ಚಂದನ

ಜೀವನ, ಸತ್ಯ, ಸುಂದರ ಇತ್ಯಾದಿ….

Archive for the ‘ಹಾಸ್ಯ, ಹರಟೆ’ Category

ಜಗತ್ತಿನ ಅತಿ ಕೆಟ್ಟ ಆಹಾರ

with 7 comments

ವೈದ್ಯರೊಬ್ಬರು ತುಂಬಿದ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡುತಿದ್ದರು.
“ನಾವು ನಮ್ಮ ಹೊಟ್ಟೆ ಯೊಳಗೆ ತುರುಕುತ್ತಿರುವ ಎಷ್ಟೂಂದು ಪದಾರ್ಥಗಳು ಎಷ್ಟು ಕೆಟ್ಟವೆಂದರೆ ಹೇಳಲಸಾದ್ಯ. ದಿನನಿತ್ಯ ಸೇವಿಸುವ ತಂಪು ಪಾನೀಯಗಳು, ಕರಿದ ಪದಾರ್ಥಗಳು, ಕೊನೆಗೆ ನಾವು ಕುಡಿಯುವ ನೀರಿನಲ್ಲಿರುವ ಕ್ರಿಮಿಗಳು ನಮ್ಮ ಆರೋಗ್ಯವನ್ನು ಹಾಳು ಮಾಡುತ್ತವೆ…. ಆದರೆ ಎಲ್ಲಕ್ಕಿಂತ ಹೆಚ್ಚು ಹಾನಿಕರವಾದ, ನಾವೆಲ್ಲರೂ ತಿಂದಿರಬಹುದಾದ ಅಥವಾ ಮುಂದೆ ತಿನ್ನಬಹುದಾದ, ಹಾಗು ತಿಂದು ಬಹಳ ವರ್ಷಗಳಾದ ಮೇಲೂ ನಮ್ಮನ್ನು ಕಷ್ಟ, ನೋವಿಗೆ ಗುರಿ ಪಡಿಸುವಂಥಾ ಆಹಾರ ಯಾವುದಿರಬಹುದು ಎಂದು ಯಾರಾದರು ಹೇಳಬಲ್ಲಿರಾ?”
ಸಭೆಯಲ್ಲಿದ್ದವರಿಗೆ ಪ್ರಶ್ನೆ ಕೇಳಿ, ವೈದ್ಯರು ಮಾತು ನಿಲ್ಲಿಸಿದರು.
ಸಭೆ ಒಮ್ಮೆಲೇ ನಿಶ್ಯಭ್ದವಾಯಿತು, ಎಲ್ಲರೂ ಮೌನವಾಗಿದ್ದರು. ಮುಂದೆ ಕುಳಿತಿದ್ದ ವಯೋವೃದ್ದರೊಬ್ಬರು ಮೆಲ್ಲನೆ ತಮ್ಮ ಕೈ ಮೇಲೆತ್ತಿದರು. ಸಭೆಯಲ್ಲಿದ್ದ ಎಲ್ಲರ ಗಮನ ಅ ವಯೋವೃದ್ದರ ಕಡೆಗೆ ಹರಿಯಿತು.
ವಯೋವೃದ್ಧರು ತಮ್ಮ ಮೆದುವಾದ ಧ್ವನಿಯಲ್ಲಿ ಹೇಳಿದರು “ವೆಡ್ಡಿಂಗ್ ಕೇಕ್“!

ವಿ.ಸೂ. ವೈದ್ಯರ ಪ್ರಶ್ನೆಗೆ ಸರಿಯಾದ(!) ಉತ್ತರ ಇನ್ನೂ ಸಿಕ್ಕಿಲ್ಲ, ನಿಮಗೇನಾದರೂ ತಿಳಿದಿದ್ದರೆ ದಯವಿಟ್ಟು ತಿಳಿಸಿ ಪುಣ್ಯ ಕಟ್ಟಿಕೊಳ್ಳಿ.

Written by balaglobal

May 27, 2009 at 3:16 pm

ಜ್ಯೋತಿಷಿ ಸುಸ್ತೂ!

with 12 comments

ಜ್ಯೋತಿಶ್ಯಾಲಯ, ನಿಮ್ಮ ಭವಿಷ್ಯವನ್ನು ನಿಖರವಾಗಿ ತಿಳಿಯಲು ಒಮ್ಮೆ ಭೇಟಿ ಕೊಡಿ, ಬೋರ್ಡನ್ನು ಓದಿದ ಮಹಿಳೆಯೊಬ್ಬರು, ಅತ್ತಿತ್ತ ತಿರುಗಿ ಯಾರು ಗಮನಿಸುತ್ತಿಲ್ಲವೆಂದು ಖಚಿತ ಪಡಿಸಿಕೊಂಡು, ಒಳಗೆ ಬಂದರು. ಖಾಲಿಯಿದ್ದ ಕುರ್ಚಿಯೊಂದರಲ್ಲಿ ಮುದುಡಿ ಕುಳಿತರು. ಗಿರಾಕಿ ಬಂದ ಸುಳಿವನ್ನು ಪಡೆದ ಜ್ಯೋತಿಷಿ, ಬಾಗಿಲಿಗೆ ಹಾಕಿದ ಪರದೆ ಸರಿಸಿ, ಮುಖ ಹೊರಗೆ ಹಾಕಿ, “ಒಳಗೆ ಬನ್ನಿ” ಎಂಬ ಆಹ್ವಾನವಿತ್ತರು.

ಹೆಂಗಸು ಸಂಕೋಚದಿಂದ, ತಲೆಯ ಮೇಲಿನ ಸೆರಗನ್ನು ಸರಿ ಪಡಿಸಿಕೊಂಡು, ಒಳಹೋದರು. ತಮ್ಮ ಜಾತಕವನ್ನು ಜ್ಯೋತಿಷಿ ಕೈಗಿತ್ತು, ತಲೆ ತಗ್ಗಿಸಿ ಯಾವುದೋ ಯೋಚನೆಯಲ್ಲಿ ಮಗ್ನರಾದರು. ಜಾತಕವನ್ನು ತುಂಬಾ ಹೊತ್ತು ಪರಿಶೀಲಿಸಿ ನಂತರ, ಜ್ಯೋತಿಷಿ ಭಾರವಾದ ಧನಿಯಲ್ಲಿ ಹೇಳಿದರು, “ಅಮ್ಮಾ, ಕೆಟ್ಟ ಸುದ್ದಿಯೊಂದಿದೆ, ಇನ್ನು ಕೆಲವೇ ತಿಂಗಳುಗಳಲ್ಲಿ ನಿಮ್ಮ ಗಂಡ ಧಾರುಣವಾದ ಸಾವನ್ನಪ್ಪಲಿದ್ದಾರೆ”

ಜ್ಯೋತಿಷಿ ಮಾತಿನಿಂದ ಆಘಾತಕ್ಕೆ ಒಳಗಾದ ಹೆಂಗಸು, ನಿಧಾನವಾಗಿ ಚೇತರಿಸಿಕೊಂಡು, ನಿಡಿದಾದ ಉಸಿರನ್ನು ಒಳತೆಗೆದುಕೊಂಡು, ಧ್ವನಿ ಸರಿಮಾಡಿಕೊಂಡು, ಖಚಿತವಾದ ಧ್ವನಿಯಲ್ಲಿ ಕೇಳಿದರು, “ನಾನು ಕೊಲೆಯ ಅಪರಾಧದಿಂದ ಮುಕ್ತಳಾಗುವೆನಾ?”

ಆಕೆಯ ಮಾತು ಕೇಳಿ ಜ್ಯೋತಿಷಿ ಸುಸ್ತೂ! ಇನ್ನೇನು ಮೂರ್ಚೆ ಹೋಗುವುದೊಂದು ಬಾಕಿ!

Written by balaglobal

April 23, 2009 at 1:50 pm

ಸೇಮ್ ಟಿಂಗ್

with 3 comments

Walking through Chinatown, a tourist is fascinated with all the Chinese restaurants, shops, signs and banners. He turns a corner and sees a building with the sign, “Hans Olaffsen’s Laundry.”

“Hans Olaffsen?”, he muses. “How in hell does that fit in here?” So he walks into the shop and sees an old Chinese gentleman behind the counter.

The tourist asks, “How did this place get a name like ‘Hans Olaffsen’s Laundry?’” The old man answers, “Is name of owner.”

The tourist asks, “Well, who and where is the owner?” “Me… is right here,” replies the old man.

“You? How did you ever get a name like Hans Olaffsen?”

“Is simple,” says the old man. “Many, many year ago when come to this country, was stand in line at Documentation Center. Man in front was big blonde Swede. Lady look at him and go, ‘What your name?’ He say,’Hans Olaffsen.’ Then she look at me and go, ‘What your name?’”

“I say Sem Ting.”

ಈ ಜೋಕನ್ನು ಕನ್ನಡೀಕರಿಸಿದರೆ ಮೂಲದ ಅರ್ಥ ಬರಲಾರದೆನ್ನಿಸಿತು.

Written by balaglobal

March 31, 2009 at 1:31 pm

ಕಾರಣ?

with 3 comments

ಗಂಡ ಹೆಂಡತಿಯರ ನಡುವೆ ನಡೆದ ಸಂಭಾಷಣೆ:

ಹೆಂಡತಿ: ನನ್ನ ಕಂಡರೆ ನಿಮಗೆ ನಿಜವಾಗಲೂ ಭಯನಾ

ಗಂಡ: ಛೆ ಛೆ !  ಭಯ ಅಲ್ವೇ ಭಕ್ತಿ !

ಹೆಂಡತಿ: ತಮಾಷೆ ಸಾಕು, ಸೀರಿಯಸ್ಸಾಗಿ ಹೇಳ್ರಿ, ನಿಮಗೆ ನನ್ನ ಕಂಡರೆ ಭಯ ಇದ್ದರೆ, ನೀವು ನನ್ನ ಡೈವೋರ್ಸ್ ಮಾಡಿ ಬೇರೆ ಯಾರನ್ನಾದರು ಯಾಕೆ ಮದುವೆ ಆಗಬಾರದು?

ಗಂಡ: ಎಲ್ಲಾದರೂ ಉಂಟೆ ? ನನ್ನ ಪ್ರಾಣ ಹೋದರು ಸರಿ ಆದರೆ ಇನ್ನೊಬ್ಬಳನ್ನು ಮಾತ್ರಾ ಮದುವೆಯಾಗಲಾರೆ !

ಹೆಂಡತಿ: ಕಾರಣ?

ಗಂಡ: ಮುಂದೆ ಬರೋಳು ನಿನಗಿಂತಾ ಹೆಚ್ಚಿನ ಟೆರರಿಸ್ಟ ಆಗಿರಲ್ಲ ಅಂತ ಏನು ಗ್ಯಾರಂಟಿ. ಅದೂ ಅಲ್ಲದೆ ಗುರುತು ಪರಿಚಯ ಇಲ್ಲದೆ ಇರೋ ದೇವತೆಗಿಂತಾ, ಚೆನ್ನಾಗಿ ಪರಿಚಯ ಇರೋ ದೆವ್ವಾನೆ ಮೇಲಲ್ಲವೇ ?

ಮುಂದೆ ಏನಾಯಿತು ಎಂಬುದನ್ನು ನಿಮ್ಮ ಕಲ್ಪನೆಗೆ ಬಿಟ್ಟಿದ್ದೇನೆ  !

Written by balaglobal

March 6, 2009 at 1:30 pm

ನನಗೇನು ಬೇಕು

with 6 comments

ಪ್ರಖ್ಯಾತ ಕನ್ನಡದ ಗಾಯಕನೊಬ್ಬನ ಕಛೇರಿಯಿಂದ ಜನ ಹೊರಬರುತಿದ್ದಾರೆ, ಅಲ್ಲಿ ನಡೆಯುವ ಒಂದು ಸಂಭಾಷಣೆ.

ಒಬ್ಬ: ಏನ್ ಸಕತ್ತಾಗಿತ್ತಲ್ವಾ

ಇನ್ನೊಬ್ಬ: ಎಲ್ ಸಕತ್ತಾಗಿತ್ರಿ? ನಾನು ಇಷ್ಟ ಪಟ್ಟು ಕಳಿಸಿದ ಒಂದು ಹಾಡ್ನೂ ಹಾಡಲಿಲ್ಲ, ಜೊತೆಗೆ ಬರೀ ತೆಲುಗು ತಮಿಳು ಹಿಂದಿ ಹಾಡನ್ನೇ ಜಾಸ್ತಿ ಹಾಡಿ,  ಒಂದೋ ಎರಡೋ ಕನ್ನಡ ಹಾಡನ್ನ ಹಾಡಿದ, ನನಗ್ಯಾಕೋ ಒಂಚೂರು ಇಷ್ಟ ಆಗಲಿಲ್ಲ. ಇನ್ನು  ಮುಂದೆ ಈ ಗಾಯಕನ ಕಚೇರಿಯಿದೆ ಎಂದರೆ ಆ ಕಡೆ ತಲೆ ಹಾಕಿ ಕೂಡ ಮಲಗೋದಿಲ್ಲ.

ಒಬ್ಬ: ನೀವು ಹೇಳೋದು ಸರಿ, ಇವನು ಕನ್ನಡದ ಹಾಡನ್ನ ಹಾಡೋದು ಬಿಟ್ಟು ಬೇರೆ ಭಾಷೆ ಹಾಡನ್ನೇ ಜಾಸ್ತಿ ಹಾಡಿದ, ಹೆಸರಿಗೆ ಮಾತ್ರ ಇದು ಕನ್ನಡ ಸಂಗೀತ ಕಛೇರಿ.

ಇನ್ನೊಬ್ಬ: ಅಲ್ಲಾರಿ, ಏನೋ ಕನ್ನಡ ಹಾಡನ್ನ ಕೇಳೋಣ ಅಂತ, ಅಷ್ಟು ದುಡ್ಡು ಕೊಟ್ಟು, ಅಷ್ಟು ದೂರದಿಂದ ಬಂದರೆ, ಇಲ್ಲಿ ನೋಡಿ ಪರಿಸ್ಥಿತಿ ಹೇಗಿದೆ ಅಂತಾ? ತಣ್ಣಗೆ ಮನೇಲೆ ಕೂತು ಕನ್ನಡ ಕ್ಯಾಸೆಟ್ ಕೇಳಿಕೊಂಡಿರಬಹುದಿತ್ತು.

ಒಬ್ಬ: ನೀವು ಹೇಳೋದು ನಿಜ, ನಾನು ಬೇರೆ ನನ್ನ ಹೆಂಡತಿಗೆ ಹೇಳದೆ ಬಂದಿದೀನಿ!

ಇನ್ನೊಬ್ಬ: ಸರಿ ಮತ್ತೆ ಸಿಗೋಣ.

ಇನ್ನೊಬ್ಬನ ನಿರ್ಗಮನ ಮತ್ತೊಬ್ಬನ ಆಗಮನ

ಮತ್ತೊಬ್ಬ: ಏನ್ ಸೂಪರ್ರಾಗಿತ್ತಲ್ವ ಕಚೇರಿ, ನೀವು ಏನೇ ಹೇಳಿ, ಒಂದೊಂದು ಹಾಡು ಕಿವಿಗಳಿಗೆ ಇಂಪು ಅಂದರೇನು ಎಂಬುದರ ಪರಿಚಯ ಮಾಡಿಕೊಟ್ಟವು. ಮೊದಲಬಾರಿಗೆ ರಸಾನುಭವದ ಅನುಭವವಾಯಿತು. ಇನ್ನು ಮುಂದೆ ಈ ಗಾಯಕನ ಕಛೇರಿಯನ್ನು ಎಂದೂ ತಪ್ಪಿಸಿಕೊಳ್ಳುವುದಿಲ್ಲ.

ಒಬ್ಬ: ಹಂಗಂತೀರಾ , ನನಗೂ ಹಾಡುಗಳು ಇಷ್ಟಾ ಆದವು,  ಆದರೆ ಈತ ಬರೀ ಬೇರೆ ಭಾಷೆ ಹಾಡುಗಳನ್ನೇ ಜಾಸ್ತಿ ಹಾಡಿದ ಅನ್ನಿಸ್ಲಿಲ್ವೆ.

ಮತ್ತೊಬ್ಬ: ರಸಾನುಭಕ್ಕೆ ಭಾಷೆಯ ಬೇಲಿಯೆಲ್ಲಿರುತ್ತೆ, ಹಾಡು ಹಾಡೇ, ಸ್ವರಗಳ ಏರಿಳಿತ, ಮಾಧುರ್ಯ ಮುಖ್ಯವಲ್ಲವೆ. ಗಾಯನದಲ್ಲಿ ಭಾಷೆಯ ಪಾತ್ರ ಗೌಣ ಎಂಬುದು ನನ್ನ ಅಭಿಪ್ರಾಯ.

ಒಬ್ಬ: ನೀವು ಹೇಳೋದು ನಿಜ, ಅಂತೂ ನನ್ನ ಹೆಂಡತಿಗೆ ಹೇಳದೆ ಬಂದಿದ್ದು ಸಾರ್ಥಕ ಆಯಿತು.

ಮತ್ತೊಬ್ಬ: ಸರಿ ಮುಂದಿನ ಕಛೇರಿಯಲ್ಲಿ ಮತ್ತೆ ಭೇಟಿಯಾಗೋಣ.

ಮತ್ತೊಬ್ಬನ ನಿರ್ಗಮನ

ಒಬ್ಬ: ಸಧ್ಯ ಇವತ್ತು ನಾನು ಬಚಾವ್, ನಾನಂತೂ ಕಛೇರಿ ಶುರುವಾದಾಗಿನಿಂದ ಮುಗಿಯುವವರೆಗೂ ಕಛೇರಿಯಲ್ಲಿದ್ದವರನ್ನೆಲ್ಲ ಸರಿಯಾಗಿ ಗಮನಿಸುತ್ತಿದ್ದೆ, ನನ್ನ ಹೆಂಡತಿಯ ಗೆಳತಿಯರಾರು ಕಂಡಿರಲಿಲ್ಲ !

Written by balaglobal

March 4, 2009 at 1:54 pm