jump to navigation

ಆರೋಗ್ಯ ಭಾಗ್ಯ ಸೆಪ್ಟೆಂಬರ್ 28, 2007

Posted by Bala in ಬದುಕು.
2 comments

ನೀವು ಅರೋಗ್ಯವಾಗಿ ಹೆಚ್ಚು ಕಾಲ ಬದುಕ ಬೇಕಾದರೆ ಮಾಡಾಬೇಕಾದ ಕೆಲವು ಕಾರ್ಯಗಳು.

೧. ನೀವು ಹದಿನೆಂಟನೇ ವಯಸ್ಸಿನಲ್ಲಿ ಎಷ್ಟು ತೂಕವಿದ್ದಿರೋ ಈಗಲೂ ಹೆಚ್ಚು ಕಡಿಮೇ ಅದೇ ತೂಕ ದಲ್ಲಿರುವಂತೆ ನೊಡಿಕೊಳ್ಳಿ. ಮುಖ್ಯವಾಗಿ ನಿಮ್ಮ ಈಗಿನ ಸೊಂಟದ ಸುತ್ತಳತೆ ನಿಮ್ಮ ಹದಿನೆಂಟನೇ ವಯಸ್ಸಿನಲ್ಲಿ ಎಷ್ಟಿತ್ತೊ ಅಷ್ಟೇ ಇರುವಂತೆ ನೋಡಿಕೊಳ್ಳಿ. ಇದರಿಂದ ಹೃದಯದ ಖಾಯಿಲೆಗಳು ನಿಮ್ಮನ್ನು ಕಾಡುವುದಿಲ್ಲ.

೨. ದಿನದಲ್ಲಿನ ಒಂದು ಹೊತ್ತು ಊಟ ಕಡಿಮೆ ಮಾಡಿ. ಓಂದು ಹೊತ್ತು ಊಟ ಕಡಿಮೆ ಮಾಡಲಾಗದಿದ್ದರೂ ಮಾಡುವ ಪ್ರತಿಯೊಂದು ಊಟವನ್ನೂ ಹೊಟ್ಟೆ ಬಿರಿಯುವಂತೆ ತಿನ್ನದೇ ಇನ್ನು ಸ್ವಲ್ಪ ತಿನ್ನಬಹುದು ಎಂಬಲ್ಲಿಗೆ ಊಟ ಮುಗಿಸದರೆ ಒಳ್ಳ್ತೆಯದು. ಹೆಚ್ಚು ಊಟಮಾಡುವುದರಿಂದ ನಮ್ಮ ದೇಹದ ಎಲ್ಲ ಕೊಶಗಳಿಗು ಹೆಚ್ಚಿನ ಒತ್ತಡ ತರುತ್ತದೆ , ಈ ಒತ್ತಡವೇ ಹಲವಾರು ಖಾಯಿಲೆಗಳ ತವರೂರು.

೩. ಹೇರಳವಾಗಿ ನೀರು ಕುಡಿಯಬೇಕು. ಮನುಷ್ಯನ ದೇಹ ಶೇಕಡ ೭೦ ಕ್ಕಿಂತ ಹೆಚ್ಚು ನೀರಿನಿಂದ ಮಾಡಲ್ಪಟ್ಟಿದೆ. ಹಾಗಾಗಿ ನೀರು ನಮ್ಮ ಆಹಾರದ ಮುಖ್ಯ ಭಾಗವಾಗಿರಬೇಕು. ಹಾಗೆಂದು ನೀವು ಮಾರುಕಟ್ಟೆ ಯಲ್ಲಿ ಸಿಗುವ ತರಾವರಿ ಜ್ಯೂಸ್ ಕುಡಿದರೆ ಅದು ನೀರು ಕುಡಿದಂತಲ್ಲ. ನಮ್ಮ ಸಂಪ್ರದಾಯದಂತೆ ತಾಮ್ರದ ಚಂಬಿನಲ್ಲಿ ಶೇಖರಿಸಿಟ್ಟ ನೀರು ಕುಡಿಯುವುದು ನಮ್ಮ ಲಿವರಿನ ಅರೊಗ್ಯಕ್ಕೆ ಉತ್ತಮ. ನೀರು ನಮ್ಮ ದೇಹದ ಕಲ್ಮಷಗಳನ್ನು ದೇಹದಿಂದ ಹೊರಹಾಕಿಸುತ್ತದೆ, ಪ್ರತಿಯೊಂದು ಕೋಶಕ್ಕೂ ಆಹಾರವನ್ನು  ತಲುಪಿಸುತ್ತದೆ.

೪. ನಮ್ಮ ಅಹಾರದ ಶೇಕಡ ೭೦ ಭಾಗ ತರಕಾರಿ ಮತ್ತು ಹಣ್ಣಿನಿಂದ ಕೂಡಿರಬೇಕು. ಸಸ್ಯಾಹಾರ ನಮ್ಮ ದೇಹಕ್ಕೆ ಅತ್ತ್ಯುತ್ತಮ. ಜೀವದಿಂದ ತುಂಬಿರುವ ತರಕಾರಿ ಮತ್ತು ಹಣ್ಣು ಗಳನ್ನು ತಿನ್ನುವುದು ನಿರ್ಜೀವವಾದ ಮಾಂಸಾಹಾರ ತಿನ್ನುವುದಕ್ಕಿಂತ ಎಷ್ಟೋ ಮೇಲು.

೫. ದಿನದ ಮುಂಜಾನೆ ಮತ್ತು ಮುಸ್ಸಂಜೆಯ ವೇಳೆ ಮೂವತ್ತು ನಿಮಿಷಗಳಕಾಲ ಹೊರಗಡೆ ಶುದ್ದವಾದ ಗಾಳಿ ಸಿಗುವಕಡೆ ಓಡಾಡುವುದು ನಮ್ಮ ಆರೊಗ್ಯಕ್ಕೆ ಉತ್ತಮ. ಈ ಸಮಯಗಳಲ್ಲಿ ಹೊರಗಡೆಯಿರುವುದರಿಂದ  ನಮ್ಮ ದೇಹದ ಜೈವಿಕ ಗಡಿಯಾರದ ಚಾಲನೆ ಉತ್ತಮಗೊಳ್ಳುತ್ತದೆ. ಹಾಗೆಯೆ ನಮ್ಮ ಪಾದವು ಪಾದರಕ್ಷೆಗಳಿಲ್ಲ್ಸದೇ ಹುಲ್ಲಿನ ಮೇಲಾಗಲಿ ಮಣ್ಣಿನ ಮೇಲಾಗಲಿ ನಡೆದಾಡಿದರೆ ನಮ್ಮಲ್ಲಿನ ನೆಗೆಟಿವ್ ಶಕ್ತಿಯನ್ನು ಭೂಮಿ ಹೀರಿಕೊಳ್ಳುತ್ತದೆ.

೬. ನಿಮ್ಮ ಮನಸ್ಸು ಸದಾ ನೀವು ಉಸಿರಾಡುವುದನ್ನು ಗಮನಿಸುತ್ತಿರಲಿ. ಸಾಮಾನ್ಯ ನಾವ್ಯರೂ ಉಸಿರಾಡುವುದನ್ನು ಗಮನಿಸುವುದೇ ಇಲ್ಲಾ. ನಾವು ಅನ್ನ ನೀರು ಇಲ್ಲದೇ ದಿನಗಟ್ಟಲೇ ಬದುಕಿರಬಹುದು ಆದರೇ ಉಸಿರಾಟವಿಲ್ಲದೇ ಕೆಲವು ಗಂಟೆಗಳ ಕಾಲ ಕೂಡಾ ಬದುಕಿರಲಾರೆವು. ಇಷ್ಟೋಂದು ಮುಖ್ಯವಾಗಿರು ಉಸಿರಾಟವನ್ನು ನಾವ್ಯಾರೂ ಗಮನಿಸುವುದೇ ಇಲ್ಲಾ, ಹಾಗಾಗಿ, ನಾವು ಉಸಿರಾಡುವ ರೀತಿ ಅನಿಯಮಿತವಾಗಿರುತ್ತದೆ. ನಾವು ಯಾವಾಗಲೂ ನಿಯಮಿತವಾಗಿ ಧೀರ್ಘವಾಗಿ ಮತ್ತು  ಸುಲಲಿತವಾಗಿ ಉಸಿರಾಡುವುದನ್ನು ಕಲಿಯಬೇಕು. ನಮ್ಮ ಮನಸ್ಸನ್ನು ಉಸಿರಾಟದ ಮೇಲೆ ಕೇಂದ್ರೀಕರಿಸುವುದರಿಂದ ಮಾತ್ರ ನಮ್ಮ ಉಸಿರಾಟವನ್ನು ನಿಯಮಿತ ಗೊಳಿಸು ವುದು ಸಾಧ್ಯ. ಯೊಗದಲ್ಲಿ ಹೇಳುವ ಪ್ರಾಣಾಯಾಮ ಈ ಅಂಶವನ್ನೇ ಒತ್ತಿ ಹೇಳುತ್ತದೆ. ಹಾಗೆ ಯೋಗದ ಅತ್ತ್ಯುತ್ತಮ ಸ್ಟಿತಿಯಾದ ಸಮಾಧಿ ಸ್ಟಿತಿ ಸೇರಲು, ನಮ್ಮ ಉಸಿರಾಟ ಕ್ರಿಯೆಯನ್ನು ನಿಯಮಿತ ಗೊಳಿಸುವ ಮತ್ತು ನಮ್ಮ ಮನಸ್ಸ್ಸನ್ನು ಉಸಿರಾಟದಲ್ಲಿ ಕೇಂದ್ರೀಕರಿಸುವುದು ಮೊದಲನೇ ಹೆಜ್ಜೆ.

೭. ದಿನಕ್ಕೆ ೭ರಿಂದ ೮ ಗಂಟೆ ನಿದ್ದೆ ಮಾಡುವುದು ನಮ್ಮ ಆರೋಗ್ಯಕ್ಕೆ ಅತ್ಯವಶ್ಯಕ.

೮. ಧೂಮಪಾನ ಮತ್ತು ಅಲ್ಕೋಹಾಲ್ ಗಳಿಂದ ದೂರವಿರಬೇಕು.

ಕೋಳಿ ಮೊಟ್ಟೆ ಸೆಪ್ಟೆಂಬರ್ 10, 2007

Posted by Bala in ಬದುಕು.
Tags:
1 comment so far

ಇಲ್ಲಿಯತನಕ, ನನಗೆ ನಾವು ತಿನ್ನಬಹುದಾದ (??) ಕೋಳಿಮೊಟ್ಟೆ ಯಲ್ಲಿ ಕೋಳಿಮರಿಯ ಜೀವವಿರುತ್ತದೆ, ನಾವು ತಿನ್ನುವುದರಿಂದ ಅದನ್ನು ಕೊಂದಂತಾಗುತ್ತದೆ ಎಂಬ ನಂಬಿಕೆಯಿತ್ತು. ಇತ್ತೀಚಿನ ಜ್ಞಾನೋದಯದಿಂದ ತಿಳಿದ ಅಂಶವೆಂದರೆ ಇಷ್ಟು ದಿನ ಇದ್ದ ನನ್ನ ನಂಬಿಕೆ ನಿಜವಲ್ಲ. ಈ ವಿಷಯವನ್ನು ನನ್ನಂತೇ ಇಲ್ಲಿಯವರೆವಿಗೂ ನಂಬಿರುವ ಇತರರಿಗೂ ತಿಳಿಸುವ ಪ್ರಯತ್ನವೇ ಈ ಟಿಪ್ಪಣಿ.

ಹೆಣ್ಣು ಕೋಳಿ ಗರ್ಭದಲ್ಲಿ ಅಂಡಾಣು (ಮೊಟ್ಟೆ) ಅಂಕುರಿಸಿ, ಅದು ಗಂಡು ಕೋಳಿಯ ವೀರ್ಯಾಣು ವಿನೊಂದಿಗೆ ಸಂಯೋಗ ಹೊಂದಿ, ಮುಂದೆ ಈ ಜೀವಕೋಶ ಕೋಳಿ ಮರಿಯಾಗುತ್ತದೆ. ಕೋಳಿ ಮರಿ ಸಂಪೂರ್ಣವಾಗಿ ಬೆಳೆದ ಮೇಲೆ ಹೆಣ್ಣು ಕೋಳಿ ಮೊಟ್ಟೆಯನ್ನು  ಹೊರಹಾಕುತ್ತದೆ. ನಂತರ ಈ ಮೊಟ್ಟೆಯನ್ನು ಕಾವಲು ಕಾಯ್ದು, ಅದಕ್ಕೆ ಕಾವುಕೊಟ್ಟು  ಸ್ವಲ್ಪದಿನದಲ್ಲಿ ಸಣ್ಣ ಕೋಳಿ ಮರಿ ಮೊಟ್ಟೆಯೊಡೆದು ಹೊರಬರುತ್ತದೆ. ಇದು ಎಲ್ಲರಿಗೂ ತಿಳಿದ ವಿಷಯ ಆದರೆ ಮಾರುಕಟ್ಟೆಯಲ್ಲಿ ನಾವು ಕೊಳ್ಳುವ ಮೊಟ್ಟೆ ಮೇಲೆ ವಿವರಿಸಿದ ಮೊಟ್ಟೆಯಲ್ಲ!!

ಹೆಣ್ಣುಕೋಳಿಯ ಅಂಡಾಣವು ತನ್ನ ಋತುಚಕ್ರ ದೊಳಗೆ ಗಂಡುಕೋಳಿಯ ವೀರ್ಯಾಣುವಿನೊಂದಿಗೆ  ಸಂಯೊಗವಾಗದಿದ್ದಾಗ, ಅ ಅಂಡಾಣುವು ತ್ಯಾಜ್ಯ ವಸ್ತುವಾಗಿ ಹೆಣ್ಣು ಕೊಳಿಯಿಂದ ಹೊರಬರುತ್ತದೆ. ನಾವು ಮಾರುಕಟ್ಟೆಯಲ್ಲಿ ಕೋಳ್ಳುವ ಮೊಟ್ಟೆ ಈ ರೀತಿ ಹೊರಬಂದ ತ್ಯಾಜ್ಯ ಅಂಡಾಣು. ಹಾಗಾಗಿ, ಈ ಮೊಟ್ಟೆಯಲ್ಲಿ ಕೋಳಿ ಮರಿ ಹೊರಬರುವ ಯಾವುದೇ ಸಾಧ್ಯತೆಯಿಲ್ಲ. ಓಟ್ಟಾರೆ ಹೇಳಬೇಕೆಂದರೆ ಕೋಳಿ ಮೊಟ್ಟೆ ಒಂದು ನಿರ್ಜೀವ ಜೀವಕೋಶ. ನೀವು ಕೋಳಿಮರಿಕೊಲ್ಲುವ ಪಾಪಕ್ಕೋಸ್ಕರ ಮೊಟ್ಟೆ ತಿನ್ನುವುದಿಲ್ಲವಾದರೆ, ಈಗ ನಿಮ್ಮ ನಿಲುವನ್ನು ಬದಲಿಸಿಕೊಂಡು ಮೊಟ್ಟೆಯನ್ನು ತಿನ್ನಬಹುದೇನೊ. ದಯವಿಟ್ಟು ಚೆನ್ನಾಗಿ ಯೋಚಿಸಿ…

ತ್ಯಾಗ ಸೆಪ್ಟೆಂಬರ್ 3, 2007

Posted by Bala in ಬದುಕು.
1 comment so far

“ಪ್ರೀತಿಗಿಂತ ತ್ಯಾಗ ದೊಡ್ಡದು” ಎಂಬುದು ಮುಂಗಾರು ಮಳೆ ಚಿತ್ರದ ಅಂತಿಮ ಘೋಷಣೆ. ಮುಂಗಾರು ಮಳೆ ಚಿತ್ರಕ್ಕಿಂತ ಹಿಂದೆ ಇದೆ ಆಶಯ ಹೊಂದಿದ್ದ ಹಲವಾರು ಚಿತ್ರಗಳು ಬಂದಿವೆ. ಬಂಗಾರದ ಮನುಷ್ಯ ಅಂಥ ಒಂದು ಚಿತ್ರ. ಹಾಗೆ ನೊಡಿದರೆ ಮುಂಗಾರು ಮಳೆಯಲ್ಲಿ ನಾಯಕ ತನ್ನ ಪ್ರೀತಿಯನ್ನು(ಪ್ರೀತಿಸಿದ ಹುಡುಗಿಯನ್ನು) ಮಾತ್ರ ತ್ಯಾಗ ಮಾಡಿದರೆ, ಬಂಗಾರದ ಮನುಷ್ಯ ಚಿತ್ರದಲ್ಲಿ ನಾಯಕ ತನ್ನ ಅಕ್ಕ ಮತ್ತು ಆಕೆಯ ಮಕ್ಕಳಿಗೊಸ್ಕರ ತನ್ನ ಜೀವನವನ್ನೇ ಮುಡಿಪಾಗಿಡುತಾನೆ. 

ತ್ಯಾಗ ಪದದ ಅರ್ಥ ತೊರೆಯುವುದು, ಬಿಡುವುದು, ದಾನ ಕೊಡುವುದು ಇತ್ಯಾದಿ ಎಂದಿದೆ. ಆದರೆ ಸಾಮಾನ್ಯ ಆಡುಮಾತಿನಲ್ಲಿ ಯಾರಾದರೂ ತ್ಯಾಗ ಮಾಡಿದ ಎಂದರೆ, ಆತ ಸ್ವಾರ್ತರಹಿತವಾಗಿ ಇನ್ನೊಬ್ಬರಿಗಾಗಿ ಮಾಡಿರುವ ಒಂದು ಒಳ್ಳೆಯ ಕಾರ್ಯ ಎನಿಸಿಕೊಳ್ಳುತ್ತದೆ. ತ್ಯಾಗ ಪದಕ್ಕೆ ಸಮಾನರ್ಥಕವಾಗಿ ಉಪಯೊಗಿಸಬಹುದಾದ ಒಂದು ಹೆಸರೆಂದರೆ ಮದರ್ ಥೆರೆಸಾ.

ಸಾಮಾನ್ಯವಾಗಿ ನಾವು ಇನ್ನೊಬ್ಬರಿಗೆ ಎನಾದರೂ ಸಹಾಯ ಮಾಡಬೇಕಾಗಿ ಬಂದರೆ, ನಮ್ಮ ಮನಸ್ಸು ಮೊದಲು ಆತ ನಮಗಾಗಿ ಏನು ಮಾಡಿದ್ದಾನೆ ಅಥವಾ ನಾನು ಈ ಸಹಾಯ ಮಾಡಿದರೆ ಅತ ನನಗೆ ಮುಂದೆ ಸಹಾಯ ಮಾಡುತ್ತಾನೆಯೆ ಎಂದು ಚಿಂತಿಸಿ ನಂತರ ಸಹಾಯ ಮಾಡುವುದೇ ಅಥವಾ ಬಿಡುವುದೇ ಎಂದು ನಿರ್ದರಿಸುತ್ತೇವೆ. ಇಲ್ಲಿ ಸ್ವಾರ್ತದ ಪ್ರವೇಶದಿಂದ ಇನ್ನೊಬ್ಬರಿಗೆ ಮಾಡುವ ಸಹಾಯ ತ್ಯಾಗವೆನಿಸಿಕೊಳ್ಳುವುದಿಲ್ಲ. ಹಾಗೆಯೆ ನಾವು ನಮ್ಮ ತಂದೆ, ತಾಯಿ, ಹೆಂಡತಿ, ಮಕ್ಕಳು, ತನ್ನ ಕುಲಭಾಂದವರು ಮತ್ತು ಸ್ನೇಹಿತರಿಗಾಗಿ ಮಾಡುವ ಸಹಾಯ ತ್ಯಾಗವೆನಿಸಿದರೂ ಅತ್ಯುತ್ತಮ ತ್ಯಾಗವಲ್ಲ. ಅದೇ ತನಗೆ ಗೊತ್ತಿಲ್ಲದ ಯಾರಿಗೂ ಬೇಡವಾದ ವಯಸ್ಸಾದ ಮನುಷ್ಯರನ್ನು ನೊಡಿಕೊಳ್ಳುತ್ತಿದ್ದ ಮದರ್ ಥೆರೆಸಾ ಮಾಡಿದ ಕಾರ್ಯ ನಿಜವಾದ ತ್ಯಾಗ.ನಿಸ್ಸಹಾಯಕರಾದ ಮುದುಕ ಮುದುಕಿಯರ ಉದ್ದಾರಕ್ಕಾಗಿ ತನ್ನ ಜೀವನವನ್ನೆ ಮುಡಿಪಾಗಿಟ್ಟ ಆಕೆಯ ಜೀವನ ಸ್ಮರಣೀಯ.

ನಾಗರಹಾವು ಚಿತ್ರದಲ್ಲಿ ರಾಮಾಚಾರಿ ಮತ್ತು ಚಾಮಯ್ಯ ಮೇಷ್ಟ್ರು ನಡುವೆ ತ್ಯಾಗದ ಬಗ್ಗೆ ಒಂದು ಸಂಭಾಷಣೆ ಬರುತ್ತವೆ. ಚಾಮಯ್ಯ ಮೇಷ್ಟ್ರು ರಾಮಾಚಾರಿಗೆ “ನಿನ್ನ ತಂದೆ ತಾಯಿ ಸಮಾಜಕ್ಕೋಸ್ಕರ ಮಾರ್ಗರೇಟ್ ಳನ್ನು  ತ್ಯಾಗ ಮಾಡಬೇಕು” ಅಂದಾಗ, ಅದಕ್ಕೆ ರಾಮಚಾರಿ ಹೇಳುತ್ತಾನೆ, “ನಾನು ಮಾರ್ಗರೇಟ್ ಗೊಸ್ಕರ ಯಾವ ತ್ಯಾಗ ಮಾಡೊದಕ್ಕೂ ಸಿದ್ದ ಮೇಷ್ಟ್ರೇ”. ಆಗ ಚಾಮಯ್ಯ ಮೇಷ್ಟ್ರು “ಅದು ತ್ಯಾಗ ಅಲ್ಲ ಕಣೊ ಅದು ಮೋಹ” ಎನ್ನುತ್ತಾರೆ. ಅದಕ್ಕೆ ಮುಗ್ಧ ರಾಮಚಾರಿ ಹೇಳುತ್ತಾನೆ, “ಮೇಷ್ಟ್ರೇ, ನೀವು ಹೇಳಿದ್ದು ಮಾಡಿದರೆ ಅದು ತ್ಯಾಗ ನಾನು ತ್ಯಾಗ ಮಾಡ್ತಾ ಇದ್ದರು ಅದು ಮೋಹ.”

ತ್ಯಾಗ ಪ್ರತಿಯೊಬ್ಬ ಮನುಷ್ಯನ ಅವಿಭಾಜ್ಯಗುಣ ಅದು ಅಗೀಗ ಎಲ್ಲರಲ್ಲೂ ಹೊಳೆಯುತ್ತಿರುತ್ತದೆ. ಕೆಲವರಲ್ಲಿ ಕಡಿಮೇ ಕೆಲವರಲ್ಲಿ ಹೆಚ್ಚು ತ್ಯಾಗದ ಗುಣಗಳಿರಬಹುದು. ನಮಗೆ ಗೊತ್ತಿಲ್ಲದ ಹಾಗೆ ನಾವು ಅನೇಕ ಸಣ್ಣ ಪುಟ್ಟ ತ್ಯಾಗಗಳನ್ನು ಮಾಡುತ್ತಿರುತ್ತೇವೆ. ನಾವು ಮಾಡುವ ಪ್ರತಿಯೊಂದು ತ್ಯಾಗವು ಸಣ್ಣದೇ ಅಗಿರಲೀ ದೊಡ್ಡದೇ ಅಗಿರಲಿ ಒಂದು ಶಕ್ತಿಯಾಗಿ ನಮ್ಮನ್ನು ಆವರಿಸಿಕೊಂಡು ನಮ್ಮ ಕಷ್ಟದ ಘಳಿಗೆಯಲ್ಲಿ ಆ ಶಕ್ತಿ ನಮ್ಮನ್ನು ಕಾಪಾಡುತ್ತದೆ. ನಾವು ಯಾರಿಗಾದರೂ ಸಹಾಯ ಮಾಡಿದರೆ ಅವರೇ ನಮಗೆ ಸಹಾಯ ಮಾಡಬೇಕಗಿಲ್ಲ. ನಮ್ಮನ್ನು ಆವರಿಸಿರುವ ಅ ಶಕ್ತಿ ಯಾವುದೇ ರೂಪದಿಂದಲಾದರೂ ನಮಗೆ ಬೇಕಾದ ಘಳಿಗೆಯಲ್ಲಿ ಸಹಾಯ ಒದಗುವಂತೆ ಮಾಡುತ್ತದೆ.

ಪ್ರೀತಿಗಿಂತ ತ್ಯಾಗ ದೊಡ್ಡದೆ? ನನ್ನ ಪ್ರಕಾರ ಪ್ರೀತಿ ಇದ್ದರೇ ತ್ಯಾಗ ಇರಲು ಸಾಧ್ಯ. ಅಂದರೆ ಪ್ರೀತಿಯಿರುವ ಹೃದಯದಲ್ಲೇ ತ್ಯಾಗ ಹೆಚ್ಚಾಗಿ ಇರುವುದು. ಪ್ರೀತಿ ತ್ಯಾಗ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಮದರ್ ಥೆರೆಸಾಗೆ ವಯಸ್ಸಾದ ಮುದುಕ ಮುದುಕಿಯರ ಬಗ್ಗೆ ಇದ್ದ ಪ್ರೀತಿ, ಅಕೆಯನ್ನು ತ್ಯಾಗದ ಕಡೆಗೆ ಕರೆದೊಯ್ಯಿತು. ಮುಂಗಾರು ಮಳೆಯ ನಾಯಕನಿಗೆ ತನ್ನ ತಾಯಿ, ಹುಡುಗಿಯ ತಂದೆ ತಾಯಿಯ ಬಗ್ಗೆ ಇದ್ದ ಪ್ರೀತಿ ಕಾಳಜಿ, ತಾನು ಮೆಚಿದ ಹುಡುಗಿಯನ್ನು ತ್ಯಾಗ ಮಾಡುವಂತೆ ಪ್ರೇರೆಪಿಸಿದ್ದು.