಕನ್ನು ಇಪ್ಪತ್ತು ಕೋನ ತಿರುಗಿಸಿಕೊಳ್ಳಿ”.

ಸುದ್ದಿಯನ್ನು ನೋಡಿ ಕೆಂಡ ಮಂಡಲವಾದ ಕ್ಯಾಪ್ಟನ್, ಸುದ್ದಿಗಾರನಿಗೆ “ನಿಮ್ಮ ಹಡಗನ್ನು ತಿರುಗಿಸದಿದ್ದರೆ, ನಾನೀಗ ನಿಮ್ಮ ಮೇಲೆ ಯುದ್ದಘೋಶಿಸುತ್ತೇನೆ” ಎಂದು ಸುದ್ದಿ ಕಳಿಸುವಂತೆ ಹೇಳಿದ. ಆ ಸುದ್ದಿಗೆ ವಾಪಸ್ಸು ಬಂದ ಸಂದೇಶ “ಇದು ಲೈಟ್ ಹೌಸ್”. ಕ್ಯಾಪ್ಟನ್‍ನ ಕೋಪ ಇಳಿದು ನಗುತ್ತಾ ತನ್ನ ಹಡಗನ್ನು ೨೦ ಕೋನ ತಿರುಗಿಸಲು ಆದೇಶವಿತ್ತ.

ಕೆಲವೊಮ್ಮೆ ನಮಗೆ ಹೊರಗಡೆ ಕಾಣುವ ನಿಜವಾದ ವಸ್ತು, ನಮ್ಮ ಮನಸ್ಸಿನ ಸ್ಥಿತಿಯನ್ನು ಅವಲಂಬಿಸಿ ಬೇರೆಯದೇ ಆದ ವಸ್ತುವಿನಂತೆ ಕಾಣುತ್ತದೆ.