ಕುರ್ಚಿ ಎಂದರೇನು
ತತ್ವಶಾಸ್ತ್ರದ ಪ್ರಾಧ್ಯಾಪಕರೊಬ್ಬರು, ಆ ವರ್ಷದ ಕೊನೆಯ ಕ್ಲಾಸ್ ತೆಗೆದುಕೊಳ್ಳಲು ಶಾಲೆಗೆ ಬಂದರು. ತಾವು ಕುಳಿತುಕೊಳ್ಳುತಿದ್ದ ಕುರ್ಚಿಯನ್ನು ಮೇಜಿನ ಮೇಲೆ ಎಲ್ಲರಿಗೂ ಕಾಣುವ ಹಾಗೆ ಇಟ್ಟು, “ಪ್ರೀತಿಯ ವಿದ್ಯಾರ್ಥಿಗಳೇ, ಇಷ್ಟು ದಿನ ನನ್ನ ಪಾಠವನ್ನು ಕೇಳಿಸಿಕೊಂಡಿದ್ದೀರಿ, ಅದೆಲ್ಲವನ್ನು ಬಳಸಿಕೊಂಡು, ಈ ಕುರ್ಚಿ ಇಲ್ಲಿ ಇಲ್ಲಾ ಎಂದು ನಿರೂಪಿಸಿ”, ಎಂದರು.
ಸರಿ ಎಲ್ಲರು ಉತ್ತರ ಬರೆಯಲು ಪ್ರಾರಂಭಿಸಿದರು. ಕೆಲವರಂತೂ ಕಾದಂಬರಿ ಬರೆಯುವ ಮಟ್ಟಕ್ಕೆ ಹೋಗುವಂತೆ ಕಾಣುತಿದ್ದರು. ಆದರೆ ಗಣಪತಿ ಮಾತ್ರ ಒಂದೇ ನಿಮಿಷದಲ್ಲಿ ಉತ್ತರ ಬರೆದು ಕೊಟ್ಟು ಹೊರಟುಹೋದ.
ಆ ವರ್ಷದ ತತ್ವಶಾಸ್ತ್ರದಲ್ಲಿ ಹೆಚ್ಚಿನ ಅಂಕ ಗಣಪತಿಗೆ ದೊರಕಿದ್ದು ಎಲ್ಲ ವಿಧ್ಯಾರ್ಥಿಗಳಿಗೂ ಆಶ್ಚರ್ಯ. ನಾವೆಲ್ಲ ಪುಟಗಟ್ಟಲೆ ಬರೆದಿದ್ದರೂ ಗಣಪತಿಗೆ ಹೆಚ್ಚಿನ ಅಂಕ ಹೇಗೆ ಎಂದು ಪ್ರಾಧ್ಯಾಪಕರನ್ನು ಕೇಳಿದಾಗ. ಪ್ರಾಧ್ಯಾಪಕರು ಗಣಪತಿಯ ಉತ್ತರ ಪತ್ರಿಕೆಯನ್ನು ತೋರಿಸಿದರು.
ಅದರಲ್ಲಿ “ಕುರ್ಚಿ ಎಂದರೇನು?” ಎಂದಷ್ಟೇ ಬರೆದಿದ್ದ ಗಣಪತಿ
Categories: ಬದುಕು, ಹಾಸ್ಯ, ಹರಟೆ