jump to navigation

ತ್ಯಾಗ ಸೆಪ್ಟೆಂಬರ್ 3, 2007

Posted by Bala in ಬದುಕು.
trackback

“ಪ್ರೀತಿಗಿಂತ ತ್ಯಾಗ ದೊಡ್ಡದು” ಎಂಬುದು ಮುಂಗಾರು ಮಳೆ ಚಿತ್ರದ ಅಂತಿಮ ಘೋಷಣೆ. ಮುಂಗಾರು ಮಳೆ ಚಿತ್ರಕ್ಕಿಂತ ಹಿಂದೆ ಇದೆ ಆಶಯ ಹೊಂದಿದ್ದ ಹಲವಾರು ಚಿತ್ರಗಳು ಬಂದಿವೆ. ಬಂಗಾರದ ಮನುಷ್ಯ ಅಂಥ ಒಂದು ಚಿತ್ರ. ಹಾಗೆ ನೊಡಿದರೆ ಮುಂಗಾರು ಮಳೆಯಲ್ಲಿ ನಾಯಕ ತನ್ನ ಪ್ರೀತಿಯನ್ನು(ಪ್ರೀತಿಸಿದ ಹುಡುಗಿಯನ್ನು) ಮಾತ್ರ ತ್ಯಾಗ ಮಾಡಿದರೆ, ಬಂಗಾರದ ಮನುಷ್ಯ ಚಿತ್ರದಲ್ಲಿ ನಾಯಕ ತನ್ನ ಅಕ್ಕ ಮತ್ತು ಆಕೆಯ ಮಕ್ಕಳಿಗೊಸ್ಕರ ತನ್ನ ಜೀವನವನ್ನೇ ಮುಡಿಪಾಗಿಡುತಾನೆ. 

ತ್ಯಾಗ ಪದದ ಅರ್ಥ ತೊರೆಯುವುದು, ಬಿಡುವುದು, ದಾನ ಕೊಡುವುದು ಇತ್ಯಾದಿ ಎಂದಿದೆ. ಆದರೆ ಸಾಮಾನ್ಯ ಆಡುಮಾತಿನಲ್ಲಿ ಯಾರಾದರೂ ತ್ಯಾಗ ಮಾಡಿದ ಎಂದರೆ, ಆತ ಸ್ವಾರ್ತರಹಿತವಾಗಿ ಇನ್ನೊಬ್ಬರಿಗಾಗಿ ಮಾಡಿರುವ ಒಂದು ಒಳ್ಳೆಯ ಕಾರ್ಯ ಎನಿಸಿಕೊಳ್ಳುತ್ತದೆ. ತ್ಯಾಗ ಪದಕ್ಕೆ ಸಮಾನರ್ಥಕವಾಗಿ ಉಪಯೊಗಿಸಬಹುದಾದ ಒಂದು ಹೆಸರೆಂದರೆ ಮದರ್ ಥೆರೆಸಾ.

ಸಾಮಾನ್ಯವಾಗಿ ನಾವು ಇನ್ನೊಬ್ಬರಿಗೆ ಎನಾದರೂ ಸಹಾಯ ಮಾಡಬೇಕಾಗಿ ಬಂದರೆ, ನಮ್ಮ ಮನಸ್ಸು ಮೊದಲು ಆತ ನಮಗಾಗಿ ಏನು ಮಾಡಿದ್ದಾನೆ ಅಥವಾ ನಾನು ಈ ಸಹಾಯ ಮಾಡಿದರೆ ಅತ ನನಗೆ ಮುಂದೆ ಸಹಾಯ ಮಾಡುತ್ತಾನೆಯೆ ಎಂದು ಚಿಂತಿಸಿ ನಂತರ ಸಹಾಯ ಮಾಡುವುದೇ ಅಥವಾ ಬಿಡುವುದೇ ಎಂದು ನಿರ್ದರಿಸುತ್ತೇವೆ. ಇಲ್ಲಿ ಸ್ವಾರ್ತದ ಪ್ರವೇಶದಿಂದ ಇನ್ನೊಬ್ಬರಿಗೆ ಮಾಡುವ ಸಹಾಯ ತ್ಯಾಗವೆನಿಸಿಕೊಳ್ಳುವುದಿಲ್ಲ. ಹಾಗೆಯೆ ನಾವು ನಮ್ಮ ತಂದೆ, ತಾಯಿ, ಹೆಂಡತಿ, ಮಕ್ಕಳು, ತನ್ನ ಕುಲಭಾಂದವರು ಮತ್ತು ಸ್ನೇಹಿತರಿಗಾಗಿ ಮಾಡುವ ಸಹಾಯ ತ್ಯಾಗವೆನಿಸಿದರೂ ಅತ್ಯುತ್ತಮ ತ್ಯಾಗವಲ್ಲ. ಅದೇ ತನಗೆ ಗೊತ್ತಿಲ್ಲದ ಯಾರಿಗೂ ಬೇಡವಾದ ವಯಸ್ಸಾದ ಮನುಷ್ಯರನ್ನು ನೊಡಿಕೊಳ್ಳುತ್ತಿದ್ದ ಮದರ್ ಥೆರೆಸಾ ಮಾಡಿದ ಕಾರ್ಯ ನಿಜವಾದ ತ್ಯಾಗ.ನಿಸ್ಸಹಾಯಕರಾದ ಮುದುಕ ಮುದುಕಿಯರ ಉದ್ದಾರಕ್ಕಾಗಿ ತನ್ನ ಜೀವನವನ್ನೆ ಮುಡಿಪಾಗಿಟ್ಟ ಆಕೆಯ ಜೀವನ ಸ್ಮರಣೀಯ.

ನಾಗರಹಾವು ಚಿತ್ರದಲ್ಲಿ ರಾಮಾಚಾರಿ ಮತ್ತು ಚಾಮಯ್ಯ ಮೇಷ್ಟ್ರು ನಡುವೆ ತ್ಯಾಗದ ಬಗ್ಗೆ ಒಂದು ಸಂಭಾಷಣೆ ಬರುತ್ತವೆ. ಚಾಮಯ್ಯ ಮೇಷ್ಟ್ರು ರಾಮಾಚಾರಿಗೆ “ನಿನ್ನ ತಂದೆ ತಾಯಿ ಸಮಾಜಕ್ಕೋಸ್ಕರ ಮಾರ್ಗರೇಟ್ ಳನ್ನು  ತ್ಯಾಗ ಮಾಡಬೇಕು” ಅಂದಾಗ, ಅದಕ್ಕೆ ರಾಮಚಾರಿ ಹೇಳುತ್ತಾನೆ, “ನಾನು ಮಾರ್ಗರೇಟ್ ಗೊಸ್ಕರ ಯಾವ ತ್ಯಾಗ ಮಾಡೊದಕ್ಕೂ ಸಿದ್ದ ಮೇಷ್ಟ್ರೇ”. ಆಗ ಚಾಮಯ್ಯ ಮೇಷ್ಟ್ರು “ಅದು ತ್ಯಾಗ ಅಲ್ಲ ಕಣೊ ಅದು ಮೋಹ” ಎನ್ನುತ್ತಾರೆ. ಅದಕ್ಕೆ ಮುಗ್ಧ ರಾಮಚಾರಿ ಹೇಳುತ್ತಾನೆ, “ಮೇಷ್ಟ್ರೇ, ನೀವು ಹೇಳಿದ್ದು ಮಾಡಿದರೆ ಅದು ತ್ಯಾಗ ನಾನು ತ್ಯಾಗ ಮಾಡ್ತಾ ಇದ್ದರು ಅದು ಮೋಹ.”

ತ್ಯಾಗ ಪ್ರತಿಯೊಬ್ಬ ಮನುಷ್ಯನ ಅವಿಭಾಜ್ಯಗುಣ ಅದು ಅಗೀಗ ಎಲ್ಲರಲ್ಲೂ ಹೊಳೆಯುತ್ತಿರುತ್ತದೆ. ಕೆಲವರಲ್ಲಿ ಕಡಿಮೇ ಕೆಲವರಲ್ಲಿ ಹೆಚ್ಚು ತ್ಯಾಗದ ಗುಣಗಳಿರಬಹುದು. ನಮಗೆ ಗೊತ್ತಿಲ್ಲದ ಹಾಗೆ ನಾವು ಅನೇಕ ಸಣ್ಣ ಪುಟ್ಟ ತ್ಯಾಗಗಳನ್ನು ಮಾಡುತ್ತಿರುತ್ತೇವೆ. ನಾವು ಮಾಡುವ ಪ್ರತಿಯೊಂದು ತ್ಯಾಗವು ಸಣ್ಣದೇ ಅಗಿರಲೀ ದೊಡ್ಡದೇ ಅಗಿರಲಿ ಒಂದು ಶಕ್ತಿಯಾಗಿ ನಮ್ಮನ್ನು ಆವರಿಸಿಕೊಂಡು ನಮ್ಮ ಕಷ್ಟದ ಘಳಿಗೆಯಲ್ಲಿ ಆ ಶಕ್ತಿ ನಮ್ಮನ್ನು ಕಾಪಾಡುತ್ತದೆ. ನಾವು ಯಾರಿಗಾದರೂ ಸಹಾಯ ಮಾಡಿದರೆ ಅವರೇ ನಮಗೆ ಸಹಾಯ ಮಾಡಬೇಕಗಿಲ್ಲ. ನಮ್ಮನ್ನು ಆವರಿಸಿರುವ ಅ ಶಕ್ತಿ ಯಾವುದೇ ರೂಪದಿಂದಲಾದರೂ ನಮಗೆ ಬೇಕಾದ ಘಳಿಗೆಯಲ್ಲಿ ಸಹಾಯ ಒದಗುವಂತೆ ಮಾಡುತ್ತದೆ.

ಪ್ರೀತಿಗಿಂತ ತ್ಯಾಗ ದೊಡ್ಡದೆ? ನನ್ನ ಪ್ರಕಾರ ಪ್ರೀತಿ ಇದ್ದರೇ ತ್ಯಾಗ ಇರಲು ಸಾಧ್ಯ. ಅಂದರೆ ಪ್ರೀತಿಯಿರುವ ಹೃದಯದಲ್ಲೇ ತ್ಯಾಗ ಹೆಚ್ಚಾಗಿ ಇರುವುದು. ಪ್ರೀತಿ ತ್ಯಾಗ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಮದರ್ ಥೆರೆಸಾಗೆ ವಯಸ್ಸಾದ ಮುದುಕ ಮುದುಕಿಯರ ಬಗ್ಗೆ ಇದ್ದ ಪ್ರೀತಿ, ಅಕೆಯನ್ನು ತ್ಯಾಗದ ಕಡೆಗೆ ಕರೆದೊಯ್ಯಿತು. ಮುಂಗಾರು ಮಳೆಯ ನಾಯಕನಿಗೆ ತನ್ನ ತಾಯಿ, ಹುಡುಗಿಯ ತಂದೆ ತಾಯಿಯ ಬಗ್ಗೆ ಇದ್ದ ಪ್ರೀತಿ ಕಾಳಜಿ, ತಾನು ಮೆಚಿದ ಹುಡುಗಿಯನ್ನು ತ್ಯಾಗ ಮಾಡುವಂತೆ ಪ್ರೇರೆಪಿಸಿದ್ದು.

ಟಿಪ್ಪಣಿಗಳು»

1. Sangeeta Kalmane - ನವೆಂಬರ್ 13, 2017

ಸ್ವಾರ್ಥಿಯಲ್ಲಿ ತ್ಯಾಗದ ಗುಣ ಕಾಣುವುದು ಕಷ್ಟ.


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: