jump to navigation

ಬದನೇಕಾಯಿ ಪುರಾಣ ಅಕ್ಟೋಬರ್ 17, 2007

Posted by Bala in ಬದುಕು.
trackback

ಬದನೇಕಾಯಿ ಬಗ್ಗೆ ಇರುವ ಒಂದು ಜನಪ್ರೀಯ ಗಾದೆ “ವೇದಾಂತ ಹೇಳಕ್ಕೆ ಬದನೇಕಾಯಿ ತಿನ್ನಕ್ಕೆ“. ನನಗೆ ತಿಳಿದಂತೆ ಈ ಗಾದೆಯ ಅರ್ಥ ವೇದಾಂತ ಬರಿ ಹೇಳುವುದಕ್ಕೆ ಮಾತ್ರ ಬದುಕಲಿಕ್ಕೆ ಬದನೇಕಾಯೆಯನ್ನೇ ತಿನ್ನಬೇಕು ಅಂದರೆ ವೇದಾಂತ ಬರೀ ಹೇಳುವುದಕ್ಕೆ ಅಥವಾ ಕೇಳುವುದಕ್ಕೆ ಚೆನ್ನ ಅನುಷ್ಟಾನ ಮಾಡಲು ಕಷ್ಟ ಬದನೇಕಾಯಿ ತಿನ್ನೊ ಅಷ್ಟು ಸುಲಭ ಅಲ್ಲ??. ಆಶ್ಚರ್ಯದ ಸಂಗತಿಯೆಂದರೆ ಎಲ್ಲಾ ತರಕಾರಿಬಿಟ್ಟು ಬದನೇಕಾಯಿಯನ್ನೆ ಅರಿಸಿದ್ದು ಯಾಕೆ. ನನಗೇನೊ ಬದನೇಕಾಯಿ ಇಷ್ಟ  ಅದರಲ್ಲೂ ಬದನೇಕಾಯಿ ಎಣಗಾಯಿ ಎಂದರೆ ಪಂಚಪ್ರಾಣ. ಆದರೆ ಎಲ್ಲರಿಗೂ ಬದನೇಕಾಯಿ ಇಷ್ಟ ಅನ್ನೊದಕ್ಕಾಗೊದಿಲ್ಲಾ. ಆಂದಮೇಲೆ ಈ ಗಾದೆಯ ಮೂಲ ಕರ್ತೃವಿಗೆ ನನ್ನ ಹಾಗೆ ಬದನೇಕಾಯಿ ಎಂದರೆ ಪಂಚಪ್ರಾಣವಿದ್ದಿರಬೇಕು. ಕೆಲವರು ಯಾವಾಗಲು ಮಾತು ಮಾತಿಗೂ ಬದನೇಕಾಯಿ ಎನ್ನುತ್ತಿರುತ್ತಾರೆ, ಇವರ ಬಳಿ ನೀವು ಏನೇ ಮಾತಾಡಿ, ಮೊದಲು ಬದನೇಕಾಯಿ ಎಂದು ನಂತರ ಮಾತು ಮುಂದುವರೆಸುತ್ತಾರೆ. ಬದನೇಕಾಯಿ ಎಂಬ ಪದವನ್ನು ಆಡುಮಾತಿನಲ್ಲಿ ’ನೀನು ಹೇಳುತ್ತ್ತಿರುವುದು ಸುಳ್ಳು ಅಥವಾ ಬುರುಡೇ ಬಿಡುತಿದ್ದೀಯಾ ಅಥವಾ ನಿನಗೆ ಏನು ಗೊತ್ತಿಲ್ಲ ಅಥವಾ ನಿನಗೆ ಬುದ್ದಿ ಇಲ್ಲ’ ಇತ್ಯಾದಿ ಅರ್ಥಗಳೊಂದಿಗೆ ಬಳಸುತ್ತಾರೆ.

ಆಕರ್ಶಕವಾಗಿ ಕಾಣುವ ತರಕಾರಿಗಳಲ್ಲಿ ನೇರಳೇ ಬಣ್ಣದ  ಬದನೇಕಾಯಿ ಕೂಡ ಒಂದು. ಬದನೇಕಾಯಿ ಟೊಮೇಟೊನಂತೆ ನಿಜವಾಗಿಯೂ ಹಣ್ಣು , ಅದರೂ ಇದನ್ನು ತರಕಾರಿಯ ಗುಂಪಿನಲ್ಲಿ ಇಟ್ಟಿದ್ದಾರೆ. ಬದನೇಕಾಯಿ ತವರೂರು ದಕ್ಷಿಣ ಭಾರತ ಮತ್ತು ಶ್ರೀಲಂಕಾ. ಇಡೀ ವಿಶ್ವಕ್ಕೆ ದಕ್ಷಿಣ ಭಾರತದ ಒಂದು ಅಮೂಲ್ಯ ಕೊಡುಗೆ ಎಂದರೆ ಬದನೇಕಾಯಿ!!. ಇದು ಬಾರತದಿಂದ ಚೈನಾ ದೇಶಕ್ಕೆ ಸುಮಾರು ಕ್ರಿ.ಶ.ಐದನೇ ಶತಮಾನದಲ್ಲಿ ಹೊಗಿರಬಹುದು. ನಂತರ ಆಫ್ರಿಕ ದೇಶದಲ್ಲಿ ಬದನೇಕಾಯಿ ಬೆಳೆಯಲಾರಂಬಿಸಿದರು. ಸುಮಾರು ೧೪ನೇ ಶತಮಾನದಲ್ಲಿ ಇಟಲಿಯಲ್ಲಿ ಬದನೇಕಾಯಿಯ ಪ್ರವೇಶವಾಗಿ ಈಗಲೂ ಇಟಲಿಯಲ್ಲಿ ಬದನೆಕಾಯಿ ಎಲ್ಲರ ಮೆಚ್ಚಿನ ತರಕಾರಿ. ಎಷ್ಟೊ ಸಮಯದವರೆಗೂ ಯುರೊಪ್ ನಲ್ಲಿ ಬದನೇಕಾಯನ್ನು ತರಕಾರಿಗಿನ್ನ ಹೆಚ್ಚಾಗಿ ತೋಟದ ಶೃಂಗಾರ ಗಿಡವಾಗಿ ಬೆಳೆಯುತಿದ್ದರಂತೆ. ಮೂಲ ಬದನೇಕಾಯಿಯಲ್ಲಿ ಸ್ವಲ್ಪ ಕಹಿಯಿದ್ದರಿಂದ ಜನಪ್ರೀಯವಾಗಿರಲ್ಲಿಲ್ಲ ಹದಿನೆಂಟನೇ ಶತಮಾನದಿಂದಾಚೆಯಿಂದ ಬದನೇಕಾಯಿಯ ಕಹಿ ಮರೆಯಾಗಿ, ಜನಪ್ರೀಯ ತರಕಾರಿಯಾಗಿದೆ.

ಸಾಮಾನ್ಯವಾಗಿ ನೇರಳೆ ಬಣ್ಣವಿರುವ ಬದನೇಕಾಯಿ, ತಿಳಿ ಹಸಿರು, ಬಿಳಿ ಬಣ್ಣದಲ್ಲೂ ದೊರೆಯುತ್ತದೆ. ತಿಳಿ ಹಸಿರು ಬಣ್ಣದ ಬದನೇಕಾಯಿಯ ವಾಂಗಿಬಾತ್ ನೆನೆಸಿಕೊಂಡರೆ ಬಾಯಲ್ಲಿ ನೀರೂರುತ್ತದೆ. ಗಾತ್ರದಲ್ಲೂ ಬದನೇಕಾಯಿ ನಾನಾ ಗಾತ್ರದಲ್ಲಿ ಗೊಚರಿಸುತ್ತದೆ. ಉದ್ದನೆಯ, ಮೊಟ್ಟೆಯಾಕಾರದ, ದಪ್ಪನೆಯ ಬದನೇಕಾಯಿಗಳಿವೆ. ಇಟಲೀ ದೇಶದ ಬದನೇಕಾಯಿಯನ್ನು ನಿಜವಾಗಿಯೂ ಆನೆ ಗಾತ್ರದ ಬದನೇಕಾಯಿ ಎನ್ನಬೇಕು.

ಇಂಗ್ಲೀಷಿನಲ್ಲಿ ಬದನೇಕಾಯಿಗೆ ಎಗ್ ಪ್ಲಾಂಟ್ ಎನ್ನುತ್ತಾರೆ. ಯಾಕೆಂದರೆ ಬಿಳಿ ಬಣ್ಣದ ಮೊಟ್ಟೆಯಾಕಾರ ಬದನೇಕಾಯಿ ನೊಡುವುದಕ್ಕೆ ಕೊಳಿ ಮೊಟ್ಟೆಥರ ಕಾಣಿಸಿದ್ದರಿಂದ ಇದಕ್ಕೆ ಎಗ್ ಪ್ಲಾಂಟ್ ಎಂದು ಹೆಸರಿಟ್ಟರಂತೆ.

ಬದನೇಕಾಯಿಯಲ್ಲಿರುವ ವಿಟಮಿನ್ ಮತ್ತು ಖನಿಜಾಂಶಗಳೆಂದರೆ, ನಾರು (ಫೈಬರ್), ಪೊಟಾಸ್ಸಿಯಂ, ಮ್ಯಾಂಗನೀಸ್, ತಾಮ್ರ, ವಿಟಮಿನ್ B1, B3, B6, ಫೊಲೇಟ್, ಮೆಗ್ನೀಷಿಯಮ್ ಇತ್ಯಾದಿ.

ಜೈ ಬದನೇಕಾಯಿ!! ಜೈ ವಾಂಗೀಬಾತ್!!

Advertisements

ಟಿಪ್ಪಣಿಗಳು»

1. Mallikarjun - ಅಕ್ಟೋಬರ್ 18, 2007
2. balaglobal - ಅಕ್ಟೋಬರ್ 31, 2007

ಮಲ್ಲಿಕಾರ್ಜುನ್ ಅವರೆ
ಧನ್ಯವಾದಗಳು
-ಬಾಲ


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: