ನೆನಪು
ಮನುಷ್ಯನ ಬದುಕಿನಲ್ಲಿ ನೆನಪಿನ ಪಾತ್ರ ಬಹಳ ಮುಖ್ಯ. ನಮಗೆ ಯಾವುದು ನೆನಪಿಲ್ಲದೆ ಹೊದರೆ, ಈ ಸಮಾಜದಲ್ಲಿ ಬದುಕುವುದು ಬಹಳ ಕಷ್ಟ. ಅಂದರೆ ನಾವು ನಮ್ಮ ದೈನಂದಿನ ಕಾರ್ಯಗಳನ್ನು ಎಂದಿನಂತೆ ಮಾಡಿಕೊಂಡು ಹೊಗಲು ನೆನಪಿನ ಅವಶ್ಯಕತೆ ಬಹಳ ಇದೆ. ನಮ್ಮ ಮನಸ್ಸಿನ ನೆನಪುಗಳಲ್ಲಿ, ಸವಿನೆನಪುಗಳು ನಮ್ಮನ್ನು ಮುದಗೋಳಿಸಿದರೆ, ಕಹಿನೆನಪುಗಳು ನಮ್ಮನ್ನು ಹಿಂಸಿಸುತ್ತವೆ. ನಮ್ಮ ಸಿನೆಮಾ ಗೀತೆ ಹೇಳುವಂತೆ, ಸವಿನೆನಪುಗಳು ಬೇಕು ಸವಿಯಲೀ ಬದುಕು, ಕಹಿನೆನಪು ಸಾಕೊಂದು ಮಾಸಲೀ ಬದುಕು, ಬೆಂಬಿಡದ ಆ ನೆನಪು ಮರುಕಳಿಸಿ ದಿನವೆಲ್ಲಾ ಕಾಡುತಿದೆ ಬದುಕು. ಹಾಗೆಯೆ, ಪ್ರೇ ಯಸಿಯ ನೆನಪು ಪ್ರಿಯಕರನ ಎದೆಯಲ್ಲಿ ಸದಾ ಇದ್ದು ಅಕೆಯನ್ನು ನೋಡಬೇಕೆನಿಸ್ಸುವ ಈ ಗೀತೆ.. ನಿನದೇ ನೆನಪು ದಿನವೂ ಮನದಲ್ಲಿ ನೋಡುವ ಆಸೆಯು ತುಂಬಿದೆ ನನ್ನಲಿ..
ನಮ್ಮ ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೇಗಳೂ ನಮ್ಮ ಮೆದುಳಿನ ಹಾರ್ಡ್ ಡಿಸ್ಕ್ ನಲ್ಲಿ ಮುದ್ರಿತಗೊಂಡಿದ್ದು, ನಮಗೆ ಬೇರೆ ಕೆಲಸವಿಲ್ಲದಿದ್ಡಾಗ, ನೆನಪುಗಳನ್ನು ಹೊರತೆಗೆದು ಆನಂದವನ್ನೊ, ಆತಂಕವನ್ನೊ ಹೊಂದುತ್ತೇವೆ. ನಮ್ಮ ನಿಸಾರ್ ಅಹ್ಮದ್ ರವರ, ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೇವವ ಹೂಡಿ ಬರುತಿದೆ ಮತ್ತೇ ಹಳೆಯ ನೆನಪು, ಗೀತೆ ನೆನಪು ಮನುಷ್ಯನ ಮನಸ್ಸಿನಲ್ಲಿ ಉಂಟು ಮಾಡುವ ತಲ್ಲಣಗಳನ್ನು ಅತ್ಯುತ್ತಮವಾಗಿ ವಿವರಿಸುತ್ತದೆ.
ನಾವು ಮಾಡುವ ಪ್ರತಿಯೊಂದು ಕ್ರಿಯಯ ಹಿಂದೆಯು ನೆನಪಿನ ಮುದ್ರೆಯಿರುತ್ತದೆ. ಹಾಗೆ ನೋಡಿದರೆ, ನಾವು ಮಾಡುವ ಪ್ರತಿಯೊಂದು ಕ್ರಿಯೆಯು, ನಮ್ಮ ಮನಸ್ಸಿನಲ್ಲಿ ನೆನಪಾಗಿ ಉಳಿಯುತ್ತವೆ. ಮುಂದೆ ನಾವು ಅದೇ ಕ್ರಿಯೆಯನ್ನು ಮಾಡಬೇಕಾದಾಗ, ಮನಸ್ಸು ನೆನಪಿನಲ್ಲಿರು ಹಳೆಯ ಕ್ರಿಯಯನ್ನು ನಿರ್ವಹಿಸಿದಂತೆ ಈಗಲೂ ಅದೇರೀತಿ ನಿರ್ವಹಿಸುತ್ತದೆ. ಅಂದರೆ ನಮ್ಮ ದೈನಂದಿನ ಕಾರ್ಯಗಳಲ್ಲಿ ಬಹುಪಾಲಿನ ಕ್ರಿಯೆಗಳನ್ನು ಮನಸ್ಸು ನೆನೆಪಿನ ಅಧಾರದಿಂದ ನಿರ್ವಹಿಸುತ್ತಾ ಹೊಗುತ್ತದೆ. ಒಮ್ಮೆ ಸೈಕಲ್ ಕಲಿತಮೇಲೆ, ನಮ್ಮ ಜೀವಮಾನ ಪೂರ್ತಿ ಅದನ್ನು ಮರೆಯುವುದಿಲ್ಲ. ಅಷ್ಟೆ ಅಲ್ಲಾ, ಒಮ್ಮೆ ಕಲಿತನಂತರ, ನಮ್ಮ ಅರಿವಿಗೇ ಬಾರದಂತೆ ಈ ಕ್ರಿಯೆಗಳು ನಡೆಯುತ್ತಿರುತ್ತವೆ. ನಾವು ಇನ್ಯಾವುದೊ ಯೊಚನೆಯಲ್ಲಿ ಮುಳಿಗಿದ್ದರು, ನಾವು ಹೊಗಬೇಕಾದ ಕಡೆ ಸೈಕಲ್ ನಡೆಸುತ್ತಿರುತೇವೆ. ನಮಗೆ ಅರಿವು ಬಂದಾಗಿನಿಂದ, ಮಾಡಿದ ಪ್ರತಿಯೊಂದು ಕ್ರಿಯೆಯನ್ನೂ, ಅದು ಒಳ್ಳೆಯದೊ ಅಥವ ಕೆಟ್ಟದ್ದೊ, ಆ ಕ್ರಿಯೆ ಮತ್ತೆ ಎದುರಾದರೆ ಯಾವ ರೀತಿ ಎದುರಿಸಬೇಕು, ಈ ಎಲ್ಲಾ ಅಂಶಗಳು ಮನಸ್ಸಿನಲ್ಲಿ ಶೇಖರಿಸಿಕೊಂಡು, ನಮ್ಮ ಮನಸ್ಸು ಸಂಕುಚಿತಗೊಳ್ಳುತ್ತಾ ಹೊಗುತ್ತದೆ.
ಈ ನೆನಪಿನ ಹಿಡಿತದಿಂದ ಹೊರಬರುವುದು ಹೇಗೆಂದು ನಾವು ಅರಿತರೆ, ಕಹಿನೆನಪುಗಳು ನಮ್ಮನ್ನು ಹಿಂಸಿಸುವಿದಲ್ಲವೊ ಎನೋ? ಸಂಕುಚಿತಗೊಂಡ ಮನಸ್ಸು ವಿಕಿಸಿತವಾದರೆ ನಾವು ನೆನಪಿನ ಹಿಡಿತದಿಂದ ಹೊರಬರಬಹುದು.