ವೇಗಮಿತಿ ಹಾಗು ರಸ್ತೆಯ ಹೆಸರು
ರಸ್ತೆಯಲ್ಲಿ ಅತಿ ನಿದಾನವಾಗಿ ಚಲಿಸುತಿದ್ದ ಕಾರನ್ನು ನಿಲ್ಲಿಸಿದ ಪೊಲೀಸನೊಬ್ಬ ಕಾರಿನ ಬಳಿ ಬಂದು ಐದು ವಯಸ್ಸಾದ ಮಹಿಳೆಯರು ಕಾರಿನಲ್ಲಿದ್ದುದನ್ನು ನೋಡಿ ನಂತರ ಕಾರಿನ ಚಾಲಕಿಯನ್ನು ಉದ್ದೇಶಿಸಿ “ನೀವು ನಿಗಧಿ ಪಡಿಸಿದ ವೇಗಕ್ಕಿಂತಾ ತುಂಬಾ ಕಡಿಮೆ ವೇಗದಲ್ಲಿ ಚಲಿಸುತಿದ್ದೀರಿ” ಎಂದ.
ಅದಕ್ಕೆ ಚಾಲಕಿ, “ಹಾಗೆನಿಲ್ಲವಲ್ಲ, ಈಗ ತಾನೇ ವೇಗಮಿತಿ ೨೨ ಎಂಬುದನ್ನು ನೋಡಿದೆ ಹಾಗಾಗಿ ೨೦ ಮೈಲಿ ವೇಗದಲ್ಲಿ ಚಲಿಸುತಿದ್ದೇನೆ” ಎಂದಳು.
ಪೋಲಿಸನು ನಗುತ್ತ “ನೀವು ನೋಡಿದ್ದು ವೇಗಮಿತಿಯಲ್ಲ ಅದು ರಸ್ತೆಯ ಹೆಸರು” ಎಂದು ಹೇಳುವಾಗ ಕಾರಿನ ಹಿಂಬದಿಯಲ್ಲಿ ಕುಳಿತಿದ್ದ ಮೂವರು ಮಹಿಳೆಯರು ಆಗ ತಾನೇ ಯಾವುದೋ ಭೂತವನ್ನು ನೋಡಿದವರಂತೆ ಹೆದರಿ ಬಿಳಚಿಕೊಂಡಿರುವುದನ್ನು ನೋಡಿ, ಅವರ ಕ್ಷೇಮದ ಬಗ್ಗೆ ಚಾಲಕಿಯನ್ನು ವಿಚಾರಿಸಿದ.
ಅದಕ್ಕೆ ಚಾಲಕಿ “ಅವರ ಚಿಂತೆ ಬಿಡಿ, ಇನ್ನು ಸ್ವಲ್ಪ ಸಮಯದಲ್ಲಿ ಸರಿ ಹೋಗುತ್ತಾರೆ, ನಾವು ಈಗ ತಾನೇ ರಸ್ತೆ ೧೧೮ ರಿಂದ ಹೊರಬಿದ್ದು ಈ ರಸ್ತೆಯನ್ನು ಪ್ರವೇಶಿಸಿದೆವು” ಎಂದು ಉತ್ತರಿಸಿದಳು.
Beautiful!
ಸುನಾಥ
July 23, 2009 at 2:01 pm
ಕಾಕ,
ಧನ್ಯವಾದಗಳು
balaglobal
July 23, 2009 at 8:02 pm