jump to navigation

ಇದೇ ಜೀವನ ಅಕ್ಟೋಬರ್ 30, 2007

Posted by Bala in ಬದುಕು.
Tags:
add a comment

ಮುಕೇಶ್‍ ಹಾಡಿರುವ ಹಿಂದಿ ಸಿನೇಮಾಗೀತೆಯೊಂದರ ಭಾವಾನುವಾದ

ಇನ್ಯಾರದೊ ಮುಗುಳ್ನಗೆ ನನಗೆ ಸ್ಫೂರ್ತಿ
ಇನ್ಯಾರದೊ ದುಃಖ ಸಿಗುವಂತಿದ್ದರೆ ಅದು ನನಗೆ ಸಾಲ
ಇನ್ಯಾರದೊ ಕಾರಣದಿಂದ ನಿನ್ನ ಹೃದಯದಲ್ಲಿ ಪ್ರೀತಿ
ಇದೇ ಜೀವನ

ನಿಜ, ಫಕೀರನಂತೆ ನನ್ನ ಜೇಬು ಖಾಲಿಯಿದೆ
ಆದರೂ ಹೃದಯದ ತುಂಬಾ ಪ್ರೀತಿಯಿದೆ
ಪ್ರೀತಿಗಾಗಿ ಪ್ರಾಣವನ್ನು ಕೊಡಬಲ್ಲೆ
ಪ್ರೀತಿಗಾಗಿ ಪ್ರಪಂಚವನ್ನೇ ಸುಡಬಲ್ಲೆ
ಇನ್ಯಾರಿಗೂ ಇದರಲ್ಲಿ ನಂಬಿಕೆ ಇದೆಯೊ ಇಲ್ಲವೊ,ಆದರೂ
ಇದೇ ಜೀವನ

ಹೃದಯ ಹೃದಯಗಳ ನಂಬಿಕೆಯಿಂದ ಸಂಬಂಧ
ನಮ್ಮಿಂದಲೇ ಇನ್ನೂ ಬದುಕಿದೆ ಪ್ರೀತಿ, ಬಂಧ
ಸತ್ತಮೇಲೂ ಇನ್ನೊಬ್ಬರ ನೆನಪಿನಲ್ಲಿ ಬದುಕಬಲ್ಲೆನು
ಇನ್ನೊಬ್ಬರ ಕಣ್ಣಿರನ್ನು ಒರೆಸುವ ಮುಗುಳ್ನಗೆಯಾಗಬಲ್ಲೆನು
ಆ ಹೂವು ಎಲ್ಲಾ ಜೀವಕ್ಕೂ ಸಾರಿ ಸಾರಿ ಹೇಳುತ್ತಿದೆ
ಇದೇ ಜೀವನ

ಗುಟ್ಟು – ಮೂಲ ಹಿಂದಿ ಹಾಡಿನಲ್ಲಿ  “ಜೀನಾ ಇಸಿಕಾ ನಾಮ್ ಹೈ” ಎಂಬ ಸಾಲಿದೆ.

ಬದನೇಕಾಯಿ ಪುರಾಣ ಅಕ್ಟೋಬರ್ 17, 2007

Posted by Bala in ಬದುಕು.
2 comments

ಬದನೇಕಾಯಿ ಬಗ್ಗೆ ಇರುವ ಒಂದು ಜನಪ್ರೀಯ ಗಾದೆ “ವೇದಾಂತ ಹೇಳಕ್ಕೆ ಬದನೇಕಾಯಿ ತಿನ್ನಕ್ಕೆ“. ನನಗೆ ತಿಳಿದಂತೆ ಈ ಗಾದೆಯ ಅರ್ಥ ವೇದಾಂತ ಬರಿ ಹೇಳುವುದಕ್ಕೆ ಮಾತ್ರ ಬದುಕಲಿಕ್ಕೆ ಬದನೇಕಾಯೆಯನ್ನೇ ತಿನ್ನಬೇಕು ಅಂದರೆ ವೇದಾಂತ ಬರೀ ಹೇಳುವುದಕ್ಕೆ ಅಥವಾ ಕೇಳುವುದಕ್ಕೆ ಚೆನ್ನ ಅನುಷ್ಟಾನ ಮಾಡಲು ಕಷ್ಟ ಬದನೇಕಾಯಿ ತಿನ್ನೊ ಅಷ್ಟು ಸುಲಭ ಅಲ್ಲ??. ಆಶ್ಚರ್ಯದ ಸಂಗತಿಯೆಂದರೆ ಎಲ್ಲಾ ತರಕಾರಿಬಿಟ್ಟು ಬದನೇಕಾಯಿಯನ್ನೆ ಅರಿಸಿದ್ದು ಯಾಕೆ. ನನಗೇನೊ ಬದನೇಕಾಯಿ ಇಷ್ಟ  ಅದರಲ್ಲೂ ಬದನೇಕಾಯಿ ಎಣಗಾಯಿ ಎಂದರೆ ಪಂಚಪ್ರಾಣ. ಆದರೆ ಎಲ್ಲರಿಗೂ ಬದನೇಕಾಯಿ ಇಷ್ಟ ಅನ್ನೊದಕ್ಕಾಗೊದಿಲ್ಲಾ. ಆಂದಮೇಲೆ ಈ ಗಾದೆಯ ಮೂಲ ಕರ್ತೃವಿಗೆ ನನ್ನ ಹಾಗೆ ಬದನೇಕಾಯಿ ಎಂದರೆ ಪಂಚಪ್ರಾಣವಿದ್ದಿರಬೇಕು. ಕೆಲವರು ಯಾವಾಗಲು ಮಾತು ಮಾತಿಗೂ ಬದನೇಕಾಯಿ ಎನ್ನುತ್ತಿರುತ್ತಾರೆ, ಇವರ ಬಳಿ ನೀವು ಏನೇ ಮಾತಾಡಿ, ಮೊದಲು ಬದನೇಕಾಯಿ ಎಂದು ನಂತರ ಮಾತು ಮುಂದುವರೆಸುತ್ತಾರೆ. ಬದನೇಕಾಯಿ ಎಂಬ ಪದವನ್ನು ಆಡುಮಾತಿನಲ್ಲಿ ’ನೀನು ಹೇಳುತ್ತ್ತಿರುವುದು ಸುಳ್ಳು ಅಥವಾ ಬುರುಡೇ ಬಿಡುತಿದ್ದೀಯಾ ಅಥವಾ ನಿನಗೆ ಏನು ಗೊತ್ತಿಲ್ಲ ಅಥವಾ ನಿನಗೆ ಬುದ್ದಿ ಇಲ್ಲ’ ಇತ್ಯಾದಿ ಅರ್ಥಗಳೊಂದಿಗೆ ಬಳಸುತ್ತಾರೆ.

ಆಕರ್ಶಕವಾಗಿ ಕಾಣುವ ತರಕಾರಿಗಳಲ್ಲಿ ನೇರಳೇ ಬಣ್ಣದ  ಬದನೇಕಾಯಿ ಕೂಡ ಒಂದು. ಬದನೇಕಾಯಿ ಟೊಮೇಟೊನಂತೆ ನಿಜವಾಗಿಯೂ ಹಣ್ಣು , ಅದರೂ ಇದನ್ನು ತರಕಾರಿಯ ಗುಂಪಿನಲ್ಲಿ ಇಟ್ಟಿದ್ದಾರೆ. ಬದನೇಕಾಯಿ ತವರೂರು ದಕ್ಷಿಣ ಭಾರತ ಮತ್ತು ಶ್ರೀಲಂಕಾ. ಇಡೀ ವಿಶ್ವಕ್ಕೆ ದಕ್ಷಿಣ ಭಾರತದ ಒಂದು ಅಮೂಲ್ಯ ಕೊಡುಗೆ ಎಂದರೆ ಬದನೇಕಾಯಿ!!. ಇದು ಬಾರತದಿಂದ ಚೈನಾ ದೇಶಕ್ಕೆ ಸುಮಾರು ಕ್ರಿ.ಶ.ಐದನೇ ಶತಮಾನದಲ್ಲಿ ಹೊಗಿರಬಹುದು. ನಂತರ ಆಫ್ರಿಕ ದೇಶದಲ್ಲಿ ಬದನೇಕಾಯಿ ಬೆಳೆಯಲಾರಂಬಿಸಿದರು. ಸುಮಾರು ೧೪ನೇ ಶತಮಾನದಲ್ಲಿ ಇಟಲಿಯಲ್ಲಿ ಬದನೇಕಾಯಿಯ ಪ್ರವೇಶವಾಗಿ ಈಗಲೂ ಇಟಲಿಯಲ್ಲಿ ಬದನೆಕಾಯಿ ಎಲ್ಲರ ಮೆಚ್ಚಿನ ತರಕಾರಿ. ಎಷ್ಟೊ ಸಮಯದವರೆಗೂ ಯುರೊಪ್ ನಲ್ಲಿ ಬದನೇಕಾಯನ್ನು ತರಕಾರಿಗಿನ್ನ ಹೆಚ್ಚಾಗಿ ತೋಟದ ಶೃಂಗಾರ ಗಿಡವಾಗಿ ಬೆಳೆಯುತಿದ್ದರಂತೆ. ಮೂಲ ಬದನೇಕಾಯಿಯಲ್ಲಿ ಸ್ವಲ್ಪ ಕಹಿಯಿದ್ದರಿಂದ ಜನಪ್ರೀಯವಾಗಿರಲ್ಲಿಲ್ಲ ಹದಿನೆಂಟನೇ ಶತಮಾನದಿಂದಾಚೆಯಿಂದ ಬದನೇಕಾಯಿಯ ಕಹಿ ಮರೆಯಾಗಿ, ಜನಪ್ರೀಯ ತರಕಾರಿಯಾಗಿದೆ.

ಸಾಮಾನ್ಯವಾಗಿ ನೇರಳೆ ಬಣ್ಣವಿರುವ ಬದನೇಕಾಯಿ, ತಿಳಿ ಹಸಿರು, ಬಿಳಿ ಬಣ್ಣದಲ್ಲೂ ದೊರೆಯುತ್ತದೆ. ತಿಳಿ ಹಸಿರು ಬಣ್ಣದ ಬದನೇಕಾಯಿಯ ವಾಂಗಿಬಾತ್ ನೆನೆಸಿಕೊಂಡರೆ ಬಾಯಲ್ಲಿ ನೀರೂರುತ್ತದೆ. ಗಾತ್ರದಲ್ಲೂ ಬದನೇಕಾಯಿ ನಾನಾ ಗಾತ್ರದಲ್ಲಿ ಗೊಚರಿಸುತ್ತದೆ. ಉದ್ದನೆಯ, ಮೊಟ್ಟೆಯಾಕಾರದ, ದಪ್ಪನೆಯ ಬದನೇಕಾಯಿಗಳಿವೆ. ಇಟಲೀ ದೇಶದ ಬದನೇಕಾಯಿಯನ್ನು ನಿಜವಾಗಿಯೂ ಆನೆ ಗಾತ್ರದ ಬದನೇಕಾಯಿ ಎನ್ನಬೇಕು.

ಇಂಗ್ಲೀಷಿನಲ್ಲಿ ಬದನೇಕಾಯಿಗೆ ಎಗ್ ಪ್ಲಾಂಟ್ ಎನ್ನುತ್ತಾರೆ. ಯಾಕೆಂದರೆ ಬಿಳಿ ಬಣ್ಣದ ಮೊಟ್ಟೆಯಾಕಾರ ಬದನೇಕಾಯಿ ನೊಡುವುದಕ್ಕೆ ಕೊಳಿ ಮೊಟ್ಟೆಥರ ಕಾಣಿಸಿದ್ದರಿಂದ ಇದಕ್ಕೆ ಎಗ್ ಪ್ಲಾಂಟ್ ಎಂದು ಹೆಸರಿಟ್ಟರಂತೆ.

ಬದನೇಕಾಯಿಯಲ್ಲಿರುವ ವಿಟಮಿನ್ ಮತ್ತು ಖನಿಜಾಂಶಗಳೆಂದರೆ, ನಾರು (ಫೈಬರ್), ಪೊಟಾಸ್ಸಿಯಂ, ಮ್ಯಾಂಗನೀಸ್, ತಾಮ್ರ, ವಿಟಮಿನ್ B1, B3, B6, ಫೊಲೇಟ್, ಮೆಗ್ನೀಷಿಯಮ್ ಇತ್ಯಾದಿ.

ಜೈ ಬದನೇಕಾಯಿ!! ಜೈ ವಾಂಗೀಬಾತ್!!

ಸತ್ಯ ಅಕ್ಟೋಬರ್ 15, 2007

Posted by Bala in ಬದುಕು.
Tags:
2 comments

ಸತ್ಯ ಪದದ ಧಾತು ಸತ್ ಎಂದರೆ ಇರುವುದು ಎಂದರ್ಥ. ಸತ್ಯ ಎಂದರೆ ಯಾವುದು ಅವಿನಾಶಿಯಾಗಿರುವುದೊ ಎಂದರ್ಥ. ಆದರೆ ಸಾಮಾನ್ಯವಾಗಿ ಆಡು ಮಾತಿನಲ್ಲಿ ಸತ್ಯ ಎಂದರೆ ನಿಜ ಹೇಳುವುದು ಅಥವಾ ಸುಳ್ಳನ್ನು  ಹೇಳದಿರುವುದು ಎಂಬ ಅರ್ಥವಿದೆ. ರಾಜ ಹರಿಶ್ಚಂದ್ರ ಸುಳ್ಳು ಹೇಳದೇ ಯಾವಾಗಲೂ ತಾನು ಆಡಿದ ಮಾತಿನಂತೆ ನಡೆದು ಸತ್ಯ ಹರಿಶ್ಚಂದ್ರ ಎಂಬ ಅನ್ವರ್ಥಕನಾಮ ವನ್ನು ಪಡೆದ. ಅದರಿಂದಲೊ ಎನೊ ಸತ್ಯ ಎಂದರೆ ಯಾವಾಗಲೂ ನಿಜವನ್ನು ಮಾತಾಡುವುದು ಅಥವಾ ಸುಳ್ಳು ಹೇಳದೇ ಇರುವುದು ಎಂಬ ಅರ್ಥ ರೂಢಿಯಲ್ಲಿದೆ . ಆದರೆ ಸತ್ಯ ಪದದ ಅರ್ಥ ಬರೀ ನಿಜವನ್ನು ನುಡಿಯುವುದಕ್ಕಿಂತ ಹೆಚ್ಚು. ಒಂದು ಜೀವ ಉಳಿಸುವ ಸಲುವಾಗಿ ಒಂದು ಸುಳ್ಳು ಹೇಳಿದರೇ ಅದರಿಂದ ಎನೂ ನಷ್ಟವಿಲ್ಲ. ಒಮ್ಮೆ ಯುವಕನೊಬ್ಬ ಕಾಡಿನ ದಾರಿಯಲ್ಲಿ ನಡೆಯುತಿದ್ದಾಗ ಒಂದು ಮೊಲ ಆತನ ಮುಂದೆ ಹಾಯ್ದು ಹೊಯಿತು. ಮೊಲದ ಹಿಂದೆಯೆ ಒಬ್ಬ ಬೇಟೆಗಾರ ಕೈಯಲ್ಲಿ ಬಂದೂಕು ಹಿಡಿದು ಬಂದು ಅಲ್ಲಿದ್ದ ಯುವಕನನ್ನು ಇಲ್ಲೊಂದು ಮೊಲ ಬಂತು ಎಲ್ಲಿ ಹೊಯಿತು ನೋಡಿದೆಯಾ ಎಂದು ಕೇಳಿದ. ಈಗ ಯುವಕ ನಿಜ ಹೇಳಿದರೆ ಮೊಲ ಸಾಯುತ್ತದೆ, ಸುಳ್ಳು ಹೇಳಿದರೆ ಮೊಲವನ್ನು ಉಳಿಸಬಹುದು. ಯುವಕ ಸುಳ್ಳು ಹೇಳಿ ಬೇಟೆಗಾರನನ್ನು ತಪ್ಪು ದಾರಿಯಲ್ಲಿ ಕಳಿಸಿದ.

ಸತ್ಯ ಎಂದರೆ ನಿಜ ಎಂದಷ್ಟೇ ಅರ್ಥವಲ್ಲ. ಸುಳ್ಳು ಹೇಳದೇ ಇರುವುದನ್ನು ನಿಜ ಎಂದು ಹೇಳಬಹುದು. ವೇದಾಂತದ ಪ್ರಕಾರ ಯಾವುದು ಈ ಪ್ರಪಂಚದಲ್ಲಿ ಅವಿನಾಶಿಯಾಗಿರುವುದೊ ಅದು ಸತ್ಯ. ಪ್ರಪಂಚದ ಎಲ್ಲಕ್ಕೂ ಮೂಲವಾದ ಮತ್ತು ಅವಿನಾಶಿಯಾದ  ಬ್ರಹ್ಮವೊಂದೆ ಸತ್ಯ ಅದನ್ನು ಹೊರತು ಮಿಕ್ಕೆಲ್ಲವೂ ಮಿಥ್ಯ ಅಂದರೆ ವಿನಾಶವಾಗುವಂತವು. ಬ್ರಹ್ಮನನ್ನು  ಸತ್ +  ಚಿತ್ + ಆನಂದ = ಸಚ್ಚಿದಾನಂದ ಎಂದು ಕರೆಯುತ್ತದೆ ವೇದಾಂತ.

ಬ್ರಹ್ಮನಿಗ್ಯಾಕೆ ನಾಲ್ಕು ಮುಖ ಅಕ್ಟೋಬರ್ 9, 2007

Posted by Bala in ಬದುಕು.
1 comment so far

ತ್ರಿಮೂರ್ತಿಗಳಲ್ಲಿ ಬ್ರಹ್ಮನಿಗೆ ಮಾತ್ರ ನಾಲ್ಕು ಮುಖ ಆತನ ಇನ್ನೊಂದು ಹೆಸರೇ ಚತುರ್ಮುಖ ಬ್ರಹ್ಮ. ಬ್ರಹ್ಮನನ್ನು ಚಿತ್ರಿಸಿದ ನಮ್ಮ ಋಷಿಗಳು ಯಾವುದೊ ಗಹನವಾದುದ್ದನ್ನು ಹೇಳಲೆಂದೇ ಬ್ರಹ್ಮನಿಗೆ ನಾಲ್ಕು ಮುಖಗಳನ್ನು  ಕೊಟ್ಟಿದ್ದಾರೆಂದು ನನ್ನ ಅನಿಸಿಕೆ(ಅಥವಾ ಎಲ್ಲರಿಗೂ ತಿಳಿದ ಈ ವಿಶಯ ನನಗೆ ಈಗ ಗೊತ್ತಾಗಿರಬೇಕು). ಹಾಗೇ ಯೊಚಿಸಿದಾಗ ಒಂದಂಶ ಹೊಳಿಯಿತು. ವೇದಾಂತದ ಪ್ರಕಾರ ಆತ್ಮನ(ಬ್ರಹ್ಮ) ಸಾಕ್ಷಾತ್ಕಾರಕ್ಕೆ ಒಂದು ಮುಖ್ಯ ಅವಶ್ಯಕತೆ ಎಂದರೆ ಎಚ್ಚೆತ್ತ ಮನಸ್ಸು. ಎಚ್ಚೆತ್ತ ಮನಸ್ಸು ಯಾವಾಗಲೂ ಈ ಕ್ಷಣದಬಗ್ಗೆ ಮಾತ್ರ ಯೊಚಿಸುತ್ತದೆ, ಈ ಮನಸ್ಸು ಹಿಂದೆ ಆದದ್ದು ಮುಂದೆ ಆಗುವುದರ ಬಗ್ಗೆ ಚಿಂತಿಸುವುದಿಲ್ಲ. ನಾವು ಮಾಡುವ ಪ್ರತಿಯೊಂದು ಕಾರ್ಯವನ್ನೂ ಮನಃಪೂರ್ವಕವಾಗಿ ಮಾಡುವುದು ಈ ಎಚ್ಚೆತ್ತ ಮನಸ್ಸಿನ ಲಕ್ಷಣ. ಎಚ್ಚೆತ್ತ ಮನಸ್ಸನ್ನು ನನ್ನಂತಾ ಸಾಮಾನ್ಯನಿಗೆ ಹೇಗೆ ವಿವರಿಸುತ್ತೀರಾ. ಬ್ರಹ್ಮನ ನಾಲ್ಕು ತಲೆಗಳು ಈ ಎಚ್ಚೆತ್ತ ಮನಸ್ಸಿನ ಅತ್ತುತ್ತಮ ಪ್ರತೀಕ ಎಂಬುದು ನನ್ನ ಅನಿಸಿಕೆ. ನಾವು ನಮ್ಮ ಕಣ್ಣಮುಂದೆ ನಡೆಯುವುದನ್ನು ಗಮನಿಸುವುದರ ಜೊತೆ ಆ ಕಡೆ ಈ ಕಡೆ ಕೂಡಾ ಗಮನಿಸುವುದಷ್ಟೇ ಅಲ್ಲದೆ ಇನ್ನೂ ಒಂದು ಹೆಜ್ಜೆ ಮುಂದೆ ಹೊಗಿ ತನ್ನ ಹಿಂದೆ ನಡೆಯುವುದನ್ನ್ನು  ಅಂದರೆ ತನ್ನ ಕಣ್ಣಿಗೆ ಕಾಣದ್ದನ್ನೂ ಕೂಡ ಗಮನಸಬಲ್ಲ ಶಕ್ತಿ ಈ ಎಚ್ಚೆತ್ತ ಮನಸ್ಸಿನ ಲಕ್ಷಣ. ಆದ್ದರಿಂದಲೇ ಬ್ರಹ್ನನಿಗೆ ನಾಲ್ಕುತಲೆಗಳು. ಬ್ರಹ್ಮನ ನಾಲ್ಕು ತಲೆಗಳು ರಾವಣನ ಹತ್ತು ತಲೆಗಳಂತೆ ಒಂದರ ಪಕ್ಕ ಒಂದು ಇಲ್ಲ, ನಾಲ್ಕು ದಿಕ್ಕಿನಲ್ಲಿ ನಾಲ್ಕು ಮುಖ, ಪ್ರಪಂಚದಲ್ಲಿ ಎಲ್ಲವೂ ಬ್ರಹ್ಮಮಯ ಎಂದು ಹೇಳುತ್ತಿರುವಂತಿದೆ.

ಬ್ರಹ್ಮನಿಗೆ ಎಲ್ಲೂ ದೇವಾಲಯಗಳಿಲ್ಲ (ಅಜ್ಮೀರ ದಲ್ಲಿನ ಬ್ರಹ್ಮ ದೇವಾಲಯದ ಹೊರತು), ವಿಷ್ಣು ಮತ್ತು ಈಶ್ವರರಿಗೆ ಮಾತ್ರ ಲೆಕ್ಕವಿಲ್ಲದಷ್ಟು ದೇವಾಲಯಗಳು. “ಮನದಲ್ಲೇ ಇರುವವಗೆ ಮನೆ ಬೇರೇ ಬೇಕೆ ” ಎಂಬುದನ್ನು ಅರಿತ ನಮ್ಮ ಹಿರಿಯಂದಿರು ಬ್ರಹ್ಮನಿಗೆ ದೇವಾಲಯ ಕಟ್ಟುವ ಗೊಜಿಗೆ ಹೊಗಲಿಲ್ಲ.

ಗಂಟೆಯ ಸದ್ದು ಎಲ್ಲಿಂದ ಬಂತು ಅಕ್ಟೋಬರ್ 8, 2007

Posted by Bala in ಬುದ್ಧ ಮತ್ತು ಝೆನ್.
add a comment

ಒಂದು ದಿನ, ದೇವಾಲಯದಲ್ಲಿ ಗಂಟೆಯ ಸದ್ದು ಶುರುವಾದಾಗ, ಬುದ್ಧ ಮತ್ತು ಆತನ ಶಿಷ್ಯ ಆನಂದನ ನಡುವೆ ನಡೆದ ಸಂಭಾಷಣೆ
ಬುದ್ಧ : ಆ ಗಂಟೆಯ ಸದ್ದು ಎಲ್ಲಿಂದ ಬಂತು?
ಆನಂದ: ಗಂಟೆಯಿಂದ
ಬುದ್ಧ: ಗಂಟೆಯಿಂದ? ಆದರೆ ಗಂಟೆಯನ್ನು ಕಡ್ದಿಯಿಂದ ಬಾರಿಸಿದದಿದ್ದರೆ ಗಂಟೆಯಿಂದ ಸದ್ದು ಹೇಗೆ ಬರುತಿತ್ತು?
ಆನಂದ: ಹೌದೌದು, ಕಡ್ಡಿಯಿಂದ ಸದ್ದು ಬಂತು
ಬುದ್ಧ: ಕಡ್ಡಿಯಿಂದ? ಆದರೆ ಗಾಳಿ ಇಲ್ಲದಿದ್ದರೆ ಶಬ್ದದ ಅಲೆಯು ಹೇಗೆ ಇಲ್ಲಿಯ ತನಕ ಬರುತಿತ್ತು?
ಆನಂದ: ಹೌದೌದು, ಗಾಳಿಯಿಂದ ಸದ್ದು ಬಂತು
ಬುದ್ಧ: ಗಾಳಿಯಿಂದ? ಆದರೆ ನಿನಗೆ ಕಿವಿ ಇಲ್ಲದಿದ್ದರೆ ಗಂಟೆಯ ಸದ್ದು ಹೇಗೆ ಕೇಳಿಸುತಿತ್ತು.
ಆನಂದ: ಹೌದು, ನನಗೆ ಗಂಟೆಯಸದ್ದು ಕೇಳಲು ಕಿವಿ ಬೇಕು, ಅದ್ದರಿಂದ ಕಿವಿಯಿಂದ ಗಂಟೆಯ ಸದ್ದು ಬಂತು.
ಬುದ್ಧ: ನಿನ್ನ ಕಿವಿಯಿಂದ? ನಿನಗೆ ಪ್ರಜ್ಞೆ ಇಲ್ಲದಿದ್ದರೆ ಗಂಟೆಯ ಸದ್ದು ನಿನಗೆ ಹೇಗೆ ಅರ್ಥವಾಗುತಿತ್ತು
ಆನಂದ: ನನ್ನ ಪ್ರಜ್ಞೆ ಗಂಟೆಯ ಸದ್ದನ್ನು ಮಾಡಿತು.
ಬುದ್ಧ: ನಿನ್ನ ಪ್ರಜ್ಞೆ? ನಿನಗೆ ಮನಸ್ಸು ಇಲ್ಲದೇ ಹೋಗಿದ್ದರೆ ನೀನು ಹೇಗೆ ಗಂಟೆಯ ಸದ್ದನ್ನು ಕೇಳಬಲ್ಲೆ
ಆನಂದ: ಖಂಡಿತವಾಗಿ ಗಂಟೆಯ ಶಬ್ಧವನ್ನು ಮಾಡಿದ್ದು ನನ್ನ ಮನಸ್ಸು.