ನೀರು

ಅಂದಿನಿಂದ ಎಂದಿಂದಿಗೂ
ಇರುವುದೊಂದೇ ನೀರು
ಮೇಲೆ ಹೋಗಿ
ಕೆಳಗೆ ಸುರಿದು
ಜೀವವನ್ನು ಪೋಷಿಸುತ್ತಿರುವ
ನೀರು
ಅಂದಿಗೂ ಎಂದಿಗೂ
ಹೆಚ್ ಟು ಓನೇ

ನಮ್ಮ ಪೂರ್ವಜರು
ಬಳಸಿದ ಅದೇ ನೀರನ್ನೇ
ನಾವು ಬಳಸುತ್ತಿರುವುದು

ಸನಾತನ ಪ್ರಾಣಿಯೊಂದು
ಕುಡಿದು ಬಿಟ್ಟ ನೀರನ್ನೇ
ನಾವು ಕುಡಿಯುತ್ತಿರುವುದು

ನಮ್ಮೊಡನಿಲ್ಲದೊಂದು ಗಿಡದೊಳಗೆ
ಅಂದು ಹರಿದ ನೀರೇ
ಇಂದು ನಮ್ಮಲ್ಲೂ ಹರಿಯುತ್ತಿರುವುದು

ಅಂದು ಅಲ್ಲಿದ್ದು
ಎಂದೆಂದಿಗೂ ಇಲ್ಲಿರುವ
ನೀರು ಶಾಶ್ವತ
ಜೀವ ನೆಪಮಾತ್ರ

  1. June 17, 2009 at 1:39 pm | #1

    To use your articles in our quarterly magazine Namma Dani

  2. balaglobal
    June 17, 2009 at 2:31 pm | #2

    ಪ್ರಶಾಂತ್,
    ಖಂಡಿತವಾಗಿ ‘ನಮ್ಮ ದನಿ’ ಗಾಗಿ ‘ಚಂದನ’ ದಲ್ಲಿರುವ ಯಾವುದೇ ಬರಹವನ್ನು ಬಳಸಿಕೊಳ್ಳಬಹುದು.
    -ಬಾಲಕೃಷ್ಣ

  1. No trackbacks yet.