Archive for the ‘ಬದುಕು’ Category
ಲೆಕ್ಕಾಚಾರ
I have been through some terrible things in my life, some of which actually happened.
- Mark Twain
ನನ್ನ ಜೀವನದಲ್ಲಿ ಅನುಭವಿಸಿದ
ಕೆಟ್ಟ ಘಟನೆಗಳು ಹಲವು
ಆದರೆ ನಿಜವಾಗಿಯು ನಡೆದದ್ದು
ಅವುಗಳಲ್ಲಿ ಕೆಲವೇ ಕೆಲವು
ಮಗುವಿನ ಮನಸ್ಸು
Man is most nearly himself when he achieves the seriousness of a child at play.
- Heraclitus
ನಾನು
ನನ್ನ ತನವನ್ನು
ಅರಿಯಲು ಬೇಕು
ಆಟದಲ್ಲಿ
ಮುಳುಗಿರುವ ಎಳೆಯ
ಮಗುವಿನ ಮನಸ್ಸು
ಕಟ್ಟದಿರು ಹಲವನ್ನು
You are in love with me,
I shall make you perplexed
Do not build much,
for I intend to have you in ruins.
If you build two hundred houses in a manner that the bees do,
I shall make you as homeless as a fly.
If you are the mount Qaf in stability,
I shall make you whirl like a millstone.
-Rumi
ಕಟ್ಟದಿರು ಹಲವನ್ನು,
ನಿನ್ನನ್ನು ಅವಶೇಷಗಳ ನಡುವೆ
ಇರಿಸಬೇಕೆಂದಿರುವೆ.
ಜೇನಿನಂತೆ ಹಲವಾರು ಮನೆ
ಕಟ್ಟುವಿಯಾದರೆ,
ನಿನ್ನನ್ನು ಮನೆಯಿಲ್ಲದಾ
ನೊಣವನ್ನಾಗಿಸುವೆ.
ಸಹ್ಯಾದ್ರಿಯಂತೆ
ಅಚಲವಾಗಿದ್ದರೆ,
ನಿನ್ನನ್ನು ಗಿರ್ರನೆ ತಿರುಗುವ
ರಾಗಿಕಲ್ಲನ್ನಾಗಿಸುವೆ.
ಇನ್ನಿಲ್ಲದಂತೆ ನನ್ನ ಪ್ರೀತಿಸಿದರೆ
ನಿನ್ನನ್ನು ಕಂಗಾಲಾಗಿಸುವೆ
ಸೂಸನ್ ಬೊಯ್ಲ್ – Susan Boyle
೪೭ ವರ್ಷ ವಯಸ್ಸಿನ, ಅತಿ ಸಾಮಾನ್ಯಳಂತೆ ಕಾಣುವ ಸೂಸನ್ ಬೊಯ್ಲ್, ಯಾರಿಗೂ ನಂಬಲಸಾದ್ಯವದದ್ದನ್ನು ಸಾಧಿಸಿದ್ದಾರೆ. ಆಕೆ ಹಾಡಿದ “I Dreamed a Dream (from Les Misérables)” ಹಾಡು ಅದ್ಭುತವಾಗಿದೆ. ಆಕೆಯನ್ನು ನೀವಿನ್ನು ನೋಡಿರದಿದ್ದರೆ ಇಲ್ಲಿ ನೋಡಬಹುದು
ರೆಕ್ಕೆ ಬಿಚ್ಚಿ ಹಾರು
You were born with potential
You were born with goodness and trust
You were born with ideals and dreams
You were born with greatness
You were born with wings
You are not meant for crawling, so don’t.
You have wings
Learn to use them,and fly.
-Jalaluddin Rumi
ಸುಪ್ತವಾದ ಸಾಮರ್ಥ್ಯ ಸಹಜ
ಒಳ್ಳೆಯತನ ಹಾಗು ನಂಬಿಕೆ ಸಹಜ
ಆದರ್ಶ ಹಾಗು ಕನಸು ಸಹಜ
ಶ್ರೇಷ್ಠತೆ ಸಹಜ
ರೆಕ್ಕೆಗಳೂ ಸಹಜವಾಗಿರುವಲ್ಲಿ
ಸಹಜವಲ್ಲದ ತೆವಳುವಿಕೆ ಏಕೆ,
ರೆಕ್ಕೆ ಬಿಚ್ಚಿ ಹಾರುವುದನ್ನು ಕಲಿ