jump to navigation

ಮೌಲ್ಯಗಳ ಅವನತಿ – ಒಂದು ವಿವೇಚನೆ ನವೆಂಬರ್ 30, 2007

Posted by Bala in ಬದುಕು.
Tags:
trackback

ಯಾವುದೇ ಕಾಲದ ಇತಿಹಾಸದ ಪುಟಗಳನ್ನು ತಿರುವಿಹಾಕಿದರೆ, ಅಲ್ಲಿ ನಮಗೆ ಒಂದು ಕಡೆ, ಆ ಕಾಲದ ಮೌಲ್ಯಗಳನ್ನು ಅದರ ಹಿಂದಿನ ಕಾಲದ ಮೌಲ್ಯಗಳಿಗೆ ಹೋಲಿಸಿ, ಮೌಲ್ಯಗಳ ಅವನತಿ ಯಾಗಿದೆ ಎಂಬ ಒಂದು ಲೇಖನ ಕಣ್ಣಿಗೆ ಬಿದ್ದೇ ಬೀಳುತ್ತದೆ. ಹಾಗೆ ಕಾಲ ಕೆಟ್ಟುಹೋಯಿತು ಎಂಬ ಹೇಳಿಕೆ ಸರ್ವೇ ಸಾಮಾನ್ಯವಾಗಿ ಎಲ್ಲ ಕಾಲದಲ್ಲೂ ಕೇಳಿ ಬರುವ ಮಾತು. ಈಗಿನ ಸಮಾಜದಲ್ಲಿ ಮೌಲ್ಯಗಳ ಅವನತಿಯಾಗುತ್ತಿದೆಯೆ? ಕಾಲ ನಿಜವಾಗಿಯು ಕೆಟ್ಟುಹೊಗಿದೆಯೆ? ಎಂಬ ಪ್ರೆಶ್ನೆಗೆ ಉತ್ತರ ಹೌದು, ಇಲ್ಲ.

ಈಗ ಒಂದು ಸನ್ನಿವೇಶವನ್ನು ಗಮನಿಸೊಣ ಒಬ್ಬ ಪ್ರಾಮಾಣಿಕ ನಾದ ಲೋಕಾಯುಕ್ತನು ಒಬ್ಬ ಕುಖ್ಯಾತ ಲಂಚಕೊರನನ್ನು ಆಧಾರ ಸಮೇತವಾಗಿ ಹಿಡಿದರು. ಈ ಸನ್ನಿವೇಶದಲ್ಲಿ ನೀವು ಲಂಚಕೋರನನ್ನು ಅವನ ಮೌಲ್ಯಗಳನ್ನು ನೋಡಿದರೆ, ಹೌದು ಈಗಿನ ಸಮಾಜದಲ್ಲಿ ಮೌಲ್ಯಗಳ ಅವನತಿಯಾಗಿದೆ. ಈ ಲಂಚಕೋರ ಸಮಾಜದ ಒಂದು ಭಾಗಕ್ಕೆ ಮಾದರಿಯಾಗಿದ್ದಿರಬಹುದು. ಆದರೆ ಲಂಚ ಯಾವ ಕಾಲದಲ್ಲಿರಲಿಲ್ಲ. ಚಾಣಕ್ಯ ತನ್ನ ಅರ್ಥಶಾಸ್ತ್ರದಲ್ಲಿ ಒಂದು ಮಾತನ್ನು ಹೇಳುತ್ತಾನೇ. ಮೀನು ನೀರಿನಲ್ಲೇ ಇರುವುದರಿಂದ ಅದು ನೀರು ಕುಡಿಯದೇ ಇರುವಂತೆ ಎಚ್ಚರವಿರ ಬೇಕು ಅಂದರೆ ಹಣದ ಲೆಕ್ಕಾಚಾರದಲ್ಲಿರುವವನು ಹಣವನ್ನು ದುರುಪಯೊಗ ಮಾಡಿಕೊಳ್ಳಬಹುದು ಆದ್ದರಿಂದ ಈ ವಿಚಾರದಲ್ಲಿ ಯಾವಾಗಲೂ ಎಚ್ಚರಿಕೆಯಿಂದಿರಬೇಕು ಎನ್ನುತ್ತಾನೆ. ಹೀಗೆ ಲಂಚ ಮೊಸ ವಂಚನೆ ಎಲ್ಲ ಮನುಷ್ಯನ ಇತಿಹಾಸದಷ್ಟೇ ಹಳೆಯದು. ಇಲ್ಲಿ ಲಂಚವನ್ನು ಸಮರ್ಥಿಸುತ್ತಿಲ್ಲಾ, ಆದರೆ ಅದು ಈ ಸಮಾಜದಲ್ಲಿ ಮಾತ್ರ ಸೀಮಿತವಾಗಿರಲಿಲ್ಲ ಎಂಬುದನ್ನು ವಿವರಿಸಲು ಪ್ರಯತ್ನಿಸುತಿದ್ದೇನೆ.

ಮೇಲೆ ವಿವರಿಸಿದ ಸನ್ನಿವೇಶದ ಇನ್ನೊಂದು ಮುಖ ಮೌಲ್ಯಾಧಾರಿತವಾದ ಲೋಕಾಯುಕ್ತರು. ಈ ಮುಖವನ್ನು ನೊಡಿದರೆ ಮೌಲ್ಯಗಳು ಸಂಪೂರ್ಣಕುಸಿದಿಲ್ಲ ಎಂದು ತೋರಿಸುತ್ತದೆ. ಯಾವುದೇ ಸನ್ನಿವೇಶವನ್ನು  ಸಂಪೂರ್ಣ ವಾಗಿನೊಡಿದಾಗ ಒಂದು ಮುಖದಲ್ಲಿ ಮೌಲ್ಯ ಕುಸಿದಿರುವುದು ಕಂಡರೆ ಇನ್ನೊಂದು ಮುಖ ಮೌಲ್ಯಗಳು ಬದುಕಿರುವುದನ್ನು ತೋರಿಸುತ್ತದೆ. ಹೀಗೆ ಯಾವುದೇ ಸನ್ನಿವೇಶದ ಪೂರ್ಣಗೋಲವು ಈ ಎರಡು ಮುಖಗಳಿಂದ ಕೂಡಿದ್ದು , ಇವೆರೆಡನ್ನೂ ಒಟ್ಟಿಗೆ ನೋಡಿದಾಗ ಮಾತ್ರ ಅದು ಸಂಪೂರ್ಣವಾಗುವುದು ಬರೀ ಅರ್ಧ ಮುಖವನ್ನು ನೋಡಿದರೆ ದೊರೆಯುವುದು ಅರ್ಧ ಸತ್ಯ ಮಾತ್ರ.

ಮೌಲ್ಯ ಕುಸಿಯಿತು ಅಥವಾ ಕಾಲ ಕೆಟ್ಟುಹೋಯಿತು ಎನ್ನುವವರನ್ನು ಮನಶ್ಯಾಸ್ತ್ರದ ಪ್ರಕಾರ ಹೀಗೆ ವಿವರಿಸಬಹುದೇನೊ. ಕೆಲವು ವ್ಯಕ್ತಿಗಳಿಗೆ ತಮ್ಮ ಜೀವನದ ಒಂದು ಭಾಗ ಸುವರ್ಣಯುಗ ವೆಂದು ನಂಬಿಬಿಟ್ಟಿರುತ್ತಾರೆ. ಇಂತಹ ವ್ಯಕ್ತಿಗಳಿಗೆ ಇಂದಿನ ಕೆಲವು ಕೆಟ್ಟ ಸನ್ನಿವೇಶಗಳ ಕೆಟ್ಟ ಮುಖವನ್ನು ಕಂಡಾಗ, ತಮ್ಮ ಆಗಿ ಹೋದ ಸುವರ್ಣಯುಗದ ಮೌಲ್ಯಗಳೇ ಶ್ರೇಷ್ಟ ಎನಿಸುವುದರಲ್ಲಿ ಆಶ್ಚರ್ಯವೇನಿಲ್ಲ. ಹಾಗೆಯೆ ನಾವು ಎನನ್ನು ನೊಡಲು ಬಯಸುತ್ತೇವೊ, ಅದೇ ನಮಗೆ ಎಲ್ಲಾ ಕಡೆ ತಾಂಡವವಾಡುತ್ತಿರುವಂತೆ ಗೋಚರಿಸುತ್ತದೆ. ನಾವು ಎಲ್ಲವನ್ನೂ ಸಕಾರತ್ಮಕವಾಗಿ ಕಾಣುವುದರಿಂದ ನಕಾರತ್ಮಕ ಭಾವನೆಗಳು ದೂರವಾಗುತ್ತವೆ. ಇಲ್ಲಿ ಕೆಟ್ಟವರನ್ನು ಖಂಡಿಸುವುದು ತಪ್ಪು ಎಂದು ಹೇಳುತ್ತಿಲ್ಲ, ಕೆಟ್ಟವರನ್ನು ಹಿಡಿಯುವುದು, ತಪ್ಪನ್ನು ಖಂಡಿಸುವುದು ಯಾವುದೇ ಆರೋಗ್ಯಕರವಾದ ಸಮಾಜದ ಒಂದು ಪ್ರಮುಖ ಗುಣವಾಗಿರಬೇಕು. ತಪ್ಪು ಮಾಡಿದವರನ್ನು ಖಂಡಿಸಿ ಯಾರೂ ಬೇಡಾ ಎನ್ನುವುದಿಲ್ಲ ಅದರೆ ಮೌಲ್ಯ ಮತ್ತು ಕಾಲದ ತಂಟೆಗೆ ಹೋಗದಿದ್ದರೆ ಸಾಕು. 

Advertisements

ಟಿಪ್ಪಣಿಗಳು»

1. ravikrishnareddy - ಮಾರ್ಚ್ 7, 2008

ಬಾಲ,

ನೀವು ಸಂದರ್ಭವನ್ನು ಹೆಸರಿಸದಿದ್ದರೂ ಈ ಲೇಖನ ನೀವು ನನ್ನ ಪುನರ್ ಸ್ಥಾಪಿಸಬೇಕಿದೆ ಮೌಲ್ಯಗಳನ್ನು… ಲೇಖನಕ್ಕೆ ನೀಡಿದ ಪ್ರತಿಕ್ರಿಯೆ ಎನ್ನಿಸಿತು. ಅಲ್ಲದಿದ್ದರೆ ತಿಳಿಸಿ.

ನಿಜವಾಗಲೂ ನಾವು (ಭಾರತೀಯರು) ಹಿಂದೆಂದಿಗಿಂತಲೂ ಉತ್ತಮ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ ಎಂದು ನಾನು ನಂಬಿದ್ದೇನೆ. ಆದರೂ ಈ ವ್ಯವಸ್ಥೆಯಲ್ಲಿ ಇನ್ನೂ ಸಾಕಷ್ಟು ದೋಷಗಳಿವೆ ಹಾಗೂ ಇವನ್ನು ಕೆಲವು ಆದರ್ಶವಂತರು ಮತ್ತು ನಿಸ್ವಾರ್ಥಿಗಳು ಸೇರಿಕೊಂಡು ಸರಿಪಡಿಸಬಹುದು ಎಂಬ ವಿಷಯದಲ್ಲಿ ಭಾರೀ ವಿಶ್ವಾಸವಿಟ್ಟಿದ್ದೇನೆ. ಆದರೆ, ಈ ವಿಷಯಕ್ಕೆ ನಾವು ಕೇವಲ “ಸಕಾರಾತ್ಮಕ ವಿಷಯಗಳ” ಬಗ್ಗೆಯಷ್ಟೇ ಯೊಚಿಸದೆ “ಸಕಾರಾತ್ಮಕವಾಗಿ” ಯೋಚಿಸಬೇಕಿದೆ. ಕೆಟ್ಟ ವಿಷಯಗಳ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಅವನ್ನು ಎದುರಿಸಬೇಕಿದೆ. ನನ್ನ ಈ ವಾರದ ಅಂಕಣ ಲೇಖನದಲ್ಲಿ ಹಾಗೆ ದಿಟ್ಟಿಸಿ ನೋಡಿದ ಅಮೆರಿಕದ ಅದ್ಭುತ ಆಕ್ಟಿವಿಸ್ಟ್ ರಾಲ್ಫ್ ನೇಡರ್ ಬಗ್ಗೆ ಬರೆದಿದ್ದೇನೆ. ಸಾಧ್ಯವಾದರೆ ಅವನ ಬಗ್ಗೆ ಒಂದಷ್ಟು ಓದಿ. ಈ ಸಕಾರಾತ್ಮಕ ಭಾವನೆಗೂ ಮತ್ತು ಸಕಾರಾತ್ಮಕ ನಿಲುವಿಗೂ ವ್ಯತ್ಯಾಸ ಕಾಣಿಸುತ್ತದೆ.

ಇನ್ನು, ನೀವು ಮನಶ್ಯಾಸ್ತ್ರವನ್ನು ನನ್ನ ವಿಷಯಕ್ಕೇ ಹೇಳಿದ್ದರೆ, ಅಯ್ಯೋ ಮಾರಾಯ್ರೆ, ನನಗೆ ನಾಸ್ಟಾಲ್ಜಿಯ ಬಹಳ ಕಮ್ಮಿ ಸ್ವಾಮಿ!! ನೆನ್ನೆ ಎಷ್ಟು ಚೆನ್ನಾಗಿತ್ತು ಅನ್ನೋದಕ್ಕಿಂತ ನಾಳೆ ಎಷ್ಟು ಚೆನ್ನಾಗಿ ಮಾಡಿಕೊಳ್ಳಬಹುದು ಎನ್ನುವುದರ ಬಗ್ಗೆ ತಲೆಕೆಡಿಸಿಕೊಳ್ಳುವವನು ನಾನು!

ಅಂದ ಹಾಗೆ: ನಿಮ್ಮ ’ಹೆಂಡತಿ’ ಚುಟುಕ ಓದುತ್ತ ತಮಾಷೆಗೆ ನಿಮಗೆ ಹೇಳಬೇಕು ಅನ್ನಿಸಿದ್ದು, “ದಯವಿಟ್ಟು ನೀವು ನಿಮ್ಮ ಬಗ್ಗೆ (ಅಂದರೆ ನಿಮ್ಮ ಹೆಂಡತಿ ಬಗ್ಗೆ) ಹೇಳಿಕೊಳ್ಳಿ, ಸ್ವಾಮಿ. (Speak for yourself.)” ನಿಮಗಿನ್ನೂ ಮದುವೆ ಆಗಿಲ್ಲ ಅಂದುಕೊಳ್ತೇನೆ. ಈಗಲೆ ನೀವು ಇಷ್ಟು ನಿರಾಶಾವಾದಿ ಆದ್ರೆ ಹೇಗೆ???

ನಮಸ್ಕಾರ,
ರವಿ…
http://amerikadimdaravi.blogspot.com

2. balaglobal - ಮಾರ್ಚ್ 8, 2008

ರವಿ,
ನಿಮ್ಮ ಪ್ರತಿಕ್ರಿಯೆಗೆ ನನ್ನ ಧನ್ಯವಾದಗಳು. ನಾನು ನಿಮ್ಮ ಲೇಖನಗಳ ಅಭಿಮಾನಿ. ಬಹಳ ಹಿಂದೆ ವಚನಗಳನ್ನು ಹುಡುಕುತ್ತಾ ನಿಮ್ಮ ವಿಚಾರ ಮಂಟಪಕ್ಕೆ ಭೇಟಿ ನೀಡಿದ ನಂತರ ಅದು ನನ್ನ ಮೆಚ್ಚಿನ ತಾಣಗಳಲ್ಲಿ ಓಂದಾಗಿದೆ. ನಿಮ್ಮ ಲೇಖನಗಳನ್ನೆಲ್ಲಾ ತಪ್ಪದೇ ಓದುತ್ತೇನೆ.

ಮೊದಲು ನನ್ನ ಬಗ್ಗೆ, ನನಗೆ ಮದುವೆಯಾಗಿ ಹನ್ನೊಂದು ವರುಷಗಳಾಗಿವೆ. ನನ್ನ ಆರು ವರುಷದ ಮಗಳ ಹೆಸರೇ ಚಂದನ. ನಾನು ವರ್ಜೀನಿಯಾದ ನಿವಾಸಿ.

ಹೌದು, ನಿಮ್ಮ ಲೇಖನ ಪುನರ್ ಸ್ಥಾಪಿಸಬೇಕಿದೆ ಮೌಲ್ಯಗಳನ್ನು ಕುರಿತೇ ನಾನು ನನ್ನ ಅನಿಸಿಕೆಯನ್ನು ಬರೆದೆ. ನನ್ನ ಉದ್ದೇಶ ಇಷ್ಟೇ, ಮೌಲ್ಯಗಳ ಮೊತ್ತ ಯಾವುದೇ ಒಂದು ಸಮಾಜದಲ್ಲಿ ಹೆಚ್ಚು ಕಡಿಮೇ ಒಂದೇ ಆಗಿರುತ್ತದೆ. ಕೆಲವೊಮ್ಮೆ ಕೆಟ್ಟದ್ದನ್ನು ನೊಡಿದಾಗ ಆವೇಶಭರಿತದಿಂದ ನಮ್ಮ ದೃಷ್ಟಿ ಸಂಕುಚಿತಗೊಳ್ಳುತ್ತದೆ. ನಿಮ್ಮ ಲೇಖನಗಳಲ್ಲಿ ಕೆಲವೊಮ್ಮೆ ಈ ಆವೇಶಭರಿತವನ್ನು ಕಂಡಿದ್ದೇನೇ, ಅವುಗಳಲ್ಲಿ “ಮೌಲ್ಯಾ” ಕೂಡ ಒಂದು. ತಪ್ಪಾಗಿ ತಿಳಿಯಬೇಡಿ, ಆವೇಶವಿಲ್ಲದೇ ನೀವು ಹೇಳಬೇಕಾದುದನ್ನು ಹೇಳಿದರೆ, ಒದುಗನ ಮನಸ್ಸಿನಲ್ಲಿ ತಲ್ಲಣಗಳ ಬದಲಾಗಿ ನಿಶ್ಯಬ್ಧವಾದ ಬದಲಾವಣೆಯನ್ನು ತರಬಹುದು ಎಂಬುದು ನನ್ನ ಅನಿಸಿಕೆ.

ನಿಮ್ಮ ಮೌಲ್ಯ ಲೇಖನದಲ್ಲಿ ನೀವು ನಿಮ್ಮ ಬಾಲ್ಯದ ನೆನಪುಗಳನ್ನು ಹೇಳಿ, ಅಂದಿನ ಮೌಲ್ಯಗಳನ್ನು ಇಂದಿನ ಮೌಲ್ಯಗಳೊಂದಿಗೆ ಹೋಲಿಸಿದ್ದೀರಿ, ಅದಕ್ಕೇ ಮನಶ್ಯಾಸ್ತ್ರ ದ ಪ್ರಸ್ತಾಪ..

ಇಂತಿ,
ಬಾಲ.

3. ravikrishnareddy - ಮಾರ್ಚ್ 9, 2008

ಬಾಲ,

ಕ್ಷಮಿಸಿ, ಕೆಲವೊಂದು assume ಮಾಡಿಕೊಂಡಿದ್ದರಿಂದ ಗೊತ್ತಾಗಲಿಲ್ಲ. ಹಾಗಾಗಿ ಒಂದೆರಡು ಮಾತನ್ನು ವಾಪಸು ತೆಗೆದುಕೊಳ್ಳುತ್ತೇನೆ. ‘ಹೆಂಡತಿ’ ವಿಚಾರಕ್ಕೆ ಸುಮ್ಮನೆ ತುಂಟತನ ಮಾಡೋಣ ಎನ್ನಿಸಿತು. ನನ್ನ ಸಹೋದ್ಯೋಗಿಗಳು ಯಾರಾದರೂ ಈ ತರಹದ ಜನರಲೈಸ್ ಮಾಡಿ ಆಡುವ ತಮಾಷೆ ವಿಚಾರಗಳಿಗೆ ಸುಮ್ಮನೆ ಇನ್ನೂ ಹೆಚ್ಚಿನ ನಗು ಉಕ್ಕಿಸಲು “speak for yourself” ಎಂದು ಅಭ್ಯಾಸ ನನಗೆ!

ಅಂದ ಹಾಗೆ, ಆವೇಶ ಮತ್ತು ನಿಶ್ಯಬ್ದ ಬದಲಾವಣೆಯ ಬಗೆಗಿನ ನಿಮ್ಮ ಸಲಹೆಯನ್ನು ನೆನಪಿಟ್ಟಿರುತ್ತೇನೆ.

ಧನ್ಯವಾದ ಮತ್ತು ನಮಸ್ಕಾರಗಳು,
ರವಿ…
http://amerikadimdaravi.blogspot.com

4. balaglobal - ಮಾರ್ಚ್ 10, 2008

ರವಿ,
ನಿಮ್ಮ ಬಗ್ಗೆ ನನ್ನಲ್ಲಿದ್ದ ಗೌರವ ಇಮ್ಮಡಿಯಾಗಿದೆ. ನಿಮ್ಮ ಎಲ್ಲಾ ಪ್ರಯತ್ನಗಳಲ್ಲೂ ಯಶಸ್ಸು ನಿಮ್ಮದಾಗಲಿ ಎಂದು ಹಾರೈಸುತ್ತೇನೆ.

ಸ್ನೇಹಪೂರ್ವಕವಾಗಿ,
ಬಾಲ.

5. pradeep - ಜೂನ್ 21, 2009

hello, this is pradeep. write somthing about morality in socity.i want to know about morality please help me. write in kannada.

balaglobal - ಜೂನ್ 21, 2009

Pradeep,
Thanks for your comments.

-Bala.


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: