ಇನ್ನೂ ಏನೂ ಸಾಧಿಸಿಲ್ಲಾ
ಏನೂ ಸಾಧಿಸಿಲ್ಲಾ
ಇಷ್ಟ್ರೊಳಗೇ
ಏನಾದ್ರೂ ಸಾಧಿಸಬೇಕಿತ್ತು, ಆದ್ರೆ
ಇನ್ನೂ ಏನೂ ಸಾಧಿಸಿಲ್ಲಾ
ಸಾಧಿಸ್ಬೇಕು ಅನ್ನೊದು
ಸಾವಿರಾರಿವೆ
ಆದ್ರೆ ಟೈಮಿಲ್ಲಾ ನೋಡಿ
ಹಾಗಾಗಿ….
ಇನ್ನೂ ಏನೂ ಸಾಧಿಸಿಲ್ಲಾ
ಏನ್ಬೇಕಾದ್ರೂ ಸಾಧಿಸೋ
ಶಕ್ತಿಯೆನೋ ಇದೇ, ಆದ್ರೆ
ಯಾವುದ್ನ ಮೊದಲ್
ಸಾಧಿಸ್ಬೇಕು
ಅನ್ನೊದೇ ಗೊಂದಲ ನೋಡಿ
ಹಾಗಾಗಿ….
ಇನ್ನೂ ಏನೂ ಸಾಧಿಸಿಲ್ಲಾ
ನನಗಿಂತಾ ದೊಡ್ಡೋರನ್ನ
ನೋಡಿದ್ರೆ, ಸಾಧಿಸೊಕೆ
ಬಹಳ ಸಮಯ ಇದೆ ಅನ್ಸತ್ತೆ
ಹಾಗಾಗಿ….
ಇನ್ನೂ ಏನೂ ಸಾಧಿಸಿಲ್ಲಾ
ನಿಮ್ಮತ್ರ ಸುಳ್ಯಾಕ್ಹೇಳ್ಳಿ
ಇದುವರೆಗೂ
ಏನೂ ಸಾಧಿಸ್ಬೇಕು
ಅನ್ಕೊಂಡಿರ್ಲಿಲ್ಲಾ
ಹಾಗಾಗಿ….
ಏನನ್ನೂ ಸಾಧಿಸಿಲ್ಲಾ
ಆದ್ರೂ ಮನಸ್ನೊಳಗೆ
ಒಂದು ಹುಳ ಹೇಳ್ತಿರುತ್ತೆ
ಇಷ್ಟ್ರೊಳಗೇ
ಏನಾದ್ರೂ ಸಾಧಿಸಬೇಕಿತ್ತು….
ಅಹಹಾ! ಚೆನ್ನಾಗಿದೆ ಕವನ!
ಸುನಾಥ
June 21, 2009 at 5:31 am
ಕಾಕ,
ಪ್ರತಿಕ್ರಿಯೆಗೆ ಧನ್ಯವಾದಗಳು.
balaglobal
June 24, 2009 at 12:51 pm
ವ್ಯರ್ಥ ಪ್ರಲಾಪ, ಚೆನ್ನಾಗಿದೆ
PaLa
June 25, 2009 at 7:13 am
ಪಾಲ,
ನಿಮ್ಮ ಪ್ರತಿಕ್ರಿಯೆ ಮೆಚ್ಚುಗೆಯಾಯಿತು
balaglobal
June 26, 2009 at 10:45 am
>>ಆದ್ರೂ ಮನಸ್ನೊಳಗೆ
ಒಂದು ಹುಳ ಹೇಳ್ತಿರುತ್ತೆ
ಹುಳ ಅಲ್ಲು ಹೆಬ್ಬಾವು.
ಅಂದಹಾಗೆ, ಚುಟುಕ ಚೆನ್ನಾಗಿದೆ.
Anil Ramesh
July 16, 2009 at 7:52 am
ಅನಿಲ್,
ಹುಳುವನ್ನ ಹೆಬ್ಬಾವಗಿಸಿದ್ದಕ್ಕೆ ಧನ್ಯವಾದಗಳು
balaglobal
July 16, 2009 at 12:22 pm